Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ : ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಹೇಳಿಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow57

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗಿರುವ ‘ಸೇತುಬಂಧ’ (Bridge Course) ಉಪಕ್ರಮದ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ SATS (ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ದಾಖಲಿಸುವಂತೆ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭೌತಿಕ ದಾಖಲಾತಿಗೆ ಮುಕ್ತಿ: ಆನ್ ಲೈನ್ ನಲ್ಲೇ ವರದಿ ಲಭ್ಯ

ಈ ಹಿಂದೆ ಸೇತುಬಂಧದ ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು SAP ನಮೂನೆಗಳಾದ 4ಎ, 4ಬಿ ಮತ್ತು 5ಎ, 5ಬಿ ಗಳಲ್ಲಿ ಭೌತಿಕವಾಗಿ ದಾಖಲಿಸಬೇಕಾಗಿತ್ತು. ಆದರೆ ಪ್ರಸ್ತುತ SATS ತಂತ್ರಾಂಶದಲ್ಲಿ ಹೊಸದಾಗಿ ‘ಸೇತುಬಂಧ ಮಾಡ್ಯೂಲ್’ (Bridge Course Module) ಅನ್ನು ಸೃಜಿಸಲಾಗಿದ್ದು, ಶಿಕ್ಷಕರು ತಮ್ಮ LBA ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿ ತರಗತಿ ಹಾಗೂ ವಿಷಯವಾರು ಅಂಕ/ಶ್ರೇಣಿಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ದಾಖಲಿಸಬೇಕಿದೆ.

ಇದರಿಂದಾಗಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಇನ್ನು ಮುಂದೆ ಭೌತಿಕವಾಗಿ ನಮೂನೆಗಳನ್ನು ಭರ್ತಿ ಮಾಡುವ ಅಥವಾ ಮಾಹಿತಿ ಕ್ರೋಢೀಕರಿಸುವ ಅಗತ್ಯವಿರುವುದಿಲ್ಲ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರ ಲಾಗಿನ್ನಲ್ಲಿಯೇ ನೇರವಾಗಿ ರಿಪೋರ್ಟ್ ಜನರೇಟ್ ಮಾಡಿಕೊಂಡು SAP ಗೆ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜೂನ್ 25 ಕೊನೆಯ ದಿನಾಂಕ
DIET ಹಂತದ ಪ್ರಾಂಶುಪಾಲರು, ಸೇತುಬಂಧ ನೋಡಲ್ ಅಧಿಕಾರಿಗಳು, ತಾಲೂಕು ಹಂತದ ಅಧಿಕಾರಿಗಳು ಹಾಗೂ BRP ಮತ್ತು CRP ಗಳು ತಕ್ಷಣವೇ ಈ ಮಾಹಿತಿಯನ್ನು ಆನ್ಲೈನ್/ಆಫ್ಲೈನ್ ಮೂಲಕ ಹಂಚಿಕೊಳ್ಳಬೇಕು. ದಿನಾಂಕ 25.06.2026ರ ಒಳಗಾಗಿ ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಸಂಪೂರ್ಣ ಮಾಹಿತಿಯನ್ನು SATS ನಲ್ಲಿ ದಾಖಲಿಸಲು ಅಗತ್ಯ ಕ್ರಮ ವಹಿಸುವಂತೆ ಗಡುವು ನೀಡಲಾಗಿದೆ.

ಕಳಪೆ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ವಿಶೇಷ ನಿಗಾ
ಸಾಫಲ್ಯ ಪರೀಕ್ಷೆಯ ನಂತರ ‘ಬಿ’ ಶ್ರೇಣಿ (B Grade) ಪಡೆದ ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ಕಲಿಕೆಯನ್ನು ಉಂಟುಮಾಡಲು ಶಿಕ್ಷಕರು ನಿರಂತರ ಪರಿಹಾರಾತ್ಮಕ ಬೋಧನಾ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಸೆಪ್ಟೆಂಬರ್ ಹಾಗೂ ಡಿಸೆಂಬರ್ ಅಂತ್ಯದಲ್ಲಿ ಎರಡು ಹಂತಗಳ ಕಾಲಮಿತಿಯಲ್ಲಿ ಮೌಲ್ಯಮಾಪನ ಮಾಡಿ, ಆ ಮಾಹಿತಿಯನ್ನೂ ಸಹ SATS ತಂತ್ರಾಂಶದ ಸೇತುಬಂಧ ಮಾಡ್ಯೂಲ್ನಲ್ಲಿ ದಾಖಲಿಸಬೇಕು ಎಂದು DSERT ನಿರ್ದೇಶಕರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

BIG NEWS: State teachers to record Setubandha information in `SATS` mandatory: Education Department issues important order
Share. Facebook Twitter LinkedIn WhatsApp Email

Related Posts

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

2 Mins Read

ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ : ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಹೇಳಿಕೆ!

1 Min Read

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

2 Mins Read
Recent News

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ : ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಹೇಳಿಕೆ!

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

State News
KARNATAKA

BREAKING : 1 ವಿಷಯಕ್ಕೆ 6 ಸಾವಿರ ಕೊಟ್ರೆ ಡಿಗ್ರಿ ಪಾಸ್ : ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಕರ್ಮಕಾಂಡ ಬಯಲು!

By ಸುರೇಶ್‌ KARNATAKA 2 Mins Read

ಬಳ್ಳಾರಿ: ವಿದ್ಯಾಕೇಂದ್ರವಾಗಬೇಕಿದ್ದ ವಿಶ್ವವಿದ್ಯಾಲಯವೊಂದು ಈಗ ಅಕ್ರಮದ ಅಡ್ಡಯಾಗಿ ಮಾರ್ಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಳ್ಳಾರಿಯ ಪ್ರತಿಷ್ಠಿತ ಶ್ರೀ ಕೃಷ್ಣದೇವರಾಯ…

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಿಕ್ಷಕರು `SATS’ನಲ್ಲಿ ಸೇತುಬಂಧ ಮಾಹಿತಿ ದಾಖಲಿಕೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ : ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಹೇಳಿಕೆ!

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.