ಮುಂಬೈ: ಭಾರತೀಯ ಕ್ರಿಕೆಟ್ನ ‘ಹಿಟ್ಮ್ಯಾನ್’ ರೋಹಿತ್ ಶರ್ಮಾ (Rohit Sharma) ಈಗ ಬ್ಯಾಟ್ ಹಿಡಿದು ರನ್ ಬಾರಿಸುವುದರ ಜೊತೆಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ (Sony Pictures Networks) ಶುಕ್ರವಾರ ಬಿಡುಗಡೆ ಮಾಡಿರುವ ಹೊಸ ಟೀಸರ್ ಮೂಲಕ ರೋಹಿತ್ ಶರ್ಮಾ ಅವರ ಕಿರುತೆರೆಯ ಭರ್ಜರಿ ಪದಾರ್ಪಣೆಯನ್ನು ಖಚಿತಪಡಿಸಿದೆ.
ರೋಹಿತ್ ಶರ್ಮಾ ಅವರ ಪ್ರಸಿದ್ಧ “ಕೋಯಿ ಭಿ ಗಾರ್ಡನ್ ಮೇ ನಹೀ ಘುಮೇಗಾ” (ಯಾರೂ ಮೈದಾನದಲ್ಲಿ ಅಡ್ಡಾಡಬಾರದು) ಎಂಬ ಸ್ಟಂಪ್ ಮೈಕ್ ಸಂಭಾಷಣೆಯನ್ನೇ ಕೇಂದ್ರವಾಗಿಟ್ಟುಕೊಂಡು ಈ ಟೀಸರ್ ಸಿದ್ಧಪಡಿಸಲಾಗಿದೆ. ಈ ಡೈಲಾಗ್ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಗಳ ಮೂಲಕ ಫೇಮಸ್ ಆಗಿದೆ.
ಈ ಕಾರ್ಯಕ್ರಮಕ್ಕೆ “ದ ರೋಹಿತ್ ಶರ್ಮಾ ಶೋ” (The Rohit Sharma Show) ಎಂದು ಹೆಸರಿಡಲಾಗುತ್ತಿದೆ ಎಂದು ವರದಿಯಾಗಿದೆ. ಇದು ಸೆಲೆಬ್ರಿಟಿ ಟಾಕ್ ಶೋ ಅಥವಾ ರಿಯಾಲಿಟಿ ಶೋ ಮಾದರಿಯಲ್ಲಿರುವ ಸಾಧ್ಯತೆಯಿದೆ.
ಈ ಶೋ ‘ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್’ನಲ್ಲಿ ಪ್ರಸಾರವಾಗಲಿದ್ದು, SonyLIV ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮ್ ಆಗಲಿದೆ.
Bohot hua Garden… ab kuch naya karte hai!@SonyTV @SonyLIV #Collab pic.twitter.com/msU4uxcdYG
— Rohit Sharma (@ImRo45) May 8, 2026








