ಬೆಂಗಳೂರು : ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಜಕ್ಕೂರು ವಿಲಾದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ.
ಕಾಲೇಜು ಯುವತಿರನ್ನೆ ಆರೋಪಿಗಳು ಟಾರ್ಗೆಟ್ ಮಾಡಿ ತಮ್ಮ ಬಲೆಗೆ ಬೀಳಿಸುತ್ತಿದ್ದರು ಆರೋಪಿಗಳಿಗೆ ಕಾಲೇಜು ಯುವತಿಯರೇ ಟಾರ್ಗೆಟ್ ಆಗಿದ್ದರು. ಯುವತಿರಿಗಾಗಿ ಡಿಕ್ಸನ್ ಮತ್ತು ನಿಖಿಲ್ ಸೇರಿ ಪ್ಲಾನ್ ಮಾಡುತ್ತಿದ್ದರು. ಕಾಲೇಜು ಯುವಕರನ್ನು ಬಳಿಗೆ ಬೀಳಿಸಲು ಪ್ಲಾನ್ ಮಾಡುತ್ತಿದ್ದರು. ಬಳಿಕ ಅವರಾಗಿ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಿ ಅತ್ಯಾಚಾರ ಎಸಗುತಿದ್ದರು.
ಯುವತಿಯರನ್ನು ವಿಲ್ಲಾದಲ್ಲಿ ಕರೆತಂದು ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಬಳಿಕ ಯುವತಿಯರ ಮೇಲೆ ಡಿಕ್ಸನ್ ಮತ್ತು ನಿಖಿಲ್ ಗ್ಯಾಂಗ್ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು. ಗೋವಾದಿಂದ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಿ ಬೆಂಗಳೂರು ಕಾಲೇಜು ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಡಿಕ್ಸನ್ ಮತ್ತು ನಿಖಿಲ್ ತಮ್ಮ ಗ್ಯಾಂಗ್ ನೊಂದಿಗೆ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು ಎಂದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.








