Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೋರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಗುಜರಾತ್‌ನ ಕಂಡ್ಲಾ ಬಂದರು ತಲುಪಿದ ಎಲ್‌ಪಿಜಿ ನೌಕೆ ‘ಸಿಮಿ’!

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

ಬಂದೂಕು ತೋರಿಸಿ ಬೆದರಿಸಿದ ದರೋಡೆಕೋರರು: ಪ್ರಾಣದ ಹಂಗು ತೊರೆದು ಕಳ್ಳರನ್ನೇ ಓಡಿಸಿದ ನಾಸಿಕ್ ಜ್ವೆಲ್ಲರಿ ಅಂಗಡಿ ಸಿಬ್ಬಂದಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯ ಸರ್ಕಾರ 1000 ದಿನ ಪೂರೈಸಿದ ಹಿನ್ನೆಲೆ 6ನೇ ‘ಭೂಮಿ ಗ್ಯಾರಂಟಿ’ ಜಾರಿ : ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ
INDIA

BREAKING : ರಾಜ್ಯ ಸರ್ಕಾರ 1000 ದಿನ ಪೂರೈಸಿದ ಹಿನ್ನೆಲೆ 6ನೇ ‘ಭೂಮಿ ಗ್ಯಾರಂಟಿ’ ಜಾರಿ : ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ

By ಸುರೇಶ್‌

ನವದೆಹಲಿ : ನಾವು ರಾಜಕಾರಣದಲ್ಲಿದ್ದೇವೆ. ರಾಜಕಾರಣ ಮಾಡಲೇಬೇಕು ನನಗೆ ಸದಾ ಯಶಸ್ಸು ಸಿಗುತ್ತೆ. ಸ್ವಲ್ಪ ಶ್ರಮ ಬೇಕಷ್ಟೆ. ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಸಾವಿರ ದಿನಗಳ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ಜಾರಿ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಅವರು ಮಾತನಾಡಿದರು.

ನಮ್ಮ ಸರ್ಕಾರದ ಸಾವಿರ ದಿನಗಳ ಸಾಧನೆ ಬಗ್ಗೆ ನಮಗೆ ಸಂತೋಷವಿದೆ. ಈ ಅಭೂತಪೂರ್ವ ಕ್ಷಣವನ್ನು ನಾವು ಸಂಭ್ರಮಿಸುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಗ್ಯಾರಂಟಿ ಭೂಮಿ ಗ್ಯಾರಂಟಿಯನ್ನು ರಾಜ್ಯದ ಜನರಿಗೆ ನೀಡುತ್ತಿದ್ದೇವೆ. ಭೂಮಿಯ ಹಕ್ಕು ಪತ್ರ ಇಲ್ಲದ ಲಕ್ಷಾಂತರ ಜನರಿಗೆ ನಾವು ಹಕ್ಕುಪತ್ರ, ಪಟ್ಟಾ ದಾಖಲೆ ನೀಡುತ್ತಿದ್ದೇವೆ. ಜತೆಗೆ ಜನರಿಗೆ ಪಕ್ಕಾ ಖಾತೆ ಹಂಚಿಕೆ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಹೊರತಾಗಿ ಇದು ನಮ್ಮ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ತಿಳಿಸಿದರು.

ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ಶಾಸಕರುಂಟು ಹಾಗೂ ಮುಖ್ಯಮಂತ್ರಿಗಳುಂಟು. ಸಿಎಂ ಅವರಿಗೆ ಯಾವ ಮಾರ್ಗದರ್ಶನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಈ ವಿಚಾರ ನನ್ನ ಜತೆ ಚರ್ಚೆಯಾಗಿಲ್ಲ. ಈ ವಿಚಾರವಾಗಿ ನಾನು ಮಾಧ್ಯಮಗಳಿಂದ ತಿಳಿಯುತ್ತಿದ್ದೇನೆ ಹೊರತು, ಬೇರೆ ಯಾರು ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಭೇಟಿ ಫಲಪ್ರದವಾಗಿದೆಯೇ, ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ ನಿಂದ ಸ್ಪಷ್ಟನೆ ಸಿಕ್ಕಿದೆಯೇ ಎಂದು ಕೇಳಿದಾಗ, ನಾವು ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಪಕ್ಷ ತನ್ನದೇ ಆದ ಗುರಿ ಹೊಂದಿದ್ದು, ಪಕ್ಷದ ಯಶಸ್ಸು ಹಾಗೂ ಪಕ್ಷದ ಹಿತಾಸಕ್ತಿ, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿ ಆಧಾರದ ಮೇಲೆ ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತಾರೆ. ಮಾಧ್ಯಮಗಳು ಹಾಗೂ ಬೇರೆಯವರು ಈ ಭೇಟಿಗೆ ಹೊಸ ರೂಪ, ಬೇರೆ ಬಣ್ಣ ನೀಡುತ್ತಿದ್ದೀರಿ. ನಮಗೆ ಇದರಲ್ಲಿ ವಿಶೇಷವಿಲ್ಲ ಎಂದರು.

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, ನಾನು ದೆಹಲಿಗೆ ಬಂದ ನಂತರ ಎಲ್ಲರನ್ನೂ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್‌, ಸುರ್ಜೆವಾಲ, ಟಿ.ಬಿ. ಜಯಚಂದ್ರ ಸೇರಿದಂತೆ ಎಲ್ಲರನ್ನು ಭೇಟಿ ಮಾಡಿರುವೆ. ರಾಜಕಾರಣಿಗಳು ಭೇಟಿಯಾದಾಗ ರಾಜಕಾರಣ ಚರ್ಚೆ ಮಾಡದೇ ಇರುತ್ತಾರಾ? ರಾಜಕೀಯ ಚರ್ಚೆ ಮಾಡುತ್ತೇವೆ. ಆದರೆ ಆ ಚರ್ಚೆಯ ವಿವರವನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲಾರೆ. ಕರ್ನಾಟಕದ ಹಿತ ಸೇರಿದಂತೆ ಅಸ್ಸಾಂ, ದೆಹಲಿ ಬಗ್ಗೆ ಚರ್ಚೆ ಮಾಡಿರುತ್ತೇವೆ ಎಂದಷ್ಟೇ ತಿಳಿಸಿದರು.

Share. Facebook Twitter LinkedIn WhatsApp Email

Related Posts

ಹೋರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಗುಜರಾತ್‌ನ ಕಂಡ್ಲಾ ಬಂದರು ತಲುಪಿದ ಎಲ್‌ಪಿಜಿ ನೌಕೆ ‘ಸಿಮಿ’!

1 Min Read

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

1 Min Read

ಬಂದೂಕು ತೋರಿಸಿ ಬೆದರಿಸಿದ ದರೋಡೆಕೋರರು: ಪ್ರಾಣದ ಹಂಗು ತೊರೆದು ಕಳ್ಳರನ್ನೇ ಓಡಿಸಿದ ನಾಸಿಕ್ ಜ್ವೆಲ್ಲರಿ ಅಂಗಡಿ ಸಿಬ್ಬಂದಿ!

2 Mins Read
Recent News

ಹೋರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಗುಜರಾತ್‌ನ ಕಂಡ್ಲಾ ಬಂದರು ತಲುಪಿದ ಎಲ್‌ಪಿಜಿ ನೌಕೆ ‘ಸಿಮಿ’!

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

ಬಂದೂಕು ತೋರಿಸಿ ಬೆದರಿಸಿದ ದರೋಡೆಕೋರರು: ಪ್ರಾಣದ ಹಂಗು ತೊರೆದು ಕಳ್ಳರನ್ನೇ ಓಡಿಸಿದ ನಾಸಿಕ್ ಜ್ವೆಲ್ಲರಿ ಅಂಗಡಿ ಸಿಬ್ಬಂದಿ!

ವಯಸ್ಸು ಕೇವಲ ಸಂಖ್ಯೆಯಷ್ಟೇ: 97ನೇ ವಯಸ್ಸಿನಲ್ಲಿ ಜೀರೋ ಗುರುತ್ವಾಕರ್ಷಣೆಯಲ್ಲಿ ತೇಲಿ ವಿಶ್ವ ದಾಖಲೆ ಬರೆದ ವೃದ್ಧ!

State News
KARNATAKA

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

By ವಸಂತ ಬಿ ಈಶ್ವರಗೆರೆ KARNATAKA 5 Mins Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು (KSRTC, BMTC, NWKRTC, KKRTC) ರಾಜ್ಯದ ರಕ್ತನಾಳಗಳಿದ್ದಂತೆ. ಪ್ರತಿದಿನ ಲಕ್ಷಾಂತರ ಜನಸಾಮಾನ್ಯರನ್ನು,…

BIG NEWS : 2208ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ : HD ಕುಮಾರಸ್ವಾಮಿ ಭವಿಷ್ಯ

BIG NEWS : ಮೈಸೂರಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ HD ರೇವಣ್ಣ, ಜಿಟಿ ದೇವೇಗೌಡ ಫೋಟೋಗೆ ಕೊಕ್‌!

ಬೆಂಗಳೂರಲ್ಲಿ ಪ್ರೇಯಸಿ ಕೊಂದು ಕೆರೆಗೆ ಶವ ಎಸೆದು ಪರಾರಿ : ಪ್ರಿಯಕರ ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.