ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janata Party) ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. @CJP_2029 ಯೂಸರ್ನೇಮ್ ಹೊಂದಿರುವ ಈ ಪ್ರೊಫೈಲ್ಗೆ ಭೇಟಿ ನೀಡಿದಾಗ “Account Withheld” ಎಂದು ತೋರಿಸುತ್ತಿದ್ದು, ಕಾನೂನಾತ್ಮಕ ಬೇಡಿಕೆಯ ಮೇರೆಗೆ ಭಾರತದಲ್ಲಿ ಈ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತಿದೆ.
https://twitter.com/abhijeet_dipke/status/2057380406618443930
ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇದರ ಹಿನ್ನೆಲೆ ಏನು?
ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲರ ಹುದ್ದೆಯ ಪದನಾಮಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಿಜೆಐ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟೀಕೆಯೊಂದನ್ನು ಮಾಡಿತ್ತು. “ಉದ್ಯೋಗ ಸಿಗದ ಕೆಲವು ಯುವಕರು ವ್ಯವಸ್ಥೆಯ ವಿರುದ್ಧ ತಿರುಗಿಬೀಳುತ್ತಿದ್ದಾರೆ. ಅವರು ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಆರ್ಟಿಐ (RTI) ಕಾರ್ಯಕರ್ತರ ರೂಪದಲ್ಲಿ ಜಿರಳೆಗಳಂತೆ (Cockroaches) ಎಲ್ಲರ ಮೇಲೆ ದಾಳಿ ಮಾಡುತ್ತಾರೆ” ಎಂದು ನ್ಯಾಯಪೀಠ ಹೇಳಿತ್ತು.
As expected Cockroach Janta Party’s account has been withheld in India. pic.twitter.com/44ymllnSMJ
— Abhijeet Dipke (@abhijeet_dipke) May 21, 2026
ನ್ಯಾಯಾಧೀಶರ ಈ ‘ಜಿರಳೆ’ (ಕಾಕ್ರೋಚ್) ಎಂಬ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡ ಯುವಕರು, ವ್ಯವಸ್ಥೆಯ ವಿರುದ್ಧ ವಿನೂತನ ಪ್ರತಿಭಟನೆಗೆ ಮುಂದಾದರು. ನ್ಯಾ. ಸೂರ್ಯಕಾಂತ್ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ‘ಕಾಕ್ರೋಚ್’ ಹೆಸರಿನಲ್ಲಿ ರಾಜಕೀಯ ಪಕ್ಷದ ವೆಬ್ಸೈಟ್ ಮತ್ತು ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ತೆರೆಯಲಾಯಿತು. ಆ ಮೂಲಕ ‘ಕಾಕ್ರೋಚ್ ಜನತಾ ಪಾರ್ಟಿ’ ಜನ್ಮತಾಳಿತು.
ಜೆನ್-ಜಿ (Gen Z) ಯುವಕರ ಬೆಂಬಲ ಹಾಗೂ ಅಭಿಜೀತ್ ದಿಪ್ಕೆ
ಅಭಿಜೀತ್ ದಿಪ್ಕೆ ಎಂಬುವವರು ಎಕ್ಸ್ನಲ್ಲಿ ಈ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಸ್ಥಾಪಿಸಿ ಪ್ರಚಾರ ಮಾಡುತ್ತಿದ್ದಾರೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಪ್ರಶ್ನಿಸುತ್ತಿರುವ ದಿಪ್ಕೆ ಅವರ ಈ ವಿಭಿನ್ನ ಮತ್ತು ವಿನೂತನ ಪ್ರಯತ್ನಕ್ಕೆ ದೇಶದ ಜೆನ್-ಜಿ (ಇಂದಿನ ತಲೆಮಾರಿನ ಯುವಕರು) ಯುವಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
https://twitter.com/JeetN25/status/2057341323099922508
ಪುಣೆಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿರುವ ಅಭಿಜೀತ್ ದಿಪ್ಕೆ, ಸದ್ಯ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (Public Relations) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ವಿಶೇಷವೆಂದರೆ, ಇವರು ಈ ಹಿಂದೆ (2020 ರಿಂದ 2023 ರವರೆಗೆ) ಆಮ್ ಆದ್ಮಿ ಪಕ್ಷದ (AAP) ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ರಚಾರ ತಂಡದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು.
-> So Backup account of Cockroach janata party follows 5 People
2. Abhijeet dipke close associate of Former Delhi Dy Cm ( AAP party ) and advisor to kejriwal government
4. Meghnads who got 140 votes in delhi assembly 2025 😂
5. Arpit sharma whose father contested on AAP… pic.twitter.com/QINYHvMbeT
— SAI VARMA 🇮🇳 (@i__m_vengeance) May 20, 2026
ರಾಜಕೀಯ ವಲಯದಲ್ಲಿ ವಾಗ್ಯುದ್ಧ ಮತ್ತು ಅನುಮಾನಗಳು
ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ರಾಜಕೀಯ ಕೆಸರೆರಚಾಟವೂ ಶುರುವಾಗಿದೆ.
-
ಬಿಜೆಪಿ ಬೆಂಬಲಿಗರ ಆರೋಪ: ಅಭಿಜೀತ್ ದಿಪ್ಕೆ ಈ ಹಿಂದೆ ಆಪ್ (AAP) ಪಕ್ಷದಲ್ಲಿ ಕೆಲಸ ಮಾಡಿದ್ದ ಹಿನ್ನಲೆಯುಳ್ಳವರು ಎಂದು ಬಿಜೆಪಿ ಬೆಂಬಲಿತ ವ್ಯಕ್ತಿಗಳು ಎಕ್ಸ್ನಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
-
ಹಳೇ ಪೋಸ್ಟ್ಗಳ ಡಿಲೀಟ್: ಅಭಿಜೀತ್ ಅವರು ಕೇವಲ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ವಿರುದ್ಧವೂ ಪೋಸ್ಟ್ಗಳನ್ನು ಹಾಕಿದ್ದರು. ಆದರೆ ಈಗ ಕಾಕ್ರೋಚ್ ಜನತಾ ಪಾರ್ಟಿ ದೊಡ್ಡ ಮಟ್ಟದಲ್ಲಿ ಮುಂಚೂಣಿಗೆ ಬಂದಿರುವುದರಿಂದ ತಮ್ಮ ಹಳೆಯ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
-
ವಿದೇಶಿ ಫಾಲೋವರ್ಸ್ ಅನುಮಾನ: ಖಾತೆ ಆರಂಭವಾದ ಕೆಲವೇ ದಿನಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಕ್ಕಿರುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ. ಈ ಖಾತೆಯನ್ನು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಮತ್ತು ಸೌದಿ ಅರೇಬಿಯಾದಂತಹ ದೇಶಗಳ ಜನರು ಫಾಲೋ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇದರ ಹಿಂದೆ ಬೇರೆನೋ ರಾಜಕೀಯ ತಂತ್ರ ಅಡಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಸದ್ಯ ಭಾರತದಲ್ಲಿ ಈ ಖಾತೆಯನ್ನು ತಡೆಹಿಡಿಯಲಾಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಪರ ಹಾಗೂ ವಿರುದ್ಧದ ಆಕ್ರೋಶ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ-ವಿರೋಧದ ಚರ್ಚೆಗಳು ಮಾತ್ರ ಜೋರಾಗಿಯೇ ಮುಂದುವರಿದಿವೆ.
JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ







