ಕೇರಳ : ಪೋಷಕರ ನಿರ್ಲಕ್ಷದಿಂದ ಅದೆಷ್ಟೋ ಹಸುಗೂಸುಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಇದೀಗ ಕೇರಳದಲ್ಲಿ ಸಹ ಇಂತಹದ್ದೆ ಘಟನೆ ನಡೆದಿದ್ದು ಆಟವಾಡುತ್ತಾ ಅಡುಗೆಮನೆಗೆ ಸೇರಿದ ಮಗುವೊಂದು ಬಿಂದಿಗೆಯಲ್ಲಿ ಸಿಲುಕಿರುವ ಘಟನೆ ಕೇರಳದ ಮಲ್ಲಪ್ಪುರಂ ಜಿಲ್ಲೆಯ ತಿರುವಾಲಿ ಎಂಬ ಗ್ರಾಮದಲ್ಲಿ ನಡೆದಿದೆ.
ತಿರುವಳ್ಳಿಯಲ್ಲಿ ಮಗು ಒಂದು ಆಟವಾಡುತ್ತಾ ಅಡಿಗೆ ಮನೆಗೆ ಹೋಗಿದೆ. ಈ ವೇಳೆ ಅಲ್ಲಿರುವ ಬಿಂದಿಗೆ ಒಳಗೆ ಮಗು ಕುಳಿತಿದೆ. ಆದರೆ ಮಗು ಬಿಂದಿಗೆಯಿಂದ ಹೊರಬರಲು ಆಗದೆ ನರಳಾಡಿದೆ. ಈ ವೇಳೆ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬಿಂದಿಗೆಯನ್ನು ಕಟ್ ಮಾಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.








