Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ಹಾರ್ಮುಜ್ ಜಲಸಂಧಿ ದಾಟಿದ 7ನೇ ಭಾರತೀಯ ಎಲ್‌ಪಿಜಿ ಟ್ಯಾಂಕರ್; ಇನ್ನೂ 17 ಹಡಗುಗಳ ಬಾಕಿ!

04/04/2026 6:21 PM

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

04/04/2026 6:18 PM

ಅಮೆರಿಕಕ್ಕೆ ಮತ್ತೆ ಶಾಕ್: ಕುವೈತ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ಪತನದ ಫೋಟೋ ಬಿಡುಗಡೆ ಮಾಡಿದ ಇರಾನ್!

04/04/2026 6:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ
KARNATAKA

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

By kannadanewsnow0904/04/2026 6:18 PM

ಬಾಗಲಕೋಟೆ : ಬಡವರಿಗೆ ಶಕ್ತಿ ತುಂಬವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಜನರು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಬಾಗಲಕೋಟೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನಾ ಸಂಘ ಸಂಸ್ಥೆಗಳ ಮುಖಂಡರುಗಳ ಜೊತೆಗೆ ಸಭೆ ನಡೆಸಿ ಮಾತನಾಡಿದರು.

ಬಾಗಲಕೋಟೆಯ ಜನಪ್ರತಿನಿಧಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಹೆಚ್.ವೈ. ಮೇಟಿಯವರು ಅಕಾಲಿಕ ನಿಧನರಾದ ಕಾರಣದಿಂದ ಅವರ ಪುತ್ರ ಉಮೇಶ್ ಮೇಟಿ ಯವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಉಮೇಶ್ ಅವರನ್ನು ಜನರು ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಮುಖ್ಯಮಂತ್ರಿಗಳು ಕೋರಿದರು.

ತಳಸಮುದಾಯವದರಿಗೆ ಆರ್ಥಿಕ ಸಾಮಾಜಿಕ ಶಕ್ತಿ ಅಗತ್ಯ

ನಮ್ಮ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಲ ತುಂಬಲು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಿಂದ ಎಲ್ಲಾ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದೆ. ಇದುವರೆಗೆ 1.31 ಲಕ್ಷ ಕೋಟಿಯನ್ನು ಗ್ಯಾರಂಟಿಗಳಿಗೆ ವ್ಯಯಿಸಲಾಗಿದೆ ಎಂದರು.

ವಿಬಿಜಿರಾಮ್ ಜಿ ಕಾಯ್ದೆ ಉದ್ಯೋಗದ ಭರವಸೆ ನುಂಗಿದೆ

ಸಮಪಾಲು, ಸಮಬಾಳು ಎನ್ನುವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರ. ಕೇಂದ್ರ ಸರ್ಕಾರ ಉದ್ಯೋಗದ ಭರವಸೆಯನ್ನು ನುಂಗುವ ವಿಬಿಜಿರಾಮ್ ಜಿ ಯೋಜನೆಯನ್ನು ತರಲಾಗಿದೆ. ಕೇಂದ್ರ ಬಿಜೆಪಿಯವರಿಂದ ಕೇವಲ ಕಾರ್ಪೊರೇಟ್ ಶಕ್ತಿಗಳು ಬಲಗೊಳ್ಳುತ್ತಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ ಎಂದರು.

ಬಾಗಲಕೋಟೆ ವೈದ್ಯಕೀಯ ಕಾಲೇಜು-ಹೆಚ್.ವೈ.ಮೇಟಿ ಕನಸು

ಹೆಚ್.ವೈ.ಮೇಟಿಯವರು 5 ಬಾರಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ ಜನಾನುರಾಗಿ ನಾಯಕರಾಗಿದ್ದರು, ಜಾತಿಬೇಧವಿಲ್ಲದೇ ಜನರ ಸೇವೆ ಸಲ್ಲಿಸಿದವರು. ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಕನಸು ಕಂಡಿದ್ದರು. ಅದರಂತೆ ಇಲ್ಲಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆಯನ್ನು ಮಾಡಲಾಗಿದೆ. ಆದ್ದರಿಂದ ಬಾಗಲಕೋಟೆಯ ಅಭಿವೃದ್ಧಿಗೆ ಶ್ರಮಿಸಿದ ಹೆಚ್.ವೈ.ಮೇಟಿಯವರ ಪುತ್ರ ಉಮೇಶ್ ಮೇಟಿಯವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಕೋರಿದರು.

ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ಪಕ್ಷ ನಮ್ಮದು

ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಟ್ಟುಕೊಂಡಿರುವ ಪಕ್ಷ ನಮ್ಮದು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ರಕ್ಷಣೆ ದೊರೆಯಬೇಕು. ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಶಕ್ತಿ ಯಿಲ್ಲದವರಿಗೆ ಆದ್ಯತೆ ಮೇರೆಗೆ ರಕ್ಷಣೆ ನೀಡಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಇದು ನಮ್ಮ ಸರ್ಕಾರದ ಧ್ಯೇಯ ಎಂದರು.

ಕಾಂಗ್ರೆಸ್ ಎಲ್ಲಾ ಕಾಲದಲ್ಲಿಯೂ ಬಡವರ ಪರವಾಗಿ ಕೆಲಸ ಮಾಡಿದೆ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಹಾಗಾಗಿ ಎಲ್ಲರೂ ಕಾಂಗ್ರೆಸ್ ಪಕ್ಷ ವನ್ನು ಬೆಂಬಲಿಸಬೇಕು. ಬಿಜೆಪಿ ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದರು. ಸ್ವಾತಂತ್ರ್ಯ ಲಭಿಸದೆ ಹೋಗಿದ್ದರೆ ನಾವು ಗುಲಾಮರಾಗಿಯೇ ಇರುತ್ತಿದ್ದೆವು. ಕಾಂಗ್ರೆಸ್ ಎಲ್ಲಾ ಕಾಲದಲ್ಲಿಯೂ ಬಡವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ಬಿಜೆಪಿಯವರು ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರ ಮಾಡಿದ್ದಾರೆ. ಏನು ಮಾಡಿದ್ದಾರೆ ಎಂದು ಅವರು ಜನರ ಮುಂದೆ ಹೇಳುವುದೇ ಇಲ್ಲ. ಅದರ ಬದಲಿಗೆ ನಮ್ಮ ಸರ್ಕಾರವನ್ನು ಟೀಕೆ , ಅಪಪ್ರಚಾರ ಮಾಡಿಕೊಂಡು ಓಡಾಡಿದ್ದಾರೆ. ಬಿಜೆಪಿ ನುಡಿದಂತೆ ನಡೆದ ಪಕ್ಷವಲ್ಲ ಎಂದರು.

ಬಿಜೆಪಿ ನುಡಿದಂತೆ ನಡೆದಿಲ್ಲ

ನರೇಂದ್ರ ಮೋದಿಯವರು 2014 ರಲ್ಲಿ ಹೇಳಿದ್ದನ್ನು ಇಲ್ಲಿಯವರೆಗೂ ಜಾರಿ ಮಾಡಿಲ್ಲ. ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಬಡತನ ಹೋಗುತ್ತದೆ, ನಿರುದ್ಯೋಗ ಹೋಗಲಾಡಿಸಲಾಗುತ್ತದೆ, ರೈತರ ಆದಾಯ ದುಪ್ಪಟಾಗುತ್ತದೆ ಎಂದೆಲ್ಲಾ ಹೇಳಿದ್ದರು. ಒಳ್ಳೆ ದಿನಗಳು ಬರಲಿಲ್ಲ, ರೈತರ ಆದಾಯವೂ ಎರಡು ಪಟ್ಟು ಆಗಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿ ಮನೆಗೆ 15 ಲಕ್ಷ ರೂಪಾಯಿ ಕೊಡುತ್ತೇನೆ ಎಂದಿದ್ದರು, ಕೊಟ್ಟರೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಬಿಜೆಪಿ 28 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದರೆ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ

ದೇಶದಲ್ಲಿ ರೈತರಿಗೆ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ಮಲ ಹೊರುವ ಪದ್ದತಿ ನಿಷೇಧ, ಸಾಲ ಮನ್ನಾ ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಬಿಜೆಪಿ 28 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದರೆ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ನಮ್ಮ ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿ ಮಾಡಿದೆ. ಇದನ್ನು ಬಿಜೆಪಿ ಏಕೆ ಮಾಡಲಿಲ್ಲ ಎಂದರು.

ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಪ್ರತಿಯೊಬ್ಬರೂ , ಸಾಮಾಜಿಕ, ಶೈಕ್ಷಣಿಕವಾಗಿ ಪ್ರಬಲರಾಗಬೇಕು

ಅಂತ್ಯೋದಯ, ಸರ್ವೋದಯ ಮಂತ್ರವನ್ನು ಮಹಾತ್ಮಾ ಗಾಂಧಿ ನೀಡಿದ್ದರು. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಪ್ರತಿಯೊಬ್ಬರೂ , ಸಾಮಾಜಿಕ, ಶೈಕ್ಷಣಿಕವಾಗಿ ಪ್ರಬಲರಾಗಬೇಕು ಎಂದರು.

Watch Video: ಸತ್ತ ಮಾನವೀಯತೆ: ಅಮ್ಮ ಎದ್ದೇಳು ಪ್ಲೀಸ್, ಪ್ರಜ್ಞಾಹೀನ ತಾಯಿಯ ಬಾಯಿಗೆ ನೀರು ಸುರಿದ ಕಂದನ ವೀಡಿಯೋ ವೈರಲ್

BIG Alert: ‘ಆನ್‌ಲೈನ್‌’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!

Share. Facebook Twitter LinkedIn WhatsApp Email

Related Posts

ಪೋಕ್ಸೋ ಕೇಸಲ್ಲಿ ಮಕ್ಕಳ ಸುರಕ್ಷತೆಗೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಜಾರಿ

04/04/2026 5:30 PM2 Mins Read

ಬೆಂಗಳೂರಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಅರ್ಧದಷ್ಟು ‘ಬಂಕ್‌’ಗಳು ಬಂದ್, ಆಟೋ ಚಾಲಕರು ಕಂಗಾಲು

04/04/2026 5:18 PM1 Min Read

ಶಿವಮೊಗ್ಗದ ರಂಗಾಯಣದಿಂದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ

04/04/2026 5:14 PM2 Mins Read
Recent News

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ಹಾರ್ಮುಜ್ ಜಲಸಂಧಿ ದಾಟಿದ 7ನೇ ಭಾರತೀಯ ಎಲ್‌ಪಿಜಿ ಟ್ಯಾಂಕರ್; ಇನ್ನೂ 17 ಹಡಗುಗಳ ಬಾಕಿ!

04/04/2026 6:21 PM

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

04/04/2026 6:18 PM

ಅಮೆರಿಕಕ್ಕೆ ಮತ್ತೆ ಶಾಕ್: ಕುವೈತ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ಪತನದ ಫೋಟೋ ಬಿಡುಗಡೆ ಮಾಡಿದ ಇರಾನ್!

04/04/2026 6:13 PM

ಅಮೆರಿಕದಲ್ಲಿ ಟ್ರಂಪ್ ಹೊಸ ದಾಳ: ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಈಗ ದೇಶದ ‘ಫ್ರಾಡ್ ಸಾರ್’! ಏನಿದು ಹೊಸ ಹುದ್ದೆ?

04/04/2026 6:07 PM
State News
KARNATAKA

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

By kannadanewsnow0904/04/2026 6:18 PM KARNATAKA 3 Mins Read

ಬಾಗಲಕೋಟೆ : ಬಡವರಿಗೆ ಶಕ್ತಿ ತುಂಬವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಜನರು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು…

ಪೋಕ್ಸೋ ಕೇಸಲ್ಲಿ ಮಕ್ಕಳ ಸುರಕ್ಷತೆಗೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಜಾರಿ

04/04/2026 5:30 PM

ಬೆಂಗಳೂರಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಅರ್ಧದಷ್ಟು ‘ಬಂಕ್‌’ಗಳು ಬಂದ್, ಆಟೋ ಚಾಲಕರು ಕಂಗಾಲು

04/04/2026 5:18 PM

ಶಿವಮೊಗ್ಗದ ರಂಗಾಯಣದಿಂದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ

04/04/2026 5:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.