Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಣಿತದಲ್ಲಿ ಕಡಿಮೆ ಅಂಕ, ವಿಜ್ಞಾನದಲ್ಲಿ ಟಾಪ್! ವೈರಲ್ ಆಯ್ತು ‘ದಳಪತಿ’ ವಿಜಯ್ 10ನೇ ತರಗತಿ ಅಂಕಪಟ್ಟಿ | Vijay

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

ನಾಸಿಕ್ ಟಿಸಿಎಸ್ ಧರ್ಮಾಂತರ ಪ್ರಕರಣ: ಎಐಎಂಐಎಂ ಕಾರ್ಪೊರೇಟರ್ ಮತೀನ್ ಪಟೇಲ್ ವಿರುದ್ಧ ಎಫ್‌ಐಆರ್ | TCS Conversation case

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು
KARNATAKA

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

By kannadanewsnow09

ಶಿವಮೊಗ್ಗ: “ನಗರಸಭೆಯಲ್ಲಿ ಚುನಾಯಿತ ಸದಸ್ಯರು ಇಲ್ಲ ಎಂದು ಅಧಿಕಾರಿಗಳು ಬೀಗಬಾರದು. ಬಡವರ ಕೆಲಸಗಳನ್ನು ಮಾಡಿಕೊಡಲು ವಿಳಂಬ ಮಾಡಿದರೆ ಅಥವಾ ಜನರನ್ನು ಪದೇಪದೇ ಅಲೆಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು” ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲಸದಲ್ಲಿ ವಿಳಂಬ: ಕಂದಾಯ ನಿರೀಕ್ಷಕಿಗೆ ತರಾಟೆ

ಕಳೆದ ಎರಡೂವರೆ ವರ್ಷಗಳಿಂದ ಸಾರ್ವಜನಿಕರಿಗೆ ‘ಈ-ಸ್ವತ್ತು’ ಮಾಡಿಕೊಡದೆ ಸತಾಯಿಸುತ್ತಿದ್ದ ಕಂದಾಯ ನಿರೀಕ್ಷಕಿ ಮಮತಾ ಅವರನ್ನು ಶಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಬಡವರ ಕೆಲಸಗಳನ್ನು ಮಾಡುವಲ್ಲಿ ಇಂತಹ ವಿಳಂಬ ನೀತಿ ಅನುಸರಿಸಿದರೆ ಸುಮ್ಮನಿರುವುದಿಲ್ಲ” ಎಂದು ಎಚ್ಚರಿಸಿದರು.

ರಸ್ತೆ ಅಗಲೀಕರಣಕ್ಕೆ ಕಟ್ಟುನಿಟ್ಟಿನ ಸೂಚನೆ

ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಹಣ ಬಿಡುಗಡೆಯಾಗಿದ್ದರೂ ಜಾಗ ಬಿಟ್ಟುಕೊಡಲು ಕೆಲವರು ಹಿಂದೇಟು ಹಾಕುತ್ತಿರುವ ಬಗ್ಗೆ ಅಧಿಕಾರಿಗಳು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು:

  • ಕಾನೂನು ಪ್ರಕಾರ ತಕ್ಷಣವೇ ನೋಟಿಸ್ ನೀಡಿ.

  • ಕೊನೆಯ ಬಾರಿಗೆ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿ.

  • ಬಗ್ಗದಿದ್ದಲ್ಲಿ ‘ದಂಡಂ ದಶಗುಣಂ’ ಎಂಬಂತೆ ಅತಿಕ್ರಮಣ ತೆರವುಗೊಳಿಸಿ ರಸ್ತೆ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ವೇಗ

  • ಒಳಚರಂಡಿ ಯೋಜನೆ: ಈ ಹಿಂದೆ ಮಂಜೂರಾಗಿದ್ದ 70 ಕೋಟಿ ರೂ.ಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗ ಮತ್ತೆ 35 ಕೋಟಿ ರೂ. ಮಂಜೂರು ಮಾಡಿಸಲಾಗಿದ್ದು, ತಕ್ಷಣವೇ ಅಪೂರ್ಣ ಕಾಮಗಾರಿಗಳನ್ನು ಮುಗಿಸಬೇಕು.

  • ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್: 4.80 ಕೋಟಿ ರೂ. ವೆಚ್ಚದ ರಂಗಮಂದಿರ ನಿರ್ಮಾಣ ಕುರಿತು ಕಲಾವಿದರು ಮತ್ತು ಸಂಘ-ಸಂಸ್ಥೆಗಳ ಸಭೆ ಕರೆದು ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು.

  • ಆಶ್ರಯ ನಿವೇಶನ: 20 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ನಿವೇಶನಗಳಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.

ಜನ್ನತ್ ನಗರ ನಿವಾಸಿಗಳ ಸಮಸ್ಯೆಗೆ ಸ್ಪಂದನೆ

ಇಕ್ಕೇರಿ ಅಘೋರೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ 136 ಕುಟುಂಬಗಳಿಗೆ ಈ-ಸ್ವತ್ತು ಸಿಗದಿರುವ ಬಗ್ಗೆ ಶಾಸಕರು ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಜಾಗದ ಸರ್ವೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕುರಿತು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ

ಬಿಸಿಲು ಹೆಚ್ಚಿರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಿ. ಅವಶ್ಯಕತೆ ಇರುವ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ. ಅಷ್ಟೇ ಅಲ್ಲದೆ, ಎಲ್ಲಾ 31 ವಾರ್ಡ್‌ಗಳಲ್ಲಿ ಸ್ವಚ್ಛತಾ ಲೋಪವಾಗದಂತೆ ಗಮನ ಹರಿಸಿ ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ನಗರಸಭೆ ಯೋಜನಾಧಿಕಾರಿ ರಂಗಸ್ವಾಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಪ್ರದೀಪ್, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ್, ರಮೇಶ್ ಟಿ.ಪಿ., ಮದನ್, ಬಾಲಚಂದ್ರ, ಸುರೇಶ್ ಬಾಬು, ಗಣಪತಿ ಮಂಡಗಳಲೆ, ಮಧುಮಾಲತಿ, ಮಕ್ಬೂಲ್ ಇತರರು ಉಪಸ್ಥಿತರಿದ್ದರು.

BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್

Rain In Karnataka: ಮುಂದಿನ ಎರಡು ದಿನ ರಾಜ್ಯಾಧ್ಯಂತ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Share. Facebook Twitter LinkedIn WhatsApp Email

Related Posts

BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್

2 Mins Read

ಬೆಂಗಳೂರು ಗ್ರಾಹಕರ ಗಮನಕ್ಕೆ: ಭಾನುವಾರ ನಗರದ ಈ ಪ್ರದೇಶಗಳಲ್ಲಿ 10 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ | Power Cut

1 Min Read

BIG NEWS: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೌಕರರ ಗಮನಕ್ಕೆ: ಇನ್ಮುಂದೆ ‘ಕರ್ತವ್ಯ ಆಪ್’ ಮೂಲಕ ಹಾಜರಾತಿ ಕಡ್ಡಾಯ

1 Min Read
Recent News

ಗಣಿತದಲ್ಲಿ ಕಡಿಮೆ ಅಂಕ, ವಿಜ್ಞಾನದಲ್ಲಿ ಟಾಪ್! ವೈರಲ್ ಆಯ್ತು ‘ದಳಪತಿ’ ವಿಜಯ್ 10ನೇ ತರಗತಿ ಅಂಕಪಟ್ಟಿ | Vijay

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

ನಾಸಿಕ್ ಟಿಸಿಎಸ್ ಧರ್ಮಾಂತರ ಪ್ರಕರಣ: ಎಐಎಂಐಎಂ ಕಾರ್ಪೊರೇಟರ್ ಮತೀನ್ ಪಟೇಲ್ ವಿರುದ್ಧ ಎಫ್‌ಐಆರ್ | TCS Conversation case

BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್

State News
KARNATAKA

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

By kannadanewsnow09 KARNATAKA 2 Mins Read

ಶಿವಮೊಗ್ಗ: “ನಗರಸಭೆಯಲ್ಲಿ ಚುನಾಯಿತ ಸದಸ್ಯರು ಇಲ್ಲ ಎಂದು ಅಧಿಕಾರಿಗಳು ಬೀಗಬಾರದು. ಬಡವರ ಕೆಲಸಗಳನ್ನು ಮಾಡಿಕೊಡಲು ವಿಳಂಬ ಮಾಡಿದರೆ ಅಥವಾ ಜನರನ್ನು…

BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್

ಬೆಂಗಳೂರು ಗ್ರಾಹಕರ ಗಮನಕ್ಕೆ: ಭಾನುವಾರ ನಗರದ ಈ ಪ್ರದೇಶಗಳಲ್ಲಿ 10 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ | Power Cut

BIG NEWS: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೌಕರರ ಗಮನಕ್ಕೆ: ಇನ್ಮುಂದೆ ‘ಕರ್ತವ್ಯ ಆಪ್’ ಮೂಲಕ ಹಾಜರಾತಿ ಕಡ್ಡಾಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.