ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಪದವೀಧರರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಭರ್ಜರಿ ಅವಕಾಶವೊಂದನ್ನು ನೀಡಿದೆ. ದೇಶಾದ್ಯಂತ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಎಸ್‌ಬಿಐ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅರ್ಜಿ ಸಲ್ಲಿಸಲು ಜೂನ್ 8, 2026 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
-
ಒಟ್ಟು ಹುದ್ದೆಗಳು: 7,150
-
ಕರ್ನಾಟಕದಲ್ಲಿರುವ ಹುದ್ದೆಗಳು: 276 (ಸ್ಥಳೀಯ ಭಾಷೆ ಕನ್ನಡ ಕಡ್ಡಾಯ)
-
ತರಬೇತಿ ಅವಧಿ: 1 ವರ್ಷ
-
ಮಾಸಿಕ ಸ್ಟೈಫಂಡ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15,000 ರೂ. ಗೌರವಧನ (ಸ್ಟೈಫಂಡ್) ನೀಡಲಾಗುತ್ತದೆ. ಜೊತೆಗೆ ಯಶಸ್ವಿಯಾಗಿ ತರಬೇತಿ ಮುಗಿಸಿದವರಿಗೆ ಎಸ್‌ಬಿಐನಿಂದ ಅಧಿಕೃತ ಅನುಭವ ಪ್ರಮಾಣಪತ್ರ ಸಿಗಲಿದ್ದು, ಇದು ಮುಂದಿನ ಬ್ಯಾಂಕ್ ಕ್ಲರ್ಕ್ ಪರೀಕ್ಷೆಗಳಿಗೆ ಸಹಕಾರಿಯಾಗಲಿದೆ.
-
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
-
ವಯೋಮಿತಿ: ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ:
ಅಭ್ಯರ್ಥಿಗಳ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ (Computer-Based Test) ಮತ್ತು ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆಯ (Local Language Test) ಆಧಾರದ ಮೇಲೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯನ್ನು ಜುಲೈ 2026 ರಲ್ಲಿ ನಡೆಸಲು ತಾತ್ಕಾಲಿಕವಾಗಿ ಯೋಜಿಸಲಾಗಿದೆ.
ಈ ನೇಮಕಾತಿಯ ಸಂಪೂರ್ಣ ಮಾಹಿತಿ ಹಾಗೂ ಪರೀಕ್ಷಾ ವಿಧಾನದ ಕುರಿತು ವಿವರವಾಗಿ ತಿಳಿಯಲು SBI Apprentice 2026 Notification Video ವಿಡಿಯೋವನ್ನು ವೀಕ್ಷಿಸಬಹುದು. ಈ ವಿಡಿಯೋದಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಇರುವ ಹುದ್ದೆಗಳು, ಪರೀಕ್ಷೆಯ ಪಠ್ಯಕ್ರಮ ಮತ್ತು ಅರ್ಜಿ ಸಲ್ಲಿಸುವ ಹಂತಗಳನ್ನು ಸುಲಭವಾಗಿ ವಿವರಿಸಲಾಗಿದೆ.








