ಚಿಕ್ಕಬಳ್ಳಾಪುರ: ವಿಮಾನ ನಿಲ್ದಾಣಗಳ ಬಳಿಯಲ್ಲಿ ಡ್ರೋನ್ ಹಾರಾಟ ನಿಷೇಧವಿದೆ. ಹೀಗಿದ್ದರೂ ನಿಯಮ ಬಾಹಿರವಾಗಿ ಡ್ರೋನ್ ಹಾರಿಸಿದಂತ ಯೂಟ್ಯೂಬರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರಲ್ಲಿ ವಾಂಟರ್ಲಸ್ಟ್ ಎಂಬ ಯೂಟ್ಯೂಬರ್ ಒಬ್ಬ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮುಂಭಾಗದಿಂದ ಏರ್ ಪೋರ್ಸ್ ವರೆಗೂ ಡ್ರೋನ್ ಹಾರಿಸಿದ್ದಾನೆ. ಸುಮಾರು 7 ರಿಂದ 8 ನಿಮಿಷಗಳ ಕಾಲ ಡ್ರೋನ್ ಮೂಲಕ ವೀಡಿಯೋ ರೆಕಾರ್ಡ್ ಮಾಡಿ, ಅದನ್ನು ತನ್ನ ಯೂಟ್ಯೂಬ್ ಚಾನಲ್ ಗೆ ಅಪ್ ಲೋಡ್ ಮಾಡಿದ್ದಾನೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ. ವಿಮಾನ ನಿಲ್ದಾಣದ ರೆಡ್ ಝೋನ್, ನೋ ಫ್ಲೇಯಿಂಗ್ ಝೋನ್ ನಲ್ಲಿ ಡ್ರೋನ್ ಹಾರಾಟ ಮಾಡಿದಂತ ಯೂಟ್ಯೂಬರ್ ವಿರುದ್ಧ ಸಿಐಎಸ್ಎಫ್ ನ ಭದ್ರತಾ ಸಿಬ್ಬಂದಿಗಳ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆ ಬಳಿಕ ಯೂಟ್ಯೂಬರ್ ಪತ್ತೆಗೆ ಬಲೆ ಬೀಸಿದ್ದಾರೆ.
Stock Market: ಹೂಡಿಕೆದಾರರಿಗೆ ಸಂತಸ ಸುದ್ದಿ: ಸೆನ್ಸೆಕ್ಸ್ 208 ಅಂಕ, ನಿಫ್ಟಿ 25,900ಕ್ಕಿಂತ ಹೆಚ್ಚು ಅಂಕ ಏರಿಕೆ
ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ: ಯುವತಿಗೆ ಹೆಣ್ಣುಮಗು ಕೊಟ್ಟು ಆರೋಪಿ ಪರಾರಿ








