ಯಾದಗಿರಿ : ರಾಜ್ಯದಲ್ಲಿ ಫೈನಾನ್ಸಿಬ್ಬಂದಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಮಹೇಂದ್ರ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ನಡೆದಿದೆ. ಕಾಚಪುರ ಗ್ರಾಮದ ಮನೆಯಲ್ಲಿ ಸೋಮಪ್ಪ (30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದ್ಯ ಮಹೇಂದ್ರ ಫೈನಾನ್ಸ್ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೊಲೆರೋ ಪಿಕಪ್ ವಾಹನದ ಮೇಲೆ ಸೋಮಪ್ಪ ಸಾಲ ಪಡೆದಿದ್ದ ಕಳೆದ ಐದು ತಿಂಗಳಿಂದ ಸೋಮಪ್ಪ ಸಾಲದ ಕಂತನು ಕಟ್ಟಿರಲಿಲ್ಲ ಕಂತು ಕಟ್ಟುವಂತೆ ಮನೆಗೆ ಬಂದು ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು ಎಂದು ಸೋಮಪ್ಪ ಹೇಳಿದ್ದ ಕಿರುಕುಳ ಸಹಿಸಲಾಗಿದೆ ಮನೆಯಲ್ಲಿ ಸೋಮಪ್ಪ ನೇಣಿಗೆ ಶರಣಾಗಿದ್ದಾನೆ. ಸುರಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








