Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುದ್ಧದ ಭೀತಿ: ಹೋರ್ಮುಜ್ ಜಲಸಂಧಿ ಬಳಿ ಇರಾನ್ ಹಡಗು ತಡೆದ ಅಮೆರಿಕ ನೌಕಾಪಡೆ; ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ

20/04/2026 6:46 AM

BIG NEWS : `ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಅಗ್ಗದ `ಎಣ್ಣೆ’ ಬಾಟಲ್ 10-20 ರೂ. ಹೆಚ್ಚಳ.!

20/04/2026 6:45 AM

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸ್ಯಾಟಲೈಟ್ ಫೋನ್‌ನೊಂದಿಗೆ ಅಮೆರಿಕ ಪ್ರಜೆ ಮತ್ತು ಕೋಲ್ಕತ್ತಾ ಮೂಲದ ವ್ಯಕ್ತಿ ವಶಕ್ಕೆ

20/04/2026 6:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಅಗ್ಗದ `ಎಣ್ಣೆ’ ಬಾಟಲ್ 10-20 ರೂ. ಹೆಚ್ಚಳ.!
KARNATAKA

BIG NEWS : `ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಅಗ್ಗದ `ಎಣ್ಣೆ’ ಬಾಟಲ್ 10-20 ರೂ. ಹೆಚ್ಚಳ.!

By kannadanewsnow5720/04/2026 6:45 AM

ಬೆಂಗಳೂರು: ರಾಜ್ಯದ ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು (Alcohol in Beverage – AiB) ಆಧರಿಸಿ ತೆರಿಗೆ ವಿಧಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರಿಂದಾಗಿ ಅಗ್ಗದ ದರದ ಮದ್ಯದ ಬಾಟಲಿಗಳ ಬೆಲೆ ಸರಾಸರಿ 10 ರಿಂದ 20 ರೂಪಾಯಿಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

 ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ನಿಗದಿಪಡಿಸುವ ‘ಐಬಿ’ (AiB) ವ್ಯವಸ್ಥೆ ಮುಂದಿನ ವಾರದಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಸರ್ಕಾರವು ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಯಲ್ಲಿ ತಿದ್ದುಪಡಿ ಮಾಡಲು ಶನಿವಾರ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಜಾರಿಯಾದಲ್ಲಿ ಆಲ್ಕೋಹಾಲ್-ಇನ್-ಬೇವರೇಜ್ (AIB) ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ವ್ಯವಸ್ಥೆ ಇದ್ದರೂ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮದ್ಯದ ಪ್ರಮಾಣದ ಬದಲಿಗೆ ಅದರಲ್ಲಿನ ನಿಜವಾದ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಕ್ರಮಕ್ಕೆ ರಾಜ್ಯ ಮುಂದಾಗಿದೆ.

ಈಗಾಗಲೇ MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದಲ್ಲಿಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿ ಆಗಲಿದೆ. ಈ ವಿಭಾಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ. 42.8ರಷ್ಟಿದೆ. ಇವೇ ನಾಲ್ಕು ಸ್ಲ್ಯಾಬ್‌ಗಳು ಒಟ್ಟು ಎಕ್ಸೈಸ್ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿದ್ದು, ಕಳೆದ ವರ್ಷ 180 ಮಿಲಿ ಮದ್ಯದ ಬೆಲೆ 80ರಿಂದ 95 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಹೊಸ ತೆರಿಗೆ ವ್ಯವಸ್ಥೆಯ ನಂತರ 105-110ರೂಪಾಯಿವರೆಗೆ ದರ ಏರಿಕೆಯಾಗಬಹುದು ಎನ್ನಲಾಗಿದೆ.

ಯಾವ ಮದ್ಯಕ್ಕೆ ಅನ್ವಯ? ಈ ಹೊಸ ವ್ಯವಸ್ಥೆಯು ಮುಖ್ಯವಾಗಿ ಕಡಿಮೆ ದರದ (Cheap Liquor) ಮದ್ಯದ ಬ್ರ್ಯಾಂಡ್ಗಳಾದ ಒರಿಜಿನಲ್ ಚಾಯ್ಸ್, ಹಯ್ವರ್ಡ್ಸ್, ರಾಜಾ ವಿಸ್ಕಿ ಸೇರಿದಂತೆ ಮೊದಲ 4 ಸ್ಲ್ಯಾಬ್ಗಳ ಅಡಿಯಲ್ಲಿ ಬರುವ ಮದ್ಯಕ್ಕೆ ಅನ್ವಯಿಸಲಿದೆ.  ಪ್ರಸ್ತುತ ಇರುವ 16 ಮದ್ಯದ ಸ್ಲ್ಯಾಬ್ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ 8 ಸ್ಲ್ಯಾಬ್ಗಳಿಗೆ ಇಳಿಸಲು ಸರ್ಕಾರ ನಿರ್ಧರಿಸಿದೆ.

ಅಂದಾಜು ದರ ಪಟ್ಟಿ (180 ಎಂ.ಎಲ್ ಮದ್ಯಕ್ಕೆ):

ಮದ್ಯದ ಬ್ರ್ಯಾಂಡ್ ಪ್ರಸ್ತುತ ದರ (ರೂ.) ಹೊಸ ದರ (ರೂ.)
ಒರಿಜಿನಲ್ ಚಾಯ್ಸ್ 95 115
ಓಲ್ಡ್ ಟಿವರ್ನ್ 80 100
ರಾಜಾ ವಿಸ್ಕಿ 70 95
ಹಯ್ವರ್ಡ್ಸ್ 100 120
BIG NEWS: Big shock for `alcohol' lovers: Cheap `oil' bottle price increased by Rs. 10-20!
Share. Facebook Twitter LinkedIn WhatsApp Email

Related Posts

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : ನಾಳೆಯಿಂದ `RTE’ ಉಚಿತ ಸೀಟಿಗೆ ಅರ್ಜಿ ಸಲ್ಲಿಕೆ ಆರಂಭ

20/04/2026 6:37 AM1 Min Read

BIG NEWS : ಏ.24ಕ್ಕೆ `ಕರ್ನಾಟಕ SSLC ಪರೀಕ್ಷೆ ಫಲಿತಾಂಶ’ ಪ್ರಕಟ ಡೌಟ್.!

20/04/2026 6:14 AM1 Min Read

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯ ಕೃಷಿ ಇಲಾಖೆಯಲ್ಲಿ 258 ಹುದ್ದೆಗಳಿಗೆ ಅರ್ಜಿ ಆಹ್ವಾನ

20/04/2026 6:11 AM2 Mins Read
Recent News

ಯುದ್ಧದ ಭೀತಿ: ಹೋರ್ಮುಜ್ ಜಲಸಂಧಿ ಬಳಿ ಇರಾನ್ ಹಡಗು ತಡೆದ ಅಮೆರಿಕ ನೌಕಾಪಡೆ; ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ

20/04/2026 6:46 AM

BIG NEWS : `ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಅಗ್ಗದ `ಎಣ್ಣೆ’ ಬಾಟಲ್ 10-20 ರೂ. ಹೆಚ್ಚಳ.!

20/04/2026 6:45 AM

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸ್ಯಾಟಲೈಟ್ ಫೋನ್‌ನೊಂದಿಗೆ ಅಮೆರಿಕ ಪ್ರಜೆ ಮತ್ತು ಕೋಲ್ಕತ್ತಾ ಮೂಲದ ವ್ಯಕ್ತಿ ವಶಕ್ಕೆ

20/04/2026 6:40 AM

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : ನಾಳೆಯಿಂದ `RTE’ ಉಚಿತ ಸೀಟಿಗೆ ಅರ್ಜಿ ಸಲ್ಲಿಕೆ ಆರಂಭ

20/04/2026 6:37 AM
State News
KARNATAKA

BIG NEWS : `ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಅಗ್ಗದ `ಎಣ್ಣೆ’ ಬಾಟಲ್ 10-20 ರೂ. ಹೆಚ್ಚಳ.!

By kannadanewsnow5720/04/2026 6:45 AM KARNATAKA 2 Mins Read

ಬೆಂಗಳೂರು: ರಾಜ್ಯದ ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು (Alcohol in Beverage – AiB)…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ : ನಾಳೆಯಿಂದ `RTE’ ಉಚಿತ ಸೀಟಿಗೆ ಅರ್ಜಿ ಸಲ್ಲಿಕೆ ಆರಂಭ

20/04/2026 6:37 AM

BIG NEWS : ಏ.24ಕ್ಕೆ `ಕರ್ನಾಟಕ SSLC ಪರೀಕ್ಷೆ ಫಲಿತಾಂಶ’ ಪ್ರಕಟ ಡೌಟ್.!

20/04/2026 6:14 AM

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯ ಕೃಷಿ ಇಲಾಖೆಯಲ್ಲಿ 258 ಹುದ್ದೆಗಳಿಗೆ ಅರ್ಜಿ ಆಹ್ವಾನ

20/04/2026 6:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.