ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ ಮಾಡಿ ಚಿಮುಲ್ ನಿರ್ಣಯ ಕೈಗೊಂಡಿದೆ.
ಕಳೆದ ಹೊಸ ವರ್ಷಕ್ಕೆ ಜನವರಿ 1 ರಂದು ಲೀಟರ್‌ಗೆ 1 ರೂಪಾಯಿ ಹೆಚ್ಚಳ ಮಾಡಿದ್ದ ಚಿಮುಲ್ ಈಗ ಮತ್ತೆ 50 ಪೈಸೆ ಏರಿಕೆ ಮಾಡಿದೆ. ಇದರಿಂದ ಹೈನುಗಾರರಿಗೆ ಪ್ರತಿ ಲೀಟರ್‌ಗೆ 36 ರೂಪಾಯಿ 40 ಪೈಸೆ ಸಿಗಲಿದ್ದು, ಮೇ ಅಂತ್ಯದವರೆಗೂ ಈ 50 ಪೈಸೆ ಹೆಚ್ಚಳ ಇರಲಿದೆ.
ಈಗಾಗಲೇ ಹೊಸ ವರ್ಷಕ್ಕೆ ಒಂದು ರೂಪಾಯಿ ಏರಿಕೆ ಮಾಡಿದ್ದು ಅಧಿಕ ಲಾಭ ಬಂದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಇದೀಗ 50 ಪೈಸೆ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭಾಂಶ ಬಂದರೆ ಹಾಲು ಉತ್ಪಾದಕರಿಗೆ ಮತ್ತಷ್ಟು ದರ ಹೆಚ್ಚಳ ಮಾಡುವ ಕುರಿತು ತೀರ್ಮಾನಿಸಲಾಗುತ್ತೆ ಎಂದು ಚಿಮುಲ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.








