ಬೆಂಗಳೂರು : ಬೆಂಗಳೂರಲ್ಲಿ ಇವಿ ಬೈಕ್ ಮಾಲೀಕನಿಂದ ಇದೀಗ 35 ಕೋಟಿಗೂ ಹೆಚ್ಚು ವಂಚನೆ ಆರೋಪ ಕೇಳಿ ಬರುತ್ತಿದೆ. ಸುಮಾರು 3,750 ಜನರಿಗೆ 35 ಕೋಟಿಗೂ ಅಧಿಕ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ.
ಸ್ಕೀಮ್ ಗಳ ಕಥೆ ಹೇಳಿ ಈಗ 35 ಕೋಟಿಗೂ ಹೆಚ್ಚು ವಂಚನೆ ಎಸಗಿದ್ದಾನೆ. ಈ ಒಂದು ಸ್ಕೀಂ ನಂಬಿ ಜನರು ದುಡ್ಡು ಕಟ್ಟಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಆಪ್ ಕಿ ಇವಿ ಶೋರೂಮ್ ಮಾಲೀಕ ರವಿ ಮತ್ತು ಹನುಮಂತರಾಜು ಮತ್ತೋರ್ವ ರಾಜು ವಿರುದ್ಧ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ದಾಖಲೆ ಪಡೆದು ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ ಲೋನ್ 1,50,000 ಲೋನ್ ಮಾಡಿಸುತ್ತಿದ್ದ.
ಶೋರೂಮ್ ಮಾಲೀಕ ರವಿ 20,000 ಕಟ್ಟಿ ಉಳಿದ ಮೊತ್ತ ಸಬ್ಬಸಿಡಿಯಲ್ಲಿ ಬಿಡಲಾಗುತ್ತದೆ. ಒಂದು ವೇಳೆ ಹಣ ಕಟ್ಟುವುದಾದರೆ ನಾವೇ ಕಟ್ಟುತ್ತೇವೆ ಎಂದು ಜನರನ್ನು ನಂಬಿಸಿದ್ದಾನೆ. ಇವಿ ಬೈಕ್ ಶೋರೂಮ್ ಮಾಲೀಕನ ವಿರುದ್ಧ ಇದೀಗ ಗ್ರಾಹಕರು ಪ್ರತಿಭಟನೆ ಮಾಡುತ್ತಿದ್ದಾರೆ.ಜಾಲಹಳ್ಳಿಯಿಂದ ಎಂಜಿ ರಸ್ತೆವರಿಗೂ ಬೈಕ್ ಮೂಲಕ ರ್ಯಾಲಿ ಮಾಡುತ್ತಿದ್ದಾರೆ. ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನಾಕಾರರು ಸೇರಿದ್ದಾರೆ.ನಮಗೆ ನ್ಯಾಯ ಕೊಡಿಸಿ ಎಂದು ಮಹಿಳೆಯರು ಕಣ್ಣೀರು ಇಟ್ಟಿದ್ದಾರೆ.








