ಬೆಂಗಳೂರು : ಬೆಂಗಳೂರಿನ ಜಯ್ ಮಹಲ್ ಹಿಟ್ ಅಂಡ್ ರನ್ ಕೇಸ್ ಘಟನೆ ನಡೆದಿದ್ದು, ಬೈಕಿಗೆ ಗುದ್ದಿ ಇನೋವಾ ಚಾಲಕ ಎಳೆದೊಯ್ದಿದ್ದಾನೆ. ಡಿಕ್ಕಿ ರಭಸಕ್ಕೆ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ.
ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಹಿಟ್ ಅಂಡ್ ರನ್ನಿನ ದೃಶ್ಯ ಸೆರೆಯಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್ ನಿಂದ ಪೆಟ್ರೋಲ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮಹಿಳೆಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಾಗಿದೆ. ಅಪಘಾತ ಮಾಡಿದ ನಂತರ ಕಾರು ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ.








