ಯಾದಗಿರಿ : ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲ್ಲಿಕಾರ್ಜುನ ಮುತ್ಯಾ ಪರಾರಿಯಾಗಿದ್ದು, ಇದೀಗ ವಿಡಿಯೋದಲ್ಲಿ ಮಲ್ಲಿಕಾರ್ಜುನ ಮುತ್ಯಾ ಪ್ರತ್ಯಕ್ಷರಾಗಿದ್ದಾರೆ. ವಿಡಿಯೋ ಹೇಳಿಕೆಯನ್ನು ಮಲ್ಲಿಕಾರ್ಜುನ ಮುತ್ಯ ಬಿಡುಗಡೆ ಮಾಡಿದ್ದಾರೆ.
ಭಕ್ತರು ಯಾರು ಆತಂಕ ಪಡಬೇಡಿ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ಎಲ್ಲಿಗೂ ಹೋಗಿಲ್ಲ ಇಲ್ಲೇ ಇದ್ದೇನೆ. ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವಿದೆ ಹೀಗಾಗಿ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದೇನೆ. ಮಠಕ್ಕೆ ಪೊಲೀಸರು ಬಂದು ಹೋಗಿದ್ದು ಗೊತ್ತಾಗಿದೆ. ಪೊಲೀಸರು ಯಾವಾಗ ಕರೆದರೂ ಕೂಡ ಹೋಗಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅಜ್ಞಾತ ಸ್ಥಳದಿಂದಲೇ ವಿಡಿಯೋ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
-
ಘಟನೆ: ಈತ ತಾನು ದೈವಪ್ರೇರಿತ ಅಥವಾ ಆಧ್ಯಾತ್ಮಿಕ ಶಕ್ತಿ ಹೊಂದಿರುವವನು ಎಂದು ಬಿಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ನಂಬಿಕೆಯನ್ನೇ ಬಳಸಿಕೊಂಡು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಈತನ ಮೇಲಿದೆ.
-
ಪೊಲೀಸ್ ದೂರು: ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕಾನೂನು ಕ್ರಮಗಳು
-
ಪೋಕ್ಸೋ ಕಾಯ್ದೆ (POCSO Act): ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಕಾರಣ ಈತನ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಇದು ಅಪ್ರಾಪ್ತರ ರಕ್ಷಣೆಗಾಗಿ ಇರುವ ಅತ್ಯಂತ ಕಠಿಣ ಕಾನೂನಾಗಿದೆ.








