ಚಾಮರಾಜನಗರ : ಶಾರ್ಟ್ ಸರ್ಕ್ಯೂಟ್ ನಿಂದ ಕೊಳ್ಳೇಗಾಲ ಸಿಪಿಐ ಕಚೇರಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಇಂದ ಹೊತ್ತಿದ ಬೆಂಕಿಯಿಂದ ಕಂಪ್ಯೂಟರ್ಗಳು ಮತ್ತು ದಾಖಲೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಚೇರಿ ಸಿಬ್ಬಂದಿಗಳು ನೀರು ಹಾಕಿ ನಂದಿಸಿದ್ದಾರೆ. ಸಿಪಿಐ ಕಚೇರಿಯಲ್ಲಿ ಬೆಂಕಿ ಆಕಸ್ಮಿಕವೊ? ಅಥವಾ ಪೂರ್ವನಿಯೋಜಿತವೊ? ಎನ್ನುವುದು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಟನಸ್ಳಕ್ಕೆ ಡಿ ವೈ ಎಸ್ ಪಿ ಧರ್ಮೇಂದ್ರ ಬೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸಿಪಿಐ ಕಚೇರಿಯಲ್ಲಿ ಅಗ್ನಿಶಾಮಕ ದಳ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಗೆ ನಿಖರವಾದ ಕಾರಣ ಹುಡುಕುತ್ತಿದ್ದಾರೆ.








