ಮುಂಬೈ: ಜಾಗತಿಕ ರಾಜಕೀಯ ಉದ್ವಿಗ್ನತೆ, ವಿಶೇಷವಾಗಿ ಇರಾನ್ ಮತ್ತು ಇಸ್ರೇಲ್/ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷವು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತ ಕಂಡಿದ್ದು, ಕಳೆದ ಆರು ವರ್ಷಗಳಲ್ಲೇ ಮಾರುಕಟ್ಟೆ ಅತ್ಯಂತ ಕೆಟ್ಟ ಮಾಸಿಕ ನಷ್ಟವನ್ನು ಅನುಭವಿಸುವ ಹಾದಿಯಲ್ಲಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ (Sensex) ಸುಮಾರು 1,100 ಪಾಯಿಂಟ್ಗಳಿಗೂ ಹೆಚ್ಚು ಕುಸಿತ ಕಂಡರೆ, ನಿಫ್ಟಿ (Nifty 50) 22,500 ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ.ಈ ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯು ಸುಮಾರು 10.5% ರಷ್ಟು ನಷ್ಟ ಅನುಭವಿಸಿದೆ. ಇದು 2020ರ ಕೊರೊನಾ ಲಾಕ್ಡೌನ್ ನಂತರದ ಅತಿದೊಡ್ಡ ಮಾಸಿಕ ಕುಸಿತ ಎನ್ನಲಾಗಿದೆ.
ಯುದ್ಧದ ಕಾರಣದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಬೃಹತ್ ಪ್ರಮಾಣದಲ್ಲಿ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಯುದ್ಧವು ಜಾಗತಿಕ ಆರ್ಥಿಕತೆಯ ಮೇಲೆ ಕಪ್ಪುಛಾಯೆ ಬೀರಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ.
ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ $114 ದಾಟಿರುವುದು ಹಣದುಬ್ಬರದ ಭೀತಿಯನ್ನು ಹೆಚ್ಚಿಸಿದೆ.ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ








