ಮುಂಬೈ : ಇತ್ತೀಚಿಗೆ ತಾನೇ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನಪ್ಪಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ಸಚಿವೆ ಪಂಕಜಾ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೌದು ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿ ಈ ಒಂದು ಘಟನೆಯ ಸಂಭವಿಸಿದ್ದು, ಹೆಲಿಕಾಪ್ಟರ್ ನಲ್ಲಿ ಸಚಿವೆ ಪಂಕಜ ಮುಂಡೆ ಲಾತೂರ್ ಗೆ ತೆರಳಬೇಕಿತ್ತು.
ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ಪಂಕಜಾ ತೆರಳಬೇಕಿತ್ತು. ಆದರೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಬಗ್ಗೆ ಪೈಲಟ್ ವರದಿ ನೀಡಿದ್ದಾರೆ. ಹಾಗಾಗಿ ಲಾತೂರ್ ಪ್ರಯಾಣವನ್ನು ಬಿಜೆಪಿ ನಾಯಕಿ ಪಂಕಜಾ ಮುಂದೂಡಿದ್ದಾರೆ. ವಿಮಾನ ದುರಂತದಲ್ಲಿ ಡಿಸಿಎಂ ಅಜಿತ್ ಪವರ್ ಸಾವನಪ್ಪಿದ ಬಳಿಕ ವಿಮಾನದಲ್ಲಿ ತೆರಳಲು ನಾಯಕರು ಇದೀಗ ಎಚ್ಚರವಹಿಸುತ್ತಿದ್ದಾರೆ.








