Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಫೋನ್ ನ ಈ ಸೂಕ್ಷ್ಮ ಭಾಗಗಳನ್ನು ಒದ್ದೆ ಮಾಡಬೇಡಿ!

BREAKING : ‘NEET’-UG-2026′ ಪ್ರಶ್ನೆ ಪತ್ರಿಕೆ ಲೀಕ್ ಕೇಸ್ : ಕೇಂದ್ರ ಸರ್ಕಾರ ‘NTA’ ಗೆ ಸುಪ್ರಿಂಕೋರ್ಟ್ ನೋಟಿಸ್ ಜಾರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಮೊಬೈಲ್ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಫೋನ್ ನ ಈ ಸೂಕ್ಷ್ಮ ಭಾಗಗಳನ್ನು ಒದ್ದೆ ಮಾಡಬೇಡಿ!
KARNATAKA

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಫೋನ್ ನ ಈ ಸೂಕ್ಷ್ಮ ಭಾಗಗಳನ್ನು ಒದ್ದೆ ಮಾಡಬೇಡಿ!

By kannadanewsnow57

ಮೊಬೈಲ್ ಫೋನ್ ಮತ್ತು ನೀರು.. ಇವೆರಡೂ ಒಂದಕ್ಕೊಂದು ಶತ್ರುಗಳು ಎಂದರೆ ತಪ್ಪಾಗಲಾರದು. ಒಂದು ಸಣ್ಣ ಹನಿ ನೀರು ಕೂಡ ನಿಮ್ಮ ದುಬಾರಿ ಫೋನನ್ನ ಹಾಳುಗೆಡವಿ, ಜೇಬಿಗೆ ಕತ್ತರಿ ಹಾಕಬಲ್ಲದು. ಸ್ವಲ್ಪ ಜಾಗರೂಕತೆಯಿಂದ ಇದ್ದರೆ ಫೋನ್ಗೆ ಎದುರಾಗುವ ದೊಡ್ಡ ಕಂಟಕವನ್ನು ತಪ್ಪಿಸಬಹುದು. ಹಾಗಾದರೆ ನಿಮ್ಮ ಮೊಬೈಲ್ನ ಯಾವೆಲ್ಲಾ ಭಾಗಗಳಿಗೆ ಅಪ್ಪಿತಪ್ಪಿಯೂ ನೀರು ತಾಗಬಾರದು ಗೊತ್ತಾ? ಮುಂದೆ ಓದಿ…

1. ಚಾರ್ಜಿಂಗ್ ಪೋರ್ಟ್ (Charging Port)
ಫೋನಿನ ಚಾರ್ಜಿಂಗ್ ಪೋರ್ಟ್ ಒಳಗೆ ಆಕಸ್ಮಿಕವಾಗಿಯೂ ಒಂದು ಹನಿ ನೀರು ಹೋಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಇಲ್ಲಿ ನೀರು ಸೇರಿದರೆ ಫೋನ್ನಲ್ಲಿ ಶಾರ್ಟ್ ಸರ್ಕ್ಯೂಟ್ (Short Circuit) ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಫೋನ್ ಚಾರ್ಜ್ ಆಗುವುದಿಲ್ಲ ಮಾತ್ರವಲ್ಲದೆ, ಇಡೀ ಫೋನ್ ಶಾಶ್ವತವಾಗಿ ಸ್ಥಗಿತಗೊಳ್ಳಬಹುದು.

2. ಸ್ಪೀಕರ್, ಮೈಕ್ ಮತ್ತು ಹೆಡ್ಫೋನ್ ಜಾಕ್
ಸ್ಪೀಕರ್ ಮತ್ತು ಮೈಕ್: ಫೋನಿನ ಸ್ಪೀಕರ್ ಅಥವಾ ಮೈಕ್ರೋಫೋನ್ ಒಳಗೆ ತೇವಾಂಶ ಇರಲೇಬಾರದು. ನೀರು ಸೇರಿದರೆ ಧ್ವನಿ ಕೇಳಿಸದಂತಾಗಬಹುದು ಅಥವಾ ಅದರ ಒಳಗಿನ ಸಣ್ಣ ರಂಧ್ರಗಳು ಮುಚ್ಚಿಹೋಗಿ ಸ್ಪೀಕರ್ ಸಂಪೂರ್ಣ ಹಾಳಾಗಬಹುದು.

ಹೆಡ್ಫೋನ್ ಜಾಕ್: ನೀರು ಸೇರಿದರೆ ಶಾರ್ಟ್ ಸರ್ಕ್ಯೂಟ್ ಆಗುವ ಮತ್ತೊಂದು ಸೂಕ್ಷ್ಮ ಭಾಗವಿದು. ಕೆಲವೊಮ್ಮೆ ನೀರು ಸೇರಿದಾಗ ಫೋನ್ ಯಾವಾಗಲೂ ‘ಹೆಡ್ಫೋನ್ ಮೋಡ್’ನಲ್ಲೇ ತೋರಿಸುತ್ತಾ ಇರುತ್ತದೆ.

ಸಿಮ್ ಕಾರ್ಡ್ ಟ್ರೇ (SIM Tray): ಸಿಮ್ ಕಾರ್ಡ್ ಹಾಕುವ ಜಾಗದಲ್ಲಿ ನೀರು ಇರಬಾರದು. ಏಕೆಂದರೆ ಈ ಭಾಗವು ನೇರವಾಗಿ ಫೋನಿನ ಮದರ್ಬೋರ್ಡ್ಗೆ (Motherboard) ಸಂಪರ್ಕ ಹೊಂದಿರುತ್ತದೆ. ಇಲ್ಲಿ ನೀರು ಹೋದರೆ ಫೋನ್ ತಕ್ಷಣವೇ ಡೆಡ್ ಆಗುವ ಸಾಧ್ಯತೆ ಇರುತ್ತದೆ.

ಐಪಿ ರೇಟಿಂಗ್ (IP Rating) ಇದ್ದರೂ ಎಚ್ಚರ!

ನಿಮ್ಮ ಫೋನ್ ವಾಟರ್ಪ್ರೂಫ್ ಆಗಿದ್ದರೂ ಅಥವಾ ‘IP68’ ರೇಟಿಂಗ್ ಹೊಂದಿದ್ದರೂ ಸಹ, ಫೋನ್ ಒದ್ದೆಯಾಗಿದ್ದಾಗ ಎಂದಿಗೂ ಚಾರ್ಜ್ ಮಾಡಬೇಡಿ. ಇದು ದೊಡ್ಡ ಅಪಾಯ ಅಥವಾ ಶಾರ್ಟ್ ಸರ್ಕ್ಯೂಟ್ಗೆ ಕಾರಣವಾಗಬಹುದು. ಫೋನ್ನಲ್ಲಿ ತೇವಾಂಶ ಇರುವುದು ಗೊತ್ತಾದರೆ ತಕ್ಷಣ ಅದನ್ನು ಒಣಗಿಸಿ.

ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
ಅನೇಕರು ಫೋನ್ ನೀರಿಗೆ ಬಿದ್ದ ತಕ್ಷಣ ಅದನ್ನು ಅಕ್ಕಿ ಡಬ್ಬದಲ್ಲಿ (Rice Container) ಇಡುತ್ತಾರೆ. ಆದರೆ ನೆನಪಿಡಿ, ಇದು ತಪ್ಪು ವಿಧಾನ. ಹೀಗೆ ಮಾಡುವುದರಿಂದ ಫೋನಿನ ಒಳಗಿನ ಭಾಗಗಳು ಬೇಗನೆ ತುಕ್ಕು ಹಿಡಿಯಬಹುದು (Rusting) ಮತ್ತು ಅಕ್ಕಿಯ ಸಣ್ಣ ಧೂಳು ಫೋನ್ ಒಳಗಡೆ ಸೇರಬಹುದು.

ಪರ್ಯಾಯ ಮಾರ್ಗವೇನು?

ಫೋನ್ ಒದ್ದೆಯಾದ ತಕ್ಷಣ ಮೃದುವಾದ ಮೈಕ್ರೋಫೈಬರ್ ಬಟ್ಟೆಯಿಂದ (Microfiber cloth) ನೀರನ್ನು ಸಂಪೂರ್ಣವಾಗಿ ಒರೆಸಿ.

ಫೋನ್ ಒಳಗಿನ ನೀರು ಸಂಪೂರ್ಣವಾಗಿ ಆರಲು ಬಿಡಿ, ಅಲ್ಲಿಯವರೆಗೆ ಫೋನ್ ಬಳಸಬೇಡಿ.

ಮೊಬೈಲ್ ಫೋನಿನ ಒಳಗಿನ ಭಾಗಗಳು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಚಾರ್ಜಿಂಗ್ ಪೋರ್ಟ್, ಮೈಕ್, ಸ್ಪೀಕರ್ ಮತ್ತು ಹೆಡ್ಫೋನ್ ಜಾಕ್ಗಳನ್ನು ನೀರಿನಿಂದ ಸದಾ ದೂರವಿಡಿ.

ALERT: Mobile users beware: Do not get these sensitive parts of your phone wet even if you accidentally do so!
Share. Facebook Twitter LinkedIn WhatsApp Email

Related Posts

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

1 Min Read

ಪ್ರಕೃತಿ ಕೊಟ್ಟ ಸಂಜೀವಿನಿ ‘ನುಗ್ಗೆ ಸೊಪ್ಪು’: ಬಿಪಿ, ಶುಗರ್ ಸೇರಿ ಹಲವು ರೋಗಗಳಿಗೆ ರಾಮಬಾಣ ಈ ಸೊಪ್ಪು.!

2 Mins Read

ಹಾವೇರಿಯಲ್ಲಿ ಭೀಕರ ಮರ್ಡರ್ : ಅಂಗನವಾಡಿ ಕೇಂದ್ರದಲ್ಲಿ ಮಚ್ಚಿನಿಂದ ಕೊಚ್ಚಿ, ಅಕ್ಕನನ್ನ ಕೊಂದ ತಮ್ಮ!

1 Min Read
Recent News

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಫೋನ್ ನ ಈ ಸೂಕ್ಷ್ಮ ಭಾಗಗಳನ್ನು ಒದ್ದೆ ಮಾಡಬೇಡಿ!

BREAKING : ‘NEET’-UG-2026′ ಪ್ರಶ್ನೆ ಪತ್ರಿಕೆ ಲೀಕ್ ಕೇಸ್ : ಕೇಂದ್ರ ಸರ್ಕಾರ ‘NTA’ ಗೆ ಸುಪ್ರಿಂಕೋರ್ಟ್ ನೋಟಿಸ್ ಜಾರಿ

SHOCKING : `ವಕ್ಫ್ ಆಸ್ತಿ’ ಅತಿಕ್ರಮಣ ವಿರುದ್ಧ ಹೋರಾಡುತ್ತಿದ್ದ ವಕೀಲನಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಹತ್ಯೆ | WATCH VIDEO

State News
KARNATAKA

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

By ಸುರೇಶ್‌ KARNATAKA 1 Min Read

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ನಿಂದ ದಿಢೀರ್ ಕರೆ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.…

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಫೋನ್ ನ ಈ ಸೂಕ್ಷ್ಮ ಭಾಗಗಳನ್ನು ಒದ್ದೆ ಮಾಡಬೇಡಿ!

ಪ್ರಕೃತಿ ಕೊಟ್ಟ ಸಂಜೀವಿನಿ ‘ನುಗ್ಗೆ ಸೊಪ್ಪು’: ಬಿಪಿ, ಶುಗರ್ ಸೇರಿ ಹಲವು ರೋಗಗಳಿಗೆ ರಾಮಬಾಣ ಈ ಸೊಪ್ಪು.!

ಹಾವೇರಿಯಲ್ಲಿ ಭೀಕರ ಮರ್ಡರ್ : ಅಂಗನವಾಡಿ ಕೇಂದ್ರದಲ್ಲಿ ಮಚ್ಚಿನಿಂದ ಕೊಚ್ಚಿ, ಅಕ್ಕನನ್ನ ಕೊಂದ ತಮ್ಮ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.