ಹುಬ್ಬಳ್ಳಿ : ಲಂಚ ಪಡೆಯುವಾಗ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಧಾರವಾಡ ಪಾಲಿಕೆಯ ಅಧಿಕಾರಿ ಹೀನಾ ಕೌಸರ್ ಅಧಿಕಾರಿಯನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಒಂದರ ಕಚೇರಿ ಅಧಿಕಾರಿಯಾಗಿರುವ ಹಿನಾ ಕೌಸರ್ ಮಾಳಪ್ಪ ತಳವಾರ್ ಎಂಬವರಿಂದ 3500 ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಣದ ಸಮೇತ ಹೀನ ಕೌಸರ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಹೀನ ಮಾಳಪ್ಪ ಎಂಬವರ ಬಳಿ 4500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ವೇಳೆ ಮಾಳಪ್ಪ ಮುಂಗಡವಾಗಿ ರೂ.1000 ನೀಡಿದ. ಇಂದು ಉಳಿದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.








