Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವೇಷ ಮರೆಸಿ ಬೀದಿಗಿಳಿದ ಲೇಡಿ ಸಿಂಗಂ: 40 ಕಾಮುಕರಿಗೆ ಬಿಸಿ ಮುಟ್ಟಿಸಿದ `IPS’ ಅಧಿಕಾರಿಯ ವಿಡಿಯೋ ವೈರಲ್ | WATCH VIDEO
INDIA

ವೇಷ ಮರೆಸಿ ಬೀದಿಗಿಳಿದ ಲೇಡಿ ಸಿಂಗಂ: 40 ಕಾಮುಕರಿಗೆ ಬಿಸಿ ಮುಟ್ಟಿಸಿದ `IPS’ ಅಧಿಕಾರಿಯ ವಿಡಿಯೋ ವೈರಲ್ | WATCH VIDEO

By kannadanewsnow57

ಹೈದರಾಬಾದ್: ದೇಶದಲ್ಲಿ ಮಹಿಳೆಯರಿಗೆ ರಾತ್ರಿ ವೇಳೆ ರಕ್ಷಣೆ ಇದೆಯೇ? ಈ ಪ್ರಶ್ನೆಗೆ ಸ್ವತಃ ಒಬ್ಬ ಮಹಿಳಾ ಐಪಿಎಸ್ ಅಧಿಕಾರಿಯೇ ಉತ್ತರ ಹುಡುಕಲು ಹೊರಟಾಗ ಎದುರಾದ ಸತ್ಯ ನಡುಕ ಹುಟ್ಟಿಸುವಂತಿದೆ. ಹೈದರಾಬಾದ್‌ನ ಮಲಕಾಜ್‌ಗಿರಿ ವ್ಯಾಪ್ತಿಯ ನೂತನ ಪೊಲೀಸ್ ಕಮಿಷನರ್ ಬಿ. ಸುಮತಿ ಅವರು ನಡೆಸಿದ ‘ಅಂಡರ್ ಕವರ್’ ಕಾರ್ಯಾಚರಣೆ ಈಗ ಭಾರಿ ಸಂಚಲನ ಮೂಡಿಸಿದೆ.

ಕಾರ್ಯಾಚರಣೆ ನಡೆದದ್ದು ಹೇಗೆ?

ಮಲಕಾಜ್‌ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ನಗರದ ಕಾನೂನು ಸುವ್ಯವಸ್ಥೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಪೊಲೀಸ್ ಸಮವಸ್ತ್ರ ಕಳಚಿಟ್ಟು, ಸಾಮಾನ್ಯ ಚೂಡಿದಾರ್ ಧರಿಸಿ ತಾವೊಬ್ಬರೇ ಅನಾಮಧೇಯ ಮಹಿಳೆಯಂತೆ ದಿಲ್‌ಸುಖ್‌ ನಗರದ ರಸ್ತೆಗಿಳಿದರು.

ಎರಡು ಗಂಟೆಗಳ ಕಹಿ ಅನುಭವ:

ಸುಮಾರು ಎರಡು ಗಂಟೆಗಳ ಕಾಲ ಅವರು ನಗರದ ವಿವಿಧೆಡೆ ಒಬ್ಬಂಟಿಯಾಗಿ ಸಂಚರಿಸಿದರು. ಈ ವೇಳೆ ಅವರಿಗೆ ಎದುರಾದ ಅನುಭವಗಳು ಆಘಾತಕಾರಿಯಾಗಿದ್ದವು. ದಾರಿಯಲ್ಲಿ ಹೋಗುತ್ತಿದ್ದ ಯುವಕರು, ಮಧ್ಯವಯಸ್ಕರು ಹಾಗೂ ವೃದ್ಧರು ಕೂಡ ಸುಮತಿ ಅವರನ್ನ ಕಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲ ಯುವಕರು ಬೈಕ್ ನಿಲ್ಲಿಸಿ “ಬರ್ತಿಯಾ?” ಎಂದು ಕೇಳುವ ಮೂಲಕ ವಿಕೃತಿ ಮೆರೆದಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಜನರು ಈ ಎರಡು ಗಂಟೆಗಳ ಅವಧಿಯಲ್ಲಿ ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಿದ್ದಾರೆ.

ಪೊಲೀಸರಿಗೇ ಶಾಕ್ ನೀಡಿದ ಕಮಿಷನರ್!

ಕಿಡಿಗೇಡಿಗಳ ವರ್ತನೆಯಿಂದ ರೋಸಿಹೋದ ಸುಮತಿ ಅವರು ತಕ್ಷಣವೇ ತಮ್ಮ ಅಧೀನ ಅಧಿಕಾರಿಗಳಿಗೆ ಸ್ಥಳಕ್ಕೆ ಬರಲು ಸಂದೇಶ ರವಾನಿಸಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸಾಮಾನ್ಯ ಉಡುಪಿನಲ್ಲಿದ್ದ ತಮ್ಮ ಕಮಿಷನರ್ ಅವತಾರ ಕಂಡು ಒಂದು ಕ್ಷಣ ಸ್ತಬ್ಧರಾದರು.ಮಹಿಳೆಯರಿಗೆ ಸುರಕ್ಷತೆ ನೀಡಬೇಕಾದದ್ದು ನಮ್ಮ ಮೊದಲ ಆದ್ಯತೆ. ರಸ್ತೆಯಲ್ಲಿ ಒಬ್ಬಂಟಿ ಮಹಿಳೆಯನ್ನು ಕಂಡಾಗ ಸಮಾಜದ ದೃಷ್ಟಿಕೋನ ಹೇಗಿರುತ್ತದೆ ಎಂಬುದು ಈ ಕಾರ್ಯಾಚರಣೆಯಿಂದ ಸಾಬೀತಾಗಿದೆ.” – ಬಿ. ಸುಮತಿ, ಐಪಿಎಸ್

ಮುಂದಿನ ಕ್ರಮಗಳೇನು?

ಘಟನೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸುಮತಿ ನಗರದಾದ್ಯಂತ ರಾತ್ರಿ ವೇಳೆ ಪೊಲೀಸ್ ಗಸ್ತನ್ನು ತೀವ್ರಗೊಳಿಸುವುದು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಂದು ಅಸಭ್ಯವಾಗಿ ವರ್ತಿಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ನಿರಂತರ ಮೇಲ್ವಿಚಾರಣೆ ನಡೆಸಲು ವಿಶೇಷ ತಂಡಗಳ ರಚನೆಗೆ ಅವರು ಕಟ್ಟುನಿಟ್ಟಿನ ಕ್ರಮಗಳಿಗೆ ಆದೇಶಿಸಿದ್ದಾರೆ.  ತೆಲಂಗಾಣದ ನಕ್ಸಲ್ ನಿಗ್ರಹ ಪಡೆಯಲ್ಲಿ ಸಾಹಸ ಮೆರೆದಿದ್ದ ಸುಮತಿ ಅವರ ಈ ದಿಟ್ಟ ಹೆಜ್ಜೆ ಈಗ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

#Hyderabad :

In a bold under cover operation by, newly appointed #Malkajgiri CP (@MalkajgiriCop) Sumathi, IPS (@SumathiIPS), waited alone at a bus stand in #Dilsukhnagar at midnight on the same day after taking charge as CP, she disguised herself as an ordinary woman to… pic.twitter.com/csaCtOWzVx

— Surya Reddy (@jsuryareddy) May 6, 2026

Lady Singham takes to the streets in disguise: Video of IPS officer giving 40 lovers a hard time goes viral | WATCH VIDEO
Share. Facebook Twitter LinkedIn WhatsApp Email

Related Posts

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

1 Min Read

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

1 Min Read

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

2 Mins Read
Recent News

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

State News
KARNATAKA

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು…

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.