ಚೈನ್ನೈ : ಬಹಳ ಕಸರತ್ತು ನಡೆಸಿ ಕೊನೆಗೂ ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರು ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಇಂದು ಅವರು ಚೆನ್ನೈನ ಜವಾಹರ್ ಲಾಲ್ ನೆಹರು ಸ್ಟೇಡಿಯಂ ತಲುಪಿದ್ದು ಕೆಲವೇ ಕ್ಷಣಗಳಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲಿರುವ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ನಡೆದಿದ್ದು, ಅದಕ್ಕೂ ಮುನ್ನ ರಸ್ತೆ ಇಕ್ಕೆಲಗಳಲ್ಲಿ ದಳಪತಿ ವಿಜಯ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಘೋಷಣೆ ಕೂಗಿದರು. ವಿಜಯ ಪಟ್ಟಾಭಿಷೇಕಕ್ಕೆ ನೆಹರು ಸ್ಟೇಡಿಯಂ ಸಜ್ಜಾಗಿದ್ದು ಬಿಗಿ ಭದ್ರತೆಯಲ್ಲಿ ವಿಜಯ ಅವರು ಜವಾಹರ್ ಲಾಲ್ ನೆಹರು ಸ್ಟೇಡಿಯಂ ತೆರಳಿದರು.
ತಮಿಳುನಾಡು ನೂತನ ಮುಖ್ಯಮಂತ್ರಿ ಆಗಿ ವಿಜಯ್ ಗದ್ದುಗೆ ಏರಲಿದ್ದಾರೆ. ಅಷ್ಟೆ ಅಲ್ಲದೇ ವಿಜಯ್ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ವಿಜಯ್ ಬಹುಕಾಲದ ಗೆಳತಿ ನಟಿ ತ್ರಿಷಾ ಕೂಡ ಭಾಗವಹಿಸಲಿದ್ದಾರೆ. ಈಗಾಗಲೇ ಚೆನ್ನೈನ ನೆಹರು ನಟಿ ತ್ರಿಶಾ ತಮ್ಮ ನಿವಾಸದಿಂದ ಹೊರಟಿದ್ದಾರೆ. ಇನ್ನು ಈ ಒಂದು ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕೂಡ ಭಾಗವಹಿಸಲಿದ್ದು ಈಗಾಗಲೇ ಅವರು ಚೆನ್ನೈ ಏರ್ಪೋರ್ಟಿಗೆ ಬಂದಿಳಿದಿದ್ದಾರೆ.








