Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ಆಕಾಂಕ್ಷೆಗಳು ಈಗ ಕೇವಲ ತನ್ನ ಗಡಿಗಷ್ಟೇ ಸೀಮಿತವಾಗಿಲ್ಲ: ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತು!

GOOD NEWS : ರಾಜ್ಯದ ಖಾಸಗಿ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

BREAKING : ಪೋಕ್ಸೊ ಕೇಸ್ ನಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ `ಭಗೀರಥ್’ ಅರೆಸ್ಟ್ | Bhagirath Arrest

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ಖಾಸಗಿ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ
KARNATAKA

GOOD NEWS : ರಾಜ್ಯದ ಖಾಸಗಿ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow57

ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ದೀರ್ಘಕಾಲದಿಂದ ಖಾಲಿ ಇರುವ ಶಿಕ್ಷಕರು ಮತ್ತು ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ.

ಏನಿದೆ ಆದೇಶದಲ್ಲಿ?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿ ದಿನಾಂಕ:31-12-2015 ರೊಳಗೆ ನಿಧನ, ನಿವೃತ್ತಿ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಉಲ್ಲೇಖಿತ ಸರ್ಕಾರದ ಆದೇಶಗಳಲ್ಲಿ ಅನುಮತಿ ನೀಡಲಾಗಿರುತ್ತದೆ.

ಸದರಿ ಆದೇಶಗಳಂತೆ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿ ದಿನಾಂಕ 31-12-2015ರ ಪೂರ್ವದಲ್ಲಿನ ನಿಯಮಾನುಸಾರ ಅರ್ಹ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಲಾಗಿರುತ್ತದೆ. ಆದಾಗ್ಯೂ ಹಲವು ಅನುದಾನಿತ ಪ್ರೌಢ ಶಾಲೆಗಳಲ್ಲಿ ದಿನಾಂಕ 31-12-2015ರ ಪೂರ್ವದಲ್ಲಿ ಖಾಲಿಯಾಗಿರುವ ಹುದ್ದೆಗಳು ಭರ್ತಿಯಾಗದೆ ಇದ್ದರೂ ಶಾಲಾ ಆಡಳಿತ ಮಂಡಳಿಯವರು ನಿಯಮಾನುಸಾರ ಅರ್ಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಪ್ರಸ್ತಾವನೆಗಳು ಸಲ್ಲಿಸಿರುವುದಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಆಡಳಿತ ಮಂಡಳಿಗಳು ಕಾರಣವಾಗಿರುತ್ತಾರೆ.

ಆದ್ದರಿಂದ, ಅನುದಾನಿತ ಪ್ರೌಢ ಶಾಲೆಗಳಲ್ಲಿನ ದಿನಾಂಕ 31-12-2015ರ ಪೂರ್ವದಲ್ಲಿನ ನಿಯಮಾನುಸಾರ ಅರ್ಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ದಿನಾಂಕ: 15-07-2026 ರವರೆಗೆ ಕಾಲಮಿತಿಯನ್ನು ನಿಗದಿಪಡಿಸಿದೆ. ಆದ್ದರಿಂದ ಶಾಲಾ ಆಡಳಿತ ಮಂಡಳಿಯವರು ಸಿಬ್ಬಂದಿ ಮಾದರಿ ರಚನಾ ವಿನ್ಯಾಸದಂತೆ ದಿನಾಂಕ 31-12-2015ರ ಪೂರ್ವದಲ್ಲಿನ ನಿಯಮಾನುಸಾರ ಅರ್ಹ ಖಾಲಿ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಲು ಅನುಮತಿ ಕೋರಿ ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಎಲ್ಲ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸಲು ತಿಳಿಸಿದೆ.

ಮುಂದುವರೆದು, ಸದರಿ ಶಾಲೆಗಳಲ್ಲಿನ ದಿನಾಂಕ 31-12-2015ರ ಪೂರ್ವದಲ್ಲಿನ ನಿಯಮಾನುಸಾರ ಅರ್ಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಲಮಿತಿಯಲ್ಲಿ ಸಲ್ಲಿಸದಿದ್ದಲ್ಲಿ ಅಂತಹ ಹುದ್ದೆಗಳು ಸದರಿ ಶಾಲೆಗಳಿಗೆ ಅವಶ್ಯ ವಿರುವುದಿಲ್ಲವೆಂದು ಭಾವಿಸಿ ಅಂತಹ ಹುದ್ದೆಯನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು.

ಜಿಲ್ಲಾ ಉಪನಿರ್ದೆಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಖಾಸಗಿ ಅನುದಾನಿತ ಪ್ರೌಢ ಶಾಲಾ ಆಡಳಿತ ಮಂಡಳಿಯವರ ಗಮನಕ್ಕೆ ತಂದು ತುರ್ತಾಗಿ ದಿನಾಂಕ 31-12-2015ರ ಪೂರ್ವದಲ್ಲಿನ ನಿಯಮಾನುಸಾರ ಅರ್ಹ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸುವಂತೆ ಸೂಚಿಸಿದೆ.

ಮುಂದುವರೆದು, ಈ ಕುರಿತು ಅವರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಭಾರವಾಡ ಮತ್ತು ಕಲಬುರ್ಗಿರವರು ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮವಹಿಸಿ ಸರ್ಕಾರಕ್ಕೆ ವರದಿ ಮಾಡಲು ತಿಳಿಸಿದೆ.

GOOD NEWS: Filling of vacancies in private schools in the state: Important order from the Education Department
Share. Facebook Twitter LinkedIn WhatsApp Email

Related Posts

BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!

3 Mins Read

GOOD NEWS: BMTC ನೌಕರರಿಗೆ ಸಿಹಿಸುದ್ದಿ: 11 ತಿಂಗಳ ಬಾಕಿ ವೇತನ, ಹಿಂಬಾಗಿ ಬಿಡುಗಡೆ, ಖಾತೆಗೆ ಜಮಾ

2 Mins Read

GOOD NEWS : ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ1122 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು.!

1 Min Read
Recent News

ಭಾರತದ ಆಕಾಂಕ್ಷೆಗಳು ಈಗ ಕೇವಲ ತನ್ನ ಗಡಿಗಷ್ಟೇ ಸೀಮಿತವಾಗಿಲ್ಲ: ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತು!

GOOD NEWS : ರಾಜ್ಯದ ಖಾಸಗಿ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

BREAKING : ಪೋಕ್ಸೊ ಕೇಸ್ ನಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ `ಭಗೀರಥ್’ ಅರೆಸ್ಟ್ | Bhagirath Arrest

ಗೃಹಲಕ್ಷ್ಮಿ ಯೋಜನೆ ಹಣ ಉಳಿಸಿ ರೊಟ್ಟಿ ಉದ್ಯಮ ಆರಂಭಿಸಿದ ಕೊಪ್ಪಳದ ಮೂವರು ಗೆಳತಿಯರು!

State News
KARNATAKA

GOOD NEWS : ರಾಜ್ಯದ ಖಾಸಗಿ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ದೀರ್ಘಕಾಲದಿಂದ ಖಾಲಿ ಇರುವ ಶಿಕ್ಷಕರು ಮತ್ತು ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಶಾಲಾ…

BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!

GOOD NEWS: BMTC ನೌಕರರಿಗೆ ಸಿಹಿಸುದ್ದಿ: 11 ತಿಂಗಳ ಬಾಕಿ ವೇತನ, ಹಿಂಬಾಗಿ ಬಿಡುಗಡೆ, ಖಾತೆಗೆ ಜಮಾ

GOOD NEWS : ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ1122 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.