Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರ! ನೀವು ದಿನಾಲೂ ಮಾಡುವ ಈ 10 ತಪ್ಪುಗಳೇ ನಿಮ್ಮ ಹೃದಯವನ್ನು ಅಪಾಯಕ್ಕೆ ತಳ್ಳುತ್ತವೆ

BIG NEWS : ಹೈದರಾಬಾದ್‌ನಲ್ಲೂ RCB ಕ್ರೇಜ್: ಐಪಿಎಲ್ ಟಿಕೆಟ್ ಬ್ಲ್ಯಾಕ್ ದಂಧೆಕೋರರು ಪೊಲೀಸ್ ವಶಕ್ಕೆ!

ರಾತ್ರಿ ಮಲಗುವ ಮುನ್ನ ಏಲಕ್ಕಿ ಅಗಿಯುವುದರ ಅದ್ಭುತ ಆರೋಗ್ಯ ಪ್ರಯೋಜನಗಳಿವು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಹೈದರಾಬಾದ್‌ನಲ್ಲೂ RCB ಕ್ರೇಜ್: ಐಪಿಎಲ್ ಟಿಕೆಟ್ ಬ್ಲ್ಯಾಕ್ ದಂಧೆಕೋರರು ಪೊಲೀಸ್ ವಶಕ್ಕೆ!
INDIA

BIG NEWS : ಹೈದರಾಬಾದ್‌ನಲ್ಲೂ RCB ಕ್ರೇಜ್: ಐಪಿಎಲ್ ಟಿಕೆಟ್ ಬ್ಲ್ಯಾಕ್ ದಂಧೆಕೋರರು ಪೊಲೀಸ್ ವಶಕ್ಕೆ!

By ಸುರೇಶ್‌

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಕೊನೆಯ ಲೀಗ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯದ ಕಾವು ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಪ್ರೇಕ್ಷಕರಲ್ಲೂ ಗರಿಷ್ಠ ಮಟ್ಟ ತಲುಪಿದೆ. ಸಾಮಾನ್ಯವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಂಡುಬರುತ್ತಿದ್ದ ಆರ್‌ಸಿಬಿ ತಂಡದ ಅಭಿಮಾನಿಗಳ ಅಬ್ಬರ ಮತ್ತು ಕ್ರೇಜ್, ಇಂದು ಹೈದರಾಬಾದ್‌ನಲ್ಲೂ ಮುಗಿಲು ಮುಟ್ಟಿದೆ.

ಆರ್‌ಸಿಬಿ ಪಂದ್ಯವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರುವುದನ್ನು ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು, ಟಿಕೆಟ್‌ಗಳನ್ನು ಕಪ್ಪು ಮಾರುಕಟ್ಟೆಯಲ್ಲಿ (ಬ್ಲ್ಯಾಕ್) ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿದ್ದರು. ಬೆಂಗಳೂರಿನಲ್ಲಿ ಈ ಹಿಂದೆ ನಡೆದಿದ್ದ ಟಿಕೆಟ್ ಬ್ಲ್ಯಾಕ್ ದಂಧೆಯ ಮಾದರಿಯಲ್ಲೇ ಇಲ್ಲೂ ಸಹ ಕೆಲವರು ಅಕ್ರಮವಾಗಿ ಹಣ ಗಳಿಸಲು ಹೊಂಚು ಹಾಕಿದ್ದರು. ಆದರೆ, ಈ ಕಿಡಿಗೇಡಿಗಳ ಆಟಕ್ಕೆ ಹೈದರಾಬಾದ್ ಪೊಲೀಸರು ಬ್ರೇಕ್ ಹಾಕಿದ್ದಾರೆ.

₹5 ಸಾವಿರದ ಟಿಕೆಟ್ ₹20 ಸಾವಿರಕ್ಕೆ ಮಾರಾಟ!

ಇಂದು ಸಂಜೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (ಉಪ್ಪಳ ಗ್ರೌಂಡ್) ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಿಸಲು ಟಿಕೆಟ್ ಸಿಗದೆ ಪರದಾಡುತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಅಸಹಾಯಕತೆಯನ್ನು ಈ ದಂಧೆಕೋರರು ದುರುಪಯೋಗಪಡಿಸಿಕೊಂಡಿದ್ದಾರೆ. ಅಸಲಿ ಬೆಲೆ ಕೇವಲ 5 ಸಾವಿರ ರೂಪಾಯಿ ಇದ್ದ ಟಿಕೆಟ್‌ಗಳನ್ನು ಬರೋಬ್ಬರಿ 20 ಸಾವಿರ ರೂಪಾಯಿಗಳ ಭಾರಿ ಮೊತ್ತಕ್ಕೆ ಅಭಿಮಾನಿಗಳಿಗೆ ಮಾರಾಟ ಮಾಡಿ ಸುಲಿಗೆ ಮಾಡುತ್ತಿದ್ದರು.

ಪೊಲೀಸರ ಕಾರ್ಯಾಚರಣೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು

ಸ್ಟೇಡಿಯಂ ಸುತ್ತಮುತ್ತ ಟಿಕೆಟ್‌ಗಳಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದ ಸಂದರ್ಭದಲ್ಲೇ, ಈ ಬ್ಲ್ಯಾಕ್ ಟಿಕೆಟ್ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೈದರಾಬಾದ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿಶೇಷ ದಾಳಿ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕವಾಗಿ ದುಬಾರಿ ಬೆಲೆಗೆ ಟಿಕೆಟ್ ಮಾರುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ರೇಡ್ ಹ್ಯಾಂಡ್ (ಸ್ಥಳದಲ್ಲೇ) ಆಗಿ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಪಂದ್ಯದ ಟಿಕೆಟ್‌ಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Share. Facebook Twitter LinkedIn WhatsApp Email

Related Posts

BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

2 Mins Read

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ : ಅಡುಗೆ ಎಣ್ಣೆ ಬೆಲೆಯಲ್ಲಿ 15 ರೂ. ಏರಿಕೆ | Cooking oil price hike

1 Min Read

ALERT : ‘ಕಾಕ್ರೋಚ್​ ಜನತಾ ಪಾರ್ಟಿ’ ಹೆಸ್ರಲ್ಲಿ ಸೈಬರ್ ವಂಚನೆ : ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದ್ರೆ ಲಕ್ಷ ಲಕ್ಷ ಹಣ ಗೋವಿಂದ!

1 Min Read
Recent News

ಎಚ್ಚರ! ನೀವು ದಿನಾಲೂ ಮಾಡುವ ಈ 10 ತಪ್ಪುಗಳೇ ನಿಮ್ಮ ಹೃದಯವನ್ನು ಅಪಾಯಕ್ಕೆ ತಳ್ಳುತ್ತವೆ

BIG NEWS : ಹೈದರಾಬಾದ್‌ನಲ್ಲೂ RCB ಕ್ರೇಜ್: ಐಪಿಎಲ್ ಟಿಕೆಟ್ ಬ್ಲ್ಯಾಕ್ ದಂಧೆಕೋರರು ಪೊಲೀಸ್ ವಶಕ್ಕೆ!

ರಾತ್ರಿ ಮಲಗುವ ಮುನ್ನ ಏಲಕ್ಕಿ ಅಗಿಯುವುದರ ಅದ್ಭುತ ಆರೋಗ್ಯ ಪ್ರಯೋಜನಗಳಿವು

ಶಿವಮೊಗ್ಗ: ಮೇ.24ರಂದು ಸಾಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

State News
KARNATAKA

ಶಿವಮೊಗ್ಗ: ಮೇ.24ರಂದು ಸಾಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

By ವಸಂತ ಬಿ ಈಶ್ವರಗೆರೆ KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದ 110/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಮೇ 24ರ…

BREAKING : ಪೆಟ್ರೋಲ್, ಅಡುಗೆ ಎಣ್ಣೆ, ಗೊಬ್ಬರ ಬಳಿಕ ಬಿತ್ತನೆ ಬೀಜಕ್ಕೆ ಪರದಾಟ : ರಾಜ್ಯದ ರೈತರು ಕಂಗಾಲು!

GOOD NEWS: ಅತಿಥಿ ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ‘51,000 ಹುದ್ದೆ’ಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ | Guest Teachers

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.