ಕಲಬುರ್ಗಿ : ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಮಹಾ ಎಡಬಟ್ಟು ಆಗಿದ್ದು ಐಸಿಯುವಿ ನಲ್ಲಿದ್ದ ರೋಗಿಯ ಗ್ಲುಕೋಸ್ ಪೈಪ್ ಕಳಚಿ ತೀವ್ರ ರಕ್ತಸ್ರಾವ ಆಗಿರುವ ಘಟನೆ ನಡೆದಿದೆ. ಜಿಮ್ಸ್ ಆಸ್ಪತ್ರೆಯ ಐಸಿಯುವಿನಲ್ಲಿ ಸಿದ್ದಣ್ಣ ಚಿಕಿತ್ಸೆ ಪಡೆಯುತ್ತಿದ್ದರು. ಕಲ್ಬುರ್ಗಿ ತಾಲೂಕಿನ ಮೇಳಕುಂದ ಗ್ರಾಮದ ನಿವಾಸಿ ಸಿದ್ದಣ್ಣ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಿದ್ದಣ್ಣ ವಿಷ ಸೇವಿಸಿದ್ದರಿಂದ ಕಳೆದ ನಾಲ್ಕು ದಿನಗಳ ಹಿಂದೆ ಸಿದ್ದಣ್ಣ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ ರಕ್ತಸ್ರಾವ ಆಗಿದ್ದರಿಂದ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾಗಿದೆ. ಗುಣಮುಖವಾಗುತ್ತಿದ್ದ ವೇಳೆ ರಕ್ತಸ್ರಾವವಾಗಿ ರೋಗಿಯ ಸ್ಥಿತಿ ಗಂಭೀರವಾಗಿದೆ. ಇಂದು ಬೆಳಿಗ್ಗೆ ಹೃದಯಾಘಾತ ಆಗಿದೆ ಅಂತ ವೈದ್ಯರು ಹೇಳಿದ್ದಾರೆ. ಕಲ್ಬುರ್ಗಿಯ ಜಿಮ್ಸ್ ವೈದರಿಂದ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.