ಕೊಪ್ಪಳ : ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಿದರೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಗ್ರಾಮಸ್ಥರಿಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೀಗೆ ಒಂದು ಆಫರ್ ನೀಡಿದ್ದಾರೆ. ಪ್ರತೀ ಎಕರೆಗೆ ರೂ. 1 ಲಕ್ಷ ನೀಡುವುದಾಗಿ ಬಸವರಾಜ ರಾಯರೆಡ್ಡಿ ಆಫರ್ ನೀಡಿದ್ದಾರೆ.
ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಬೇಕು ಎಂದು ಬಸವರಾಜ್ ರೆಡ್ಡಿ ಮನವಿ ಮಾಡಿದ್ದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಗುಡ್ಡ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಕುಕನೂರ ತಾಲೂಕಿನ ನೆಲಜೇರಿ ಸೋಂಪುರದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಕೋಟಿ ರೂಪಾಯಿ ಮಂಜೂರಾಗಿದೆ.
ಆದರೆ ಜಮೀನು ಲಭ್ಯವಿರದ ಕಾರಣ ಕಟ್ಟಡ ಪ್ರಾರಂಭ ಮಾಡಲು ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರು ಜಮೀನು ನೀಡಬೇಕು ಸರಕಾರ ಪ್ರತ್ಯೇಕವಾಗಿ ಅಂದಾಜು ಆರರಿಂದ ಏಳು ಲಕ್ಷ ರೂಪಾಯಿ ನೀಡುತ್ತದೆ. ನಾನು ಕೂಡ ವಯಕ್ತಿಕವಾಗಿ ಒಂದು ಲಕ್ಷ ನೀಡುತ್ತೇನೆ. ಕೂಡಲೇ ಗ್ರಾಮಸ್ಥರು ಜಮೀನು ನೀಡಬೇಕು ಎಂದು ರಾಯರೆಡ್ಡಿ ಮನವಿ ಮಾಡಿದರು. ಬಸವರಾಜ ರಾಯರೆಡ್ಡಿ ಯಲಬುರ್ಗಾ ಕ್ಷೇತ್ರದ ಶಾಸಕರು ಸಹ ಆಗಿದ್ದಾರೆ.








