ಬೆಂಗಳೂರು : ಹಣಕಾಸು ವಂಚನೆ, ಮಾದಕ ವಸ್ತು ಮಾರಾಟ ಜಾಲ ಹಾಗೂ ದತ್ತಾಂಶ ಕಳವು ಸೇರಿ ಸೈಬರ್‌ಕೃತ್ಯಗಳನ್ನು ತಾಂತ್ರಿಕತೆ ಜೊತೆ ಕಠಿಣ ಕಾನೂನು ರೂಪಿಸಿ ಕಡಿವಾಣ ಹಾಕಬೇಕಿದೆ ಎಂದು ರಾಜ್ಯ ಗೃಹ ಮಂತ್ರಿ ಜಿ.ಪರಮೇಶ್ವರ್ ಹೇಳಿದರು.ಶನಿವಾರ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ), ಸೈಬರ್‌ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ 3ನೇ ವರ್ಷದ ‘ಸೈಬರ್‌ಅಪರಾಧ ತನಿಖಾ ಶೃಂಗಸಭೆ’ ಉದ್ಘಾಟಿಸಿ ಮಾತನಾಡಿದರು.
ಸೈಬರ್‌ಅಪರಾಧ ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಮಿತಿಯಿಲ್ಲದ, ತಂತ್ರಜ್ಞಾನ ಆಧಾರಿತ ಮತ್ತು ನಿರಂತರವಾಗಿ ವಿಕಸನಗೊ ಳ್ಳುತ್ತಿರುವ ಅಪರಾಧ ಜಗತ್ತಾಗಿದೆ. ಹಣಕಾಸು ವಂಚನೆಗಳು ಮತ್ತು ಕ್ರಿಸ್ಟೋಕರೆನ್ಸಿ, ಡಾರ್ಕ್‌ಬ್ ಆಧಾರಿತ ಮಾದಕವಸ್ತು ಜಾಲಗಳು ಮತ್ತು ಡೇಟಾ ಉಲ್ಲಂಘನೆಯವರೆಗೆ, ಬೆದರಿಕೆಗಳ ಪ್ರಮಾಣ ವೇಗ ಹೆಚ್ಚುತ್ತಿದೆ. ಇವುಗಳನ್ನು ತಾಂತ್ರಿಕ ಸಾಮ ರ್ಥದಿಂದ ಮಾತ್ರವಲ್ಲದೆ ಕಾನೂನುಗಳನ್ನು ಬಲಪ ಡಿಸುವ ಮೂಲಕ ಸಂಘಟನಾತ್ಮಕವಾಗಿ ಎದುರಿಸಬೇಕಿದೆ ಎಂದರು.
ಕರ್ನಾಟಕವು ಕೇವಲ ರಾಜ್ಯವಲ್ಲ. ಜಾಗತಿಕ ಬ್ರಾಂಡ್. ಜಗತ್ತು ಬೆಂಗಳೂರಿನತ್ತ ನೋಡಿದಾಗ ಹೊಸ ಭವಿಷ್ಯ ಕಾಣು ತ್ತದೆ. ರಾಜ್ಯ ಅತ್ಯಂತ ಸುರಕ್ಷಿತವಾದ ಡಿಜಿಟಲ್ ಭದ್ರತಾ ವ್ಯವಸ್ಥೆ ಹೊಂದಿದೆ ಎಂದು ಪ್ರಶಂಸಿಸಿದರು. ಈ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ| ಎಂ.ಎ.ಸಲೀಂ, ಸೈಬರ್ ಕಮಾಂಡ್ ಹಾಗೂ ಡಿಜಿಪಿ ಪ್ರಣವ್ ಮೊಹಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಮಾರ್‌ಧಾರೇಶ್ವರ್‌ಹಾಗೂ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ ಗೋಡ್ಲೆ ಸೇರಿ ಉಪಸ್ಥಿತರಿದ್ದರು.








