ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ವಿಮಾನಗಳ ಹಾರಾಟ ರದ್ದಾಗಿದೆ.
ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಮತ್ತು ಆಗಮಿಸಬೇಕಿದ್ದ 24 ವಿಮಾನಗಳ ಹಾರಾಟ ರದ್ದಾಗಿದೆ. ಕೆಂಪೇಗೌಡ ಏರ್ಪೋರ್ಟ್ ನಿಂದ 12 ವಿಮಾನಗಳು ತಿರುಳಬೇಕಿತ್ತು. ಇನ್ನು ಅರಬ್ ರಾಷ್ಟ್ರಗಳಿಂದ 12 ವಿಮಾನಗಳು ಆಗಮಿಸಬೇಕಿತ್ತು. ಆದರೆ ಯುದ್ಧ ಮುಂದುವರೆದ ಹಿನ್ನೆಲೆಯಲ್ಲಿ ಆಗಮಿಸಬೇಕಿದ್ದ ಮತ್ತು ತೆರಳಬೇಕಿದ್ದ 24 ವಿಮಾನಗಳ ಹಾರಾಟ ರದ್ದಾಗಿದೆ.








