ದೆಹಲಿ : ರಾಜಧಾನಿಯಲ್ಲಿ ‘ವೃಕ್ಷಿತ್ ಫೌಂಡೇಶನ್’ ನಡೆಸಿದ ಸ್ವಚ್ಛತಾ ಅಭಿಯಾನದ ವೇಳೆ ಸ್ವಯಂಸೇವಕರಿಗೆ ಕಸದ ರಾಶಿಯಡಿ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹೌದು ಸ್ವಚ್ಛತಾ ಕಾರ್ಯದ ವೇಳೆ ಕಸದ ರಾಶಿಯಡಿ ಅಸ್ಥಿಪಂಜರ ಸಿಕ್ಕಿರುವ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ‘ವೃಕ್ಷಿತ್ ಫೌಂಡೇಶನ್’ ನೇತೃತ್ವದಲ್ಲಿ ಈ ಕ್ಲೀನಿಂಗ್ ಡ್ರೈವ್ ನಡೆಯುತ್ತಿತ್ತು. ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಸ್ವಯಂಸೇವಕರು ದೊಡ್ಡ ಕಸದ ರಾಶಿಯನ್ನು ತೆರವುಗೊಳಿಸುತ್ತಿದ್ದರು. ಆಗ, ಅದರ ಕೆಳಗೆ ಮನುಷ್ಯನ ಮೂಳೆಗಳಂತೆ ಕಾಣುವ ವಸ್ತುಗಳು ಪತ್ತೆಯಾಗಿವೆ.
ದೆಹಲಿಯಲ್ಲಿ ‘ವೃಕ್ಷಿತ್ ಫೌಂಡೇಶನ್’ ಸ್ವಯಂಸೇವಕರು ಸ್ವಚ್ಛತಾ ಕಾರ್ಯಕ್ರಮವೊಂದನ್ನು ನಡೆಸುತ್ತಿದ್ದರು. ಈ ವೇಳೆ, ಕಸದ ರಾಶಿಯ ಕೆಳಗೆ ಅವರಿಗೆ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಇದನ್ನು ನೋಡಿದ ತಕ್ಷಣ ಅವರು ಕ್ಲೀನಿಂಗ್ ಕೆಲಸ ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಫೋರೆನ್ಸಿಕ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವಶೇಷಗಳನ್ನು ಕಲೆಕ್ಟ್ ಮಾಡಿದ್ದಾರೆ.








