ಗದಗ : ಗದಗದಲ್ಲಿ ಘೋರ ಘಟನೆ ಒಂದು ಸಂಭವಿಸಿದ್ದು, ಅಕ್ರಮ ಗಣಿಗಾರಿಕೆಗೆ ನರ್ಸಿಂಗ್ ವಿದ್ಯಾರ್ಥಿ ಒಬ್ಬ ಬಲಿಯಾಗಿದ್ದಾನೆ. ಗದಗ ಜಿಲ್ಲೆಯ ಕಣಗಿನಾಳ ರಸ್ತೆಯ ಹೊಂಡದಲ್ಲಿ ಈ ಒಂದು ಘಟನೆ ನಡೆದಿದೆ. ಬೆಳಗಾವಿಯ ನರ್ಸಿಂಗ್ ವಿದ್ಯಾರ್ಥಿ ಆದಿತ್ಯ ಸ್ನಾನಕ್ಕೆಂದು ಹೊಂಡದಲ್ಲಿ ಇಳಿದಾಗ ನೀರಲ್ಲಿ ಮುಳುಗಿ ಸಾವನಪ್ಪಿದ್ದಾನೆ.
ನಿನ್ನೆ ಹೋಳಿ ಹಬ್ಬ ಆಚರಣೆ ಮಾಡಿ ಸ್ನಾನಕ್ಕೆ ಆರರಿಂದ ಏಳು ಗೆಳೆಯರ ಜೊತೆಗೆ ಹೋಗಿದ್ದರು. 30 ರಿಂದ 40 ಅಡಿ ಆಳದ ಕೊಂಡ ತೆಗೆದು ಗಣಿಗಾರಿಕೆ ಮಾಡಲಾಗುತ್ತಿತ್ತು. ನೀರಿನಲ್ಲಿ ಮುಳುಗಿ ಬೆಳಗಾವಿ ಮೂಲದ ವಿದ್ಯಾರ್ಥಿ ಆದಿತ್ಯ ಸಾವನ್ನಪ್ಪಿದ್ದಾನೆ. ಬಿಎಸ್ಸಿ ನರ್ಸಿಂಗ್ ಅಂತಿಮ ವರ್ಷ ಮುಗಿಸಿದ್ದ.
ವಿದ್ಯಾರ್ಥಿ ಆದಿತ್ಯ ಘಟನೆಯಲ್ಲಿ ಸಾವನಪ್ಪಿದ್ದಾನೆ. ಈ ಒಂದು ಸಾವಿಗೆ ಗಣಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿನ ಹೊಣೆಯನ್ನು ಗಣಿ ಇಲಾಖೆ ಹೊತ್ತು ಕೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.








