ನವದೆಹಲಿ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ತೀವ್ರಗೊಂಡಿರುವ ಬೆನ್ನಲ್ಲೇ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಈವರೆಗೆ ಒಟ್ಟು 52,000ಕ್ಕೂ ಹೆಚ್ಚು ಭಾರತೀಯರು ವಿವಿಧ ವಿಮಾನಯಾನ ಸಂಸ್ಥೆಗಳ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ.
ನಿಲ್ಲದ ದಾಳಿ – ಹೆಚ್ಚಿದ ಆತಂಕ:
ಇರಾನ್ ಪ್ರಮುಖ ನಗರಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ಪಡೆಗಳು ನಿರಂತರವಾಗಿ ವಾಯುದಾಳಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದೆ.
ವಿಮಾನಯಾನ ಸಂಸ್ಥೆಗಳ ರಕ್ಷಣಾ ಕಾರ್ಯಾಚರಣೆ:
ಭಾರತೀಯರನ್ನು ಕರೆತರಲು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ. ಸ್ವದೇಶಕ್ಕೆ ಮರಳಿದವರ ಅಂಕಿ-ಅಂಶಗಳು ಹೀಗಿವೆ:
-
ಇಂಡಿಗೋ (IndiGo): ಅತಿ ಹೆಚ್ಚು ಅಂದರೆ 1,63,000* ಭಾರತೀಯರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ.
-
ಸ್ಪೈಸ್ ಜೆಟ್ (SpiceJet): 6,597 ಭಾರತೀಯರ ಸುರಕ್ಷಿತ ವಾಪಸಾತಿ.
-
ಏರ್ ಇಂಡಿಯಾ (Air India): 2,706 ಮಂದಿ ತಾಯ್ನಾಡಿಗೆ ವಾಪಸ್.
-
ಆಕಾಶ ಏರ್ ಲೈನ್ಸ್ (Akasa Air): 1,039 ಭಾರತೀಯರ ಸ್ಥಳಾಂತರ.
ಗಮನಿಸಿ: ಮಾಹಿತಿಯ ಪ್ರಕಾರ ಇಂಡಿಗೋ ವಿಮಾನದ ಮೂಲಕ ಅತಿ ದೊಡ್ಡ ಸಂಖ್ಯೆಯ ಪ್ರಜೆಗಳನ್ನು ಕರೆತರಲಾಗಿದ್ದು, ಕಾರ್ಯಾಚರಣೆ ಇನ್ನು ಮುಂದುವರಿದಿದೆ.
ಸರ್ಕಾರದ ಮುನ್ನೆಚ್ಚರಿಕೆ:
ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇನ್ನೂ ಅಲ್ಲಿ ಉಳಿದಿರುವ ಭಾರತೀಯರು ಸ್ಥಳೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಭಾರತೀಯ ವಾಯುಪಡೆಯ ವಿಮಾನಗಳನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇಸ್ರೇಲ್ ನಲ್ಲಿ ಮೃತರ ಸಂಖ್ಯೆ 1,332ಕ್ಕೆ ಏರಿಕೆ | Israel-Iran Conflict
GOOD NEWS: ರಾಜ್ಯದ ಅತಿಥಿ ಉಪನ್ಯಾಸಕಿಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 90 ದಿನ ಮಾತೃತ್ವ ರಜೆ








