ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಿದ್ದು, ಈ ಒಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಕೂಡ ರೇಸ್ ನಲ್ಲಿದ್ದರು. ಆದರೆ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಕೈ ತಪ್ಪಿದಲ್ಲ ಅದು ಮೊದಲೇ ಕ್ಲಿಯರ್ ಆಗಿತ್ತು ಅಂತ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬರಿಗೆ ಒಂದೇ ಪೋಸ್ಟ್ ಎಂಬಂತೆ ಮಾನದಂಡದ ಪ್ರಕಾರ ಎಲ್ಲರಿಗೂ ಖಾತೆ ನೀಡಲಾಗಿದೆ. ಹಾಗಾಗಿ ಕೆಪಿಸಿಸಿ ಸ್ಥಾನ ಕೈ ತಪ್ಪಿದ್ದಲ್ಲ ಅದು ಎರಡು ತಿಂಗಳ ಮೊದಲೇ ಹೇಳಿದ್ದರು. ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದು ಪೋಸ್ಟ್ ಅಂತಲೇ ಇದ್ದಿದ್ದು ಒಂದು ಪೋಸ್ಟ್ ಅಂತ ಬಂದಾಗ ಇಷ್ಟೆಲ್ಲ ಆಯ್ತು ಕೊನೆ ಗಳಿಗೆಯಲ್ಲಿ ಮಂತ್ರಿ ಸ್ಥಾನ ಇರಲಿಲ್ಲ. ಕೆಪಿಸಿಸಿ ಸ್ಥಾನ ಇತ್ತು ಹಾಗಾಗಿ ಕೆಪಿಸಿಸಿ ವಿಚಾರವಾಗಿ ಸುಮ್ಮನಾದ್ವಿ. ಸಿದ್ದರಾಮಯ್ಯ ಅಧ್ಯಕ್ಷರಾಗದೆ ಮುಖ್ಯಮಂತ್ರಿ ಆಗಿದ್ದರು. ಸಿಎಂ ಆಗಲು ಅಧ್ಯಕ್ಷ ಸ್ಥಾನ ಬೇಕು ಅಂತ ಏನು ಇಲ್ಲ ಎಂದು ಬೆಂಗಳೂರಲ್ಲಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.







