ತೆಲಂಗಾಣ : ಮಹಿಳಾ ಸುರಕ್ಷತೆ ಬಗ್ಗೆ ಮಹಿಳಾ ಅಧಿಕಾರಿಯೊಬ್ಬರು ಮಾರು ವೇಷದಲ್ಲಿ ಬೀದಿಯಲ್ಲಿ ನಿಂತು ಪರಿಶೀಲನೆ ನಡೆಸಿದಾಗ ಅಘಾತಕಾರಿ ಘಟನೆ ನಡೆದಿದ್ದು, ಕೇವಲ ಮೂರು ಗಂಟೆಗಳಲ್ಲಿ ಸುಮಾರು 40 ಮಂದಿ ಅವರಿಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ನಡೆದಿರುವುದು ಹೈದ್ರಾಬಾದ್ ನಲ್ಲಿ.
ತೆಲಂಗಾಣದ ಮಹಿಳಾ ಐಪಿಎಸ್ ಅಧಿಕಾರಿ ಸುಮತಿ ಅವರು ಮೇ 1 ರಂದು ಮಲ್ಕಾಜ್ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅಂದೇ ಮಧ್ಯರಾತ್ರಿ, ಅವರು ಮಹಿಳಾ ಸುರಕ್ಷತೆಯನ್ನು ಪರೀಕ್ಷಿಸಲು ಮುಂದಾದರು. ಹೈದರಾಬಾದ್ನ ಜನನಿಬಿಡ ದಿಲ್ಸುಖ್ನಗರ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಹಿಳೆಯಂತೆ, ಮಾಮೂಲಿ ಬಟ್ಟೆ ಧರಿಸಿ ನಿಂತಿದ್ದರು. ಯಾವುದೇ ಭದ್ರತೆ, ಮುಖಕ್ಕೆ ಮಾಸ್ಕ್ ಇಲ್ಲದೆ ಮಧ್ಯರಾತ್ರಿ 12:30 ರಿಂದ 3:30 ರವರೆಗೆ ಅಲ್ಲೇ ಇದ್ದರು.
ಅವರು ಒಂಟಿಯಾಗಿರುವುದನ್ನು ನೋಡಿ, ಮೂರು ಗಂಟೆಗಳಲ್ಲಿ ಸುಮಾರು 40 ಪುರುಷರು ಕಿರುಕುಳ ನೀಡಲು ಯತ್ನಿಸಿದರು.
‘ರಾತ್ರಿ ಬರ್ತೀಯಾ? ರೇಟ್ ಎಷ್ಟು?’ ಎಂದು ಅಸಭ್ಯವಾಗಿ ಮಾತನಾಡಿಸಿ ಪೇಚಿಗೆ ಸಿಲುಕಿಸಿದರು. ಕಿರುಕುಳ ನೀಡಿದವರಲ್ಲಿ ಡ್ರಗ್ಸ್ ವ್ಯಸನಿಗಳಿಂದ ಹಿಡಿದು, ಸುಶಿಕ್ಷಿತ ಯುವಕರೂ ಇದ್ದರು ಎಂಬುದು ಗಮನಾರ್ಹ.
ಮಹಿಳಾ ಪೊಲೀಸ್ ಅಧಿಕಾರಿಯ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಮಹಿಳೆಯರ ಪಾಡೇನು? ರಾತ್ರಿ ಮಾತ್ರವಲ್ಲ, ಹಗಲಲ್ಲೂ ಅವರು ರಸ್ತೆಯಲ್ಲಿ ಸ್ವೇಚ್ಛೆಯಾಗಿ ತಿರುಗಾಡುವ ಪರಿಸ್ಥಿತಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಮಹಿಳೆಯರು ರಸ್ತೆಗೆ ಬಂದರೆ ಪರಿಸ್ಥಿತಿ ಎಷ್ಟು ಘೋರವಾಗಿರುತ್ತದೆ ಎಂಬುದನ್ನು ಮಹಿಳಾ ಸಿಪಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.
ಈ ಘಟನೆ ಹೈದರಾಬಾದ್ನಲ್ಲಿ ದುಡಿಯುವ ಸಾಮಾನ್ಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರ ಭಯದಿಂದಲ್ಲ, ಪ್ರತಿಯೊಬ್ಬ ಮಹಿಳೆಯನ್ನು ತಾಯಿ, ಸಹೋದರಿ, ಮಗಳೆಂದು ಪುರುಷರು ಭಾವಿಸಿದ ದಿನವೇ ಅವರಿಗೆ ನಿಜವಾದ ಭದ್ರತೆ ಸಿಗಲಿದೆ.
Sometimes, the strongest policing doesn’t come from offices—it comes from stepping onto the streets. 🌙
In Hyderabad, IPS officer Badugula Sumathi, now Commissioner of Police, Malkajgiri, took an unusual approach to understand women’s safety.
Past midnight, without uniform or… pic.twitter.com/M4cPrgc029
— Indian Masterminds (@i3masterminds) May 6, 2026








