ಬೆಂಗಳೂರು: “ಪ್ರಕೃತಿಯ ಅದ್ಭುತ ಕೊಡುಗೆ” ಎಂದೇ ಕರೆಯಲ್ಪಡುವ ಪಪ್ಪಾಯಿ ಹಣ್ಣು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಮೂಲ್ಯವಾದುದು. ಸುಲಭವಾಗಿ ಸಿಗುವ ಮತ್ತು ಅಗ್ಗದ ಬೆಲೆಯ ಈ ಹಣ್ಣಿನಲ್ಲಿ ಅಡಗಿರುವ ಔಷಧೀಯ ಗುಣಗಳು ಹತ್ತಾರು. ಕೇವಲ ರುಚಿಗಷ್ಟೇ ಅಲ್ಲದೆ, ದೇಹದ ಒಟ್ಟಾರೆ ಆರೋಗ್ಯ ಸುಧಾರಿಸಲು ಪಪ್ಪಾಯಿ ಹೇಗೆ ಸಹಕಾರಿ ಎಂಬ ಮಾಹಿತಿ ಇಲ್ಲಿದೆ.
1. ಜೀರ್ಣಕ್ರಿಯೆಯ ಮಿತ್ರ
ಪಪ್ಪಾಯಿಯಲ್ಲಿರುವ ‘ಪಪೈನ್’ ಎಂಬ ಕಿಣ್ವವು ಪ್ರೋಟೀನ್‌ಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಪಪ್ಪಾಯಿ ಹಣ್ಣು ಒಂದು ನೈಸರ್ಗಿಕ ಮದ್ದಾಗಿದೆ. ಇದು ಹೊಟ್ಟೆಯ ಉರಿಯನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
2. ರೋಗನಿರೋಧಕ ಶಕ್ತಿ ಹೆಚ್ಚಳ
ಪಪ್ಪಾಯಿಯಲ್ಲಿ ವಿಟಮಿನ್ ಸಿ (Vitamin C) ಹೇರಳವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ದೈನಂದಿನ ಆಹಾರದಲ್ಲಿ ಪಪ್ಪಾಯಿ ಬಳಸುವುದರಿಂದ ದೇಹವು ಸದೃಢವಾಗುತ್ತದೆ.
3. ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಅಧಿಕವಾಗಿದೆ. ಇದು ದೃಷ್ಟಿ ದೋಷಗಳನ್ನು ತಡೆಯಲು ಮತ್ತು ವಯಸ್ಸಾದಂತೆ ಕಾಡುವ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
4. ಹೃದಯದ ಆರೋಗ್ಯ ಮತ್ತು ತೂಕ ಇಳಿಕೆ
ಪಪ್ಪಾಯಿಯಲ್ಲಿರುವ ನಾರು (Fiber), ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುವುದನ್ನು ತಡೆಯುತ್ತವೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹಣ್ಣು.
5. ಕಾಂತಿಯುತ ಚರ್ಮಕ್ಕಾಗಿ
ಸೌಂದರ್ಯ ವರ್ಧಕವಾಗಿಯೂ ಪಪ್ಪಾಯಿ ಕೆಲಸ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಸುಕ್ಕುಗಳನ್ನು ತಡೆದು, ನೈಸರ್ಗಿಕ ಹೊಳಪನ್ನು ನೀಡುತ್ತವೆ. ಪಪ್ಪಾಯಿ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳು ನಿವಾರಣೆಯಾಗುತ್ತವೆ.
‘ಪಪ್ಪಾಯಿ ಬೀಜ’ಗಳನ್ನು ಎಸೆಯುವ ಮುನ್ನ ಈ ಸುದ್ದಿ ಓದಿ: ಸಣ್ಣ ಬೀಜದಲ್ಲಿ ಅಡಗಿಗೆ ನಿಮ್ಮ ಆರೋಗ್ಯದ ಗುಟ್ಟು!








