ರಾಯಚೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದರ ಸೋಮವಾರದಿಂದ ಏರಿಕೆ ಆಗಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೌಂಟರ್ ನೀಡಿದ್ದು, ಸುಮ್ಮನೆ ಖಾಲಿ ಮಾತನಾಡುವುದು ಬೇಡ ಮೊದಲು ರಾಜ್ಯ ಸರ್ಕಾರಕ್ಕೆ, ನನಗೆ, ಕೇಂದ್ರ ಸರ್ಕಾರಕ್ಕೆ ಹಾಗು ಎಲ್ಲಾ ಸಂಸದರಿಗೆ ಪತ್ರ ಬರೆಯಿರಿ ಎಂದು ಕೌಂಟರ್ ನೀಡಿದರು.
ರಾಯಚೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಅವರು ತೇಜಸ್ವಿ ಸೂರ್ಯ ಸುಮ್ಮನೆ ಖಾಲಿ ಮಾತನಾಡುವುದು ಬೇಡ. ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ, ನನಗೆ ಹಾಗು ಎಲ್ಲಾ ಸಂಸದವರಿಗೆ ಮೊದಲು ಪತ್ರ ಬರೆಯಿರಿ ಯಾರು ಬೇಡ ಅಂತಿದ್ದಾರೆ. ನಾವು ಬೇಡ ಅಂತಿದ್ದೀವಿ ಅದು ಬೇರೆ ವಿಚಾರ.
ಯಾರು ಎಂಪಿ ಒಬ್ಬರ ಹೆಸರು ಹೇಳಿಲ್ಲ ಎಲ್ಲರೂ ಸೇರಿ ಪತ್ರ ಬರೆಯಿರಿ. ಪ್ರತಿಭಟನೆಗೆ ವಿರೋಧ ಮಾಡಬಾರದು ಅನ್ನೋ ದೃಷ್ಟಿಯಿಂದ ಪ್ರಧಾನಿ ಮೋದಿ, ಕೇಂದ್ರ ಸಚಿವರಿಗೂ ಪತ್ರ ಬರೆಯಲಿ. ಆಮೇಲೆ ಆ ವಿಚಾರವಾಗಿ ಮಾತನಾಡೋಣ ಬರೀ ಮೀಡಿಯಾ ಮುಂದೆ ಮಾತನಾಡುವುದನ್ನು ಯಾರು ಕೇಳುತ್ತಾರೆ? ಎಂದು ರಾಯಚೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.








