ಟೆಹ್ರಾನ್ : ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮುಜ್ತಬಾ ಖಮೇನಿ ಅವರ ಸುತ್ತ ಈಗ ಅಭೇದ್ಯ ಕೋಟೆಯೊಂದು ನಿರ್ಮಾಣವಾಗಿದೆ.
ಇರಾನ್‌ನ ಅತ್ಯಂತ ಕ್ರೂರ ಮತ್ತು ಶಕ್ತಿಶಾಲಿ ಪಡೆಯೆಂದು ಕರೆಯಲ್ಪಡುವ ‘NOPO’ (ನೋಪೋ) ಪಡೆಯ ಕಾವಲು ಈಗ ಮುಜ್ತಬಾ ಅವರನ್ನ ಸುತ್ತುವರೆದಿದೆ. ಇದು ಇರಾನ್‌ನಲ್ಲಿ ಮುಂದಿನ ಅಧಿಕಾರ ಬದಲಾವಣೆಯ ದಿಕ್ಸೂಚಿಯೇ ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ಶುರುವಾಗಿದೆ.
ಏನಿದು NOPO ರಹಸ್ಯ?
NOPO ಅಂದರೆ ‘ನಿರುಯೆ ವಿಝೆ-ಯೆ ಪಾಸ್ಬನ್-ಎ ವೆಲಾಯತ್’ (Niruye Vizhe-ye Pasban-e Velayat). ಇದನ್ನು ಇಂಗ್ಲಿಷ್‌ನಲ್ಲಿ “Special Force of the Guardians of the Velayat” ಎಂದು ಕರೆಯಲಾಗುತ್ತದೆ. ಇವರನ್ನು ಸಾಮಾನ್ಯವಾಗಿ ಇರಾನ್‌ನ ‘ಬ್ಲ್ಯಾಕ್ ಸ್ಕ್ವಾಡ್’ (Black Squad) ಎಂದು ಗುರುತಿಸಲಾಗುತ್ತದೆ.
* ಯಮದೂತರ ಕಾವಲು:
ಇವರು ಸಂಪೂರ್ಣ ಕಪ್ಪು ಉಡುಪು ಧರಿಸಿ, ಮುಖವಾಡ ತೊಟ್ಟು ಕಾರ್ಯಾಚರಣೆ ನಡೆಸುತ್ತಾರೆ. ಇವರ ತರಬೇತಿ ಎಷ್ಟು ಕಠಿಣವಾಗಿರುತ್ತದೆ ಎಂದರೆ, ಇವರನ್ನು ಎದುರಿಸುವುದು ಸಾವಿಗೆ ಸವಾಲು ಹಾಕಿದಂತೆ ಎಂಬ ಮಾತಿದೆ.
* ನೇರ ನಿಯಂತ್ರಣ:
ಈ ಪಡೆಯು ಯಾರಿಗೂ ಉತ್ತರದಾಯಿಯಲ್ಲ, ಕೇವಲ ಸರ್ವೋಚ್ಚ ನಾಯಕನ ಆದೇಶದಂತೆ ಮಾತ್ರ ಕಾರ್ಯನಿರ್ವಹಿಸುತ್ತದೆ.
* ಕ್ರೂರ ಹಣೆಪಟ್ಟಿ:
2009 ಮತ್ತು 2022ರ ಇರಾನ್ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಈ ಪಡೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿತ್ತು ಎಂಬ ಆರೋಪವಿದೆ.
ಮುಜ್ತಬಾ ಖಮೇನಿ ಸುತ್ತ ಭದ್ರತೆ ಏಕಿದೆ?
* ಇರಾನ್‌ನ ಹಾಲಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರಿಗೆ ವಯಸ್ಸಾಗುತ್ತಿದ್ದು, ಅವರ ನಂತರ ಯಾರು? ಎಂಬ ಪ್ರಶ್ನೆ ಎದ್ದಿದೆ. ಈ ರೇಸ್‌ನಲ್ಲಿ ಅವರ ಪುತ್ರ ಮುಜ್ತಬಾ ಖಮೇನಿ ಹೆಸರು ಮುಂಚೂಣಿಯಲ್ಲಿದೆ.
* ಉತ್ತರಾಧಿಕಾರಕ್ಕೆ ಸಿದ್ಧತೆ:
ಮುಜ್ತಬಾ ಅವರಿಗೆ NOPO ಭದ್ರತೆ ನೀಡಿರುವುದು ಅವರು ಇರಾನ್‌ನ ಮುಂದಿನ ಶಕ್ತಿಶಾಲಿ ನಾಯಕ ಎನ್ನುವುದನ್ನು ಪರೋಕ್ಷವಾಗಿ ಸಾರುತ್ತಿದೆ.
* ಒಳಸಂಚಿನ ಭೀತಿ:
ಅಧಿಕಾರಕ್ಕಾಗಿ ಇರಾನ್‌ನ ಒಳಗಡೆಯೇ ವಿರೋಧಗಳು ವ್ಯಕ್ತವಾಗುವ ಸಾಧ್ಯತೆ ಇರುವುದರಿಂದ, ಮುಜ್ತಬಾ ಅವರಿಗೆ ಅತ್ಯಂತ ಕಟ್ಟುನಿಟ್ಟಿನ ‘ಬ್ಲ್ಯಾಕ್ ಸ್ಕ್ವಾಡ್’ ಕಾವಲು ಹಾಕಲಾಗಿದೆ.
* ರಹಸ್ಯ ವ್ಯಕ್ತಿತ್ವ:
ಮುಜ್ತಬಾ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ತೆರೆಮರೆಯಿಂದಲೇ ಇರಾನ್‌ನ ಗುಪ್ತಚರ ಮತ್ತು ಮಿಲಿಟರಿ ವ್ಯವಹಾರಗಳನ್ನು ಇವರೇ ನಿಯಂತ್ರಿಸುತ್ತಿದ್ದಾರೆ ಎನ್ನಲಾಗಿದೆ.








