ಬೆಂಗಳೂರು : ಬೆಂಗಳೂರು : ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ 2026ಕ್ಕೆ ಮಂಡನೆಗೆ ಪೂರ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದರು. ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಜೆಟ್ ಅನುಮೋದನೆ ಪಡೆದರು. ಬಳಿಕ ಬಜೆಟ್ ಮಂಡನೆ ಭಾಷಣ ಆರಂಭ ಮಾಡಿದರು.
ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ, 2025 ಮತ್ತು 26 ನೇ ಸಾಲಿನಲ್ಲಿ 216 ಸೇತುವೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 60 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತೆ.ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದೇವೆ ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದು ಘೋಷಿಸಿದರು.
ಬೆಂಗಳೂರಿನಲ್ಲಿ ಚಿರತೆ ಹಾವಳಿ ತಡೆಗಟ್ಟಲು, ಬನ್ನೇರುಘಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲಾಗುವುದು.ಪ್ರತಿ ತಾಲೂಕಿನಲ್ಲಿ ‘MSIL’ ವತಿಯಿಂದ ರೈತರ ಮಾಲ್ ಗಳ ಸ್ಥಾಪನೆ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು ಇಡಲಾಗಿದೆ ಮಿಲೆಟ್ ಹಬ್ ಗೆ ಏಕವಾಕ್ಯ ವ್ಯವಸ್ಥೆ ಜಾರಿಗೆ.
ಕುಕ್ಕೆ ಸುಬ್ರಮಣ್ಯ ದೇವಾಲಯ ಪ್ರಾಧಿಕಾರ ರಚನೆ ಕೊಲ್ಲೂರು ಮೂಕಾಂಬಿಕೆ ದೇವಾಲಯ ಪ್ರಾಧಿಕಾರ ರಚನೆ, ಕರ್ನಾಟಕ ಪ್ರವಾಸೋದ್ಯಮಕ್ಕೆ ಬಜೆಟ್ ನಲ್ಲಿ ಮತ್ತು ನೀಡಲಾಗಿದೆ ವಾರಣಾಸಿಯಲ್ಲಿ ಹೊಸ ಛತ್ರ ನಿರ್ಮಾಣ ಮಾಡಲಾಗುತ್ತೆ, ಶ್ರೀಶೈಲಂನಲ್ಲಿ ಹೊಸ ಯಾತ್ರೆ ನಿವಾಸಿ ನಿರ್ಮಾಣ ಮಾಡಲಾಗುತ್ತೆ . ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿಗೆ ಮಾಡಲಾಗುತ್ತೆ.




