ಬೆಂಗಳೂರು : ರಾಜ್ಯ ರಾಜಕಾರಣದ ಸಚಿವ ಸಂಪುಟ ರಚನೆಯ ಕುತೂಹಲ ಈಗ ದೆಹಲಿ ತಲುಪಿದೆ. ನಿನ್ನೆ ಸೋಮವಾರವೇ ನಡೆಯಬೇಕಿದ್ದ ಹೈಕಮಾಂಡ್‌ನ ಪ್ರಮುಖ ಸಭೆಯು ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರು ತಡವಾಗಿ ರಾಜಧಾನಿ ತಲುಪಿದ ಕಾರಣದಿಂದ ಇವತ್ತು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ.
ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ತಮ್ಮದೇ ಆದ ಬೆಂಬಲಿಗರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಈ ಪಟ್ಟಿಗಳ ಬಗ್ಗೆ ಚರ್ಚೆ ನಡೆಸಿ, ಆ ಬಳಿಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ಸಚಿವರ ಹೆಸರನ್ನು ಫೈನಲ್ ಮಾಡಲಾಗುತ್ತದೆ. ಇವತ್ತೇ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದ್ದು, ನಾಳೆಯೇ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಸಂಭಾವ್ಯ ಸಚಿವರ ರೇಸ್‌ನಲ್ಲಿರುವ ಪ್ರಮುಖರು:
ಡಾ. ಜಿ. ಪರಮೇಶ್ವರ್
ಸತೀಶ್ ಜಾರಕಿಹೊಳಿ
ಎಂ.ಬಿ. ಪಾಟೀಲ್ / ಈಶ್ವರ್ ಖಂಡ್ರೆ
ಕೆ.ಜೆ. ಜಾರ್ಜ್
ಕೆ.ಎಚ್. ಮುನಿಯಪ್ಪ / ಪ್ರಿಯಾಂಕ್ ಖರ್ಗೆ
ಬೈರತಿ ಸುರೇಶ್
ಬಿ.ಕೆ. ಹರಿಪ್ರಸಾದ್
ಯು.ಟಿ. ಖಾದರ್
ರಾಮಲಿಂಗಾರೆಡ್ಡಿ








