Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

13/03/2026 2:06 PM

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

13/03/2026 2:02 PM

BREAKING : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಕೇಸ್ : ಕೋರ್ಟ್ ಗೆ 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

13/03/2026 1:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ
KARNATAKA

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

By kannadanewsnow0513/03/2026 2:02 PM

ಬೆಂಗಳೂರು : ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಆದ್ಯತಾ ಪಡಿತರ ಚೀಟಿಗೆ (ಬಿಪಿಎಲ್ ಕಾರ್ಡ್) ಸಂಬಂಧಿಸಿದಂತೆ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ಈಗಿರುವ 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡುವ ಚಿಂತನೆಯಿದೆ ಎಂದು ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಪಿಎಲ್ ಕಾರ್ಡ್ ಪಡೆಯಲು ಈಗ ಇರುವ ನಿಯಮಗಳು 2017ರಲ್ಲಿ ರಚನೆಯಾಗಿದ್ದು, ಈಗ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ 8 ವರ್ಷದಿಂದ ಅದೇ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದರು.

ಅದರಲ್ಲೂ ಇಡೀ ರಾಜ್ಯಕ್ಕೆ ಈ ನಿಯಮಗಳನ್ನು ಅನ್ವಯಿಸುವುದೂ ಸರಿಯಲ್ಲ. ಬೆಂಗಳೂರಿನ ಜೀವನ ನಿರ್ವಹಣಾ ವೆಚ್ಚಕ್ಕೂ, ಗ್ರಾಮಾಂತರ ಪ್ರದೇಶಗಳ ನಿರ್ವಹಣಾ ವೆಚ್ಚಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಎರಡೂ ಪ್ರದೇಶಗಳಿಗೆ ಏಕರೂಪದ ಆದಾಯ ಮಿತಿ ನಿಗದಿಪಡಿಸುವುದು ತಪ್ಪು. ಇದನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ವಿಧವೆಯರು, ವಿಕಲಚೇತನರು, ಮಾರಕ ರೋಗಗಳಿಂದ ಬಳಲುತ್ತಿರುವವರ ಕುಟುಂಬಕ್ಕೆ ಬಿಪಿಎಲ್‌ಗಿಂತ ಅಂತ್ಯೋದಯ ಅನ್ನ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಇಂತಹ ಎಷ್ಟೋ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ಕೊಡಲಾಗಿದೆ. ಟ್ಯಾಕ್ಸಿ, ಆಟೋ ಚಾಲಕರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಇವೆಲ್ಲ ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಮುಖ್ಯ ಮಾಹಿತಿ:

  • ಪರಿಷ್ಕರಣೆಯ ಅಗತ್ಯ: ಪ್ರಸ್ತುತ ಇರುವ 1.20 ಲಕ್ಷ ರೂ. ಆದಾಯ ಮಿತಿಯನ್ನು 2017 ರಲ್ಲಿ ನಿಗದಿಪಡಿಸಲಾಗಿತ್ತು. ಕಳೆದ 9 ವರ್ಷಗಳಲ್ಲಿ ಜೀವನ ವೆಚ್ಚ ಮತ್ತು ಜನರ ಆದಾಯದಲ್ಲಿ ಬದಲಾವಣೆಯಾಗಿರುವುದರಿಂದ ಈ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

  • ಆಡಳಿತ ಸುಧಾರಣಾ ಆಯೋಗದ ಶಿಫಾರಸು: ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಿದೆ.

  • ಯಾರಿಗೆ ಲಾಭ?: ಈ ನಿಯಮ ಜಾರಿಗೆ ಬಂದರೆ, ಪ್ರಸ್ತುತ ಅಲ್ಪ ಆದಾಯ ಹೆಚ್ಚಿದ್ದರೂ ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗಿದ್ದ ಅನೇಕ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ವಿಶೇಷವಾಗಿ ನಗರ ಪ್ರದೇಶದ ಜನರಿಗೆ ಇದು ದೊಡ್ಡ ನೆಮ್ಮದಿ ನೀಡಲಿದೆ.

  • ಇತರ ಸೌಲಭ್ಯಗಳು: ಬಿಪಿಎಲ್ ಕಾರ್ಡ್ ಕೇವಲ ಆಹಾರ ಧಾನ್ಯಗಳಿಗೆ ಮಾತ್ರವಲ್ಲದೆ, ಆಯುಷ್ಮಾನ್ ಭಾರತ್ ಅಡಿ ಆರೋಗ್ಯ ಸೇವೆ ಪಡೆಯಲು ಮತ್ತು ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಪ್ರಮುಖ ದಾಖಲೆಯಾಗಿದೆ.

  • ಪಡಿತರ ಚೀಟಿದಾರರಿಗೆ ಸಲಹೆ:

    1. ನಿಮ್ಮ ಪಡಿತರ ಚೀಟಿಗೆ ಎಲ್ಲಾ ಸದಸ್ಯರ ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

    2. ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

    3. ಹೊಸ ಆದಾಯ ಮಿತಿ ಜಾರಿಯಾದಾಗ ಸುಲಭವಾಗಿ ಅರ್ಜಿ ಸಲ್ಲಿಸಲು ನಿಮ್ಮ ಆದಾಯ ಪ್ರಮಾಣಪತ್ರವನ್ನು ನವೀಕರಿಸಿ ಇಟ್ಟುಕೊಳ್ಳಿ.

Share. Facebook Twitter LinkedIn WhatsApp Email

Related Posts

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

13/03/2026 2:06 PM1 Min Read

BREAKING : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಕೇಸ್ : ಕೋರ್ಟ್ ಗೆ 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

13/03/2026 1:53 PM1 Min Read

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

13/03/2026 1:16 PM3 Mins Read
Recent News

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

13/03/2026 2:06 PM

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

13/03/2026 2:02 PM

BREAKING : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಕೇಸ್ : ಕೋರ್ಟ್ ಗೆ 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

13/03/2026 1:53 PM

BIG NEWS : ವರ್ಗಾವಣೆಗೊಂಡ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ದಿನಾಂಕ ನಿಗದಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

13/03/2026 1:50 PM
State News
KARNATAKA

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

By kannadanewsnow0513/03/2026 2:06 PM KARNATAKA 1 Min Read

ಮೈಸೂರು : ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ನನ್ನಂತೆ ಯತಿಂದ್ರನನ್ನು ಬೆಳೆಸಿ ಎಂದು ಮೈಸೂರು ಜಿಲ್ಲೆಯ ವರುಣ ಕ್ಷೇತ್ರ…

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

13/03/2026 2:02 PM

BREAKING : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಕೇಸ್ : ಕೋರ್ಟ್ ಗೆ 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

13/03/2026 1:53 PM

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

13/03/2026 1:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.