ಶಿವಮೊಗ್ಗ: ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಮಸ್ಯೆಯಾಗಿತ್ತು. ಇದೀಗ ರಾಜ್ಯ ಸರ್ಕಾರವು ಕೌನ್ಸಿಲಿಂಗ್ ಮೂಲಕ ರೇಡಿಯಾಲಜಿಸ್ಟ್ ತಜ್ಞ ವೈದ್ಯರನ್ನು ನೇಮಿಸಿ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, 2025ನೇ ಸಾಲಿನಲ್ಲಿ ವೈದ್ಯಕೀಯ ಸ್ನಾತಕೋತ್ತರ, ಡಿಎನ್ ಬಿ ವ್ಯಾಸಂಗ ಪೂರೈಸಿದ ಸೇವಾನಿರತ ವೈದ್ಯರುಗಳಿಗೆ TRIAD ಸಮಾಲೋಚನೆಯಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಈ ಆದೇಶದಂತೆ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ರೇಡಿಯಾಲಜಿಸ್ಟ್ ವ್ಯಾಸಂಗ ಮಾಡಿದಂತ ಡಾ.ಅಪೂರ್ವ.ಕೆ.ಎ ಅವರನ್ನು ನೇಮಕ ಮಾಡಲಾಗಿದೆ.

CRIME NEWS: ಹಾಸನದಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








