ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲದಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಸುಮಾರು 100ಕ್ಕೂ ಹೆಚ್ಚು ಗ್ರಾಮಗಳನ್ನು ಕದ್ದಿರುವ ಆರೋಪ ಕೇಳಿ ಬರುತ್ತಿದೆ.
ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧವೇ ಈ ಒಂದು ಗಂಭೀರವಾದ ಆರೋಪ ಕೇಳಿ ಬರುತ್ತಿದೆ. ಬೆಂಗಳೂರು ಕರಗ ನಡೆಯುವಂತಹ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ಈ ಕುರಿತು ಕೆಲವೇ ಕ್ಷಣಗಳಲ್ಲಿ ದೇಗುಲದ ಆಡಳಿತ ಮಂಡಳಿ ಸುದ್ದಿಗೋಷ್ಠಿ ಕೂಡ ನಡೆಸಲಿದೆ.ಆಡಳಿತ ಮಂಡಳಿಯಿಂದ ಕಳ್ಳತನದ ಬಗ್ಗೆ ದಾಖಲೆ ಬಿಡುಗಡೆ ಮಾಡಲಿದೆ.
ಕಾಣಿಕೆ ರೂಪದಲ್ಲಿ ಬಂದಿದ್ದ ನೆಕ್ಲೆಸ್ ಬದಲಾವಣೆ ಮಾಡಿದ ಆರೋಪ ಸಹ ಕೇಳಿ ಬಂದಿದೆ. ಧರ್ಮರಾಯಸ್ವಾಮಿ ದೇಗುಲಕ್ಕೆ ಕಾಣಿಕೆ ರೂಪದಲ್ಲಿ ನೆಕ್ಲೆಸ್ ಬಂದಿತ್ತು. ಆ ಒಂದು ನೆಕ್ಲೇಸ್ ತೂಕದಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಇಒ ನಾಗರಾಜ್ ಅವರ ಮೇಲೆ ಆರೋಪ ಹೊರಿಸಲಾಗಿದ್ದು, ಈ ಒಂದು ಆರೋಪವನ್ನು ಇದೀಗ ಮಜರಾಯಿ ಇಲಾಖೆ ಇಒ ನಾಗರಾಜ್ ತಳ್ಳಿ ಹಾಕಿದ್ದಾರೆ.
ತೂಕದಲ್ಲಿ ಬದಲಾವಣೆ ಆಗಿದೆ ಅನ್ನೋ ಆರೋಪ ಸುಳ್ಳು ಅಂತ ನಾಗರಾಜ್ ಹೇಳಿದ್ದು, ಅಕ್ಟೋಬರ್ 6 ರಂದು ಹುಂಡಿ ಎಣಿಕೆ ಮಾಡುವಾಗ ಚಿನ್ನಾಭರಣ ಪತ್ತೆಯಾಗಿತ್ತು. ಗುಣಮಟ್ಟ ಪರೀಕ್ಷಿಸಲು ಬ್ಯಾಂಕ್ ಸಿಬ್ಬಂದಿಗೆ ಬರುವಂತೆ ಸೂಚನೆ ನೀಡಿದ್ದೆವು. ಆದರೆ ಬ್ಯಾಂಕ್ ಮ್ಯಾನೇಜರ್ ಇವತ್ತು ಬರುವುದಕ್ಕೆ ಆಗಲ್ಲ ಅಂತ ಹೇಳಿದ್ದರು. ಅದಕ್ಕಾಗಿ ನಾವೇ ಸರವನ್ನು ತೆಗೆದುಕೊಂಡು ಹೋಗಿದ್ದೆವು. ಸಂಜೆ ಆಗಿದ್ದರಿಂದ ಗುಣಮಟ್ಟದ ಪರೀಕ್ಷೆಗೆ ಬ್ಯಾಂಕಿಗೆ ಬಂದಿ ಬರಲಿಲ್ಲ ಸರವನ್ನು ದೇವಾಲಯದಲ್ಲಿ ಇಡುವುದಕ್ಕೆ ಲಾಕರ್ ವ್ಯವಸ್ಥೆ ಇರಲಿಲ್ಲ.
ಇದು ಬಿ ದರ್ಜೆ ದೇಗುಲ ಅರ್ಚಕರ ಸುಖ ವರದಿಗೆ ನೀಡುವ ನಿಯಮವಿದೆ. ಆದರೆ ಹುಂಡಿ ಎಣಿಕೆಯ ವೇಳೆ ಪ್ರಧಾನ ಅರ್ಚಕರನ್ನು ವಜಾ ಮಾಡಲಾಗಿತ್ತು.ಅಲ್ಲದೆ ದೇಗುಲದ ಸಹಾಯಕ ಅರ್ಚಕರನ್ನು ಅಮಾನತು ಮಾಡಲಾಗಿತ್ತು. ಅಂದೇ ದೇಗುಲದ ಬಳಿ ಇರುವ ಚಿನ್ನದ ಅಂಗಡಿಯಲ್ಲೇ ಪರೀಕ್ಷೆ ಮಾಡಿಸಿದ್ವಿ. ಚಿನ್ನದ ಗುಣಮಟ್ಟ ಮತ್ತು ತೂಕ ಪರಿಕ್ಷಿಸಿ ತೆಗೆದುಕೊಂಡು ಹೋಗಿದ್ದೇವೆ. ಬ್ಯಾಂಕ್ ಸಿಬ್ಬಂದಿ ಮೂಲಕ ಪರೀಕ್ಷೆ ಮಾಡಿ ಹುಂಡಿಗೆ ಹಾಕಿದ್ದೇವೆ. ಬದಲಾವಣೆ ಆಗಿದೆ ಅನ್ನೋ ಆರೋಪ ಸುಳ್ಳು ಅಂತ ನಾಗರಾಜ್ ಹೇಳಿಕೆ ನೀಡಿದ್ದಾರೆ.








