ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಆರ್ ಬಿ ತಿಮ್ಮಾಪುರ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಆಗಿದೆ ಅಂತ ಹೇಳಿದ್ದಾರೆ. ತಿಮ್ಮಾಪುರಗೆ ಪಾಲು ಕೊಡಬೇಕು ಎಂಬ ಆಡಿಯೋ ವೈರಲ್ ಆಯ್ತು.
ನನ್ನ ಬಳಿ ಆಡಿಯೋ ಪೆನ್ ಡ್ರೈವ್ ಇದೆ ಎಂದು ಇದೆ ವೇಳೆ ಅಶೋಕ್ ಪೆನ್ ಡ್ರೈವ್ ಅನ್ನು ಸದನದಲ್ಲಿ ಪ್ರದರ್ಶನ ಮಾಡಿದರು. ಜಂಟಿ ಆಯುಕ್ತ ನಾಗರಾಜಪ್ಪ ವಕೀಲ ರಮೇಶ ಸಂಭಾಷಣೆ ಮಾಡಿರುವ ಆಡಿಯೋ ಇದಾಗಿದ್ದು, ನಾಗರಾಜಪ್ಪ 18 ಲಕ್ಷಕ್ಕೆ ಬೇಡಿಕೆ ಇಟ್ಟ ಆಡಿಯೋ ಇದೆ. ಸಚಿವರಿಂದ ಅಥವಾ ಅವರ ಮಗನ ಕಡೆಯಿಂದ ಮೆಸೇಜ್ ಬರಬೇಕು ಹೀಗೆ ವಕೀಲ ರಮೇಶ್ಗೆ ಹೇಳಿದ್ದಾನೆ ಎಂದು ಆಡಿಯೋ ಸಂಭಾಷಣೆಯ ವಿವರವನ್ನು ಆರ್ ಅಶೋಕ್ ಇದೆ ವೇಳೆ ಓದಿದರು.
ಪ್ರತಿ ಅಂಗಡಿಯಲ್ಲೂ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಕಲೆಕ್ಷನ್ ಆಗುತ್ತಿದ್ದು, ಒಟ್ಟು ಒಂದು ತಿಂಗಳಿಗೆ 21 ಕೋಟಿ, ವರ್ಷಕ್ಕೆ 250 ಕೋಟಿ ರೂಪಾಯಿ ಆಗುತ್ತದೆ. ಮದ್ಯದ ಅಂಗಡಿಗಳಿಗೆ ಪ್ರತಿ ತಿಂಗಳು ಕಮಿಷನ್ ಫಿಕ್ಸ್ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರು ಅಶೋಕ್ ಆರೋಪಿಸಿದರು. ಅಕ್ರಮದ ಆಡಿಯೋ ಇರುವ ಪೆನ್ ಡ್ರೈವ್ ದಾಖಲೆಯನ್ನು ಪ್ರದರ್ಶನ ಮಾಡಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರ ನಡುವೆ ನಡುವೆ ಈ ಒಂದು ಸಂಭಾಷಣೆ ನಡೆದಿದ್ದು, ಇದೀಗ ಸದನದಲ್ಲಿ ಪೆನ್ ಡ್ರೈವ್ ಪ್ರಕರಣ ಭಾರಿ ಸದ್ದು ಮಡುತ್ತಿದೆ.








