Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಕೇವಲ 3 ತಿಂಗಳಲ್ಲಿ ಚಿನ್ನ 17 ಸಾವಿರ, ಬೆಳ್ಳಿ 50 ಸಾವಿರ ರೂ.ಇಳಿಕೆ.!

BIG NEWS : ಭಾರತದ ಮಾವಿನ ಹಣ್ಣುಗಳ ಆಮದು ನಿಷೇಧಿಸಿದ ನೇಪಾಳ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ‘ಬಿ’ ಖಾತಾದಿಂದ ‘ಎ’ ಖಾತೆಗೆ ಬದಲಾಯಿಸಲು ಶೇ. 2ರಷ್ಟು ಮಾತ್ರ ಶುಲ್ಕ!
KARNATAKA

GOOD NEWS : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ‘ಬಿ’ ಖಾತಾದಿಂದ ‘ಎ’ ಖಾತೆಗೆ ಬದಲಾಯಿಸಲು ಶೇ. 2ರಷ್ಟು ಮಾತ್ರ ಶುಲ್ಕ!

By kannadanewsnow57

ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದ ಅಭಿವೃದ್ಧಿ ಮತ್ತು ನಾಗರಿಕರ ಹಿತದೃಷ್ಟಿಯಿಂದ ಸರ್ಕಾರವು ತನ್ನ ಆರನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತೆಗೆ ಪರಿವರ್ತಿಸಿಕೊಳ್ಳಲು ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಈ ಹಿಂದೆ ‘ಬಿ’ ಖಾತಾದಿಂದ ‘ಎ’ ಖಾತೆಗೆ ಪರಿವರ್ತನೆಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ಹಣ ಪಾವತಿಸಬೇಕಿತ್ತು. ಆದರೆ ಈಗ ಈ ಮೊತ್ತವನ್ನು ಕೇವಲ ಶೇ. 2ಕ್ಕೆ ಇಳಿಸಲಾಗಿದೆ.’ನನ್ನ ಇ-ಖಾತಾ, ನನ್ನ ಹಕ್ಕು’ ಎಂಬ ಹೆಸರಿನಲ್ಲಿ ಈ ಬೃಹತ್ ಅಭಿಯಾನ ನಡೆಯಲಿದೆ.ಮೇ 16, 2026 ರಿಂದ ಈ ಅಭಿಯಾನ ಅಧಿಕೃತವಾಗಿ ಚಾಲನೆ ಪಡೆಯಲಿದೆ.ಈ ಸುವರ್ಣಾವಕಾಶ ಕೇವಲ 100 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ.

ಮನೆ ಬಾಗಿಲಿಗೇ ಬರಲಿದೆ ಇ-ಖಾತಾ!

ನಕಲಿ ದಾಖಲೆಗಳ ಸೃಷ್ಟಿ ಮತ್ತು ವಂಚನೆಗೆ ಕಡಿವಾಣ ಹಾಕಲು ಸರ್ಕಾರವು ಬೆಂಗಳೂರಿನ ಸುಮಾರು 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಿದೆ. ಈ ಡಿಜಿಟಲ್ ಇ-ಖಾತಾ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ‘ಬಿಬಿಎಂಪಿ’ ಅಧಿಕಾರಿಗಳು ಅಥವಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಇ-ಖಾತಾ ವಿತರಿಸಲಿದ್ದಾರೆ.

ಎಲ್ಲಿ ನಡೆಯಲಿದೆ?
ಪ್ರತಿ ಶನಿವಾರ ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10ರಂತೆ ಒಟ್ಟು 50 ಸ್ಥಳಗಳಲ್ಲಿ ಈ ಪರಿವರ್ತನಾ ಶಿಬಿರಗಳು ನಡೆಯಲಿವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಲಯಗಳ ನಾಗರಿಕರು ಇದರ ಪ್ರಯೋಜನ ಪಡೆಯಬಹುದು.

ಬೆಂಗಳೂರಿನ ಆಸ್ತಿ ಮಾಲೀಕರ ಹಿತಕಾಪಾಡುವುದು ನಮ್ಮ ಸರ್ಕಾರದ ಗುರಿ. ಈ ಭೂ ಗ್ಯಾರಂಟಿ ಯೋಜನೆಯ ಮೂಲಕ ಆಸ್ತಿ ಮಾಲೀಕತ್ವದ ಗೊಂದಲಗಳಿಗೆ ತೆರೆ ಬೀಳಲಿದ್ದು, ಕಡಿಮೆ ವೆಚ್ಚದಲ್ಲಿ ನಾಗರಿಕರು ತಮ್ಮ ಆಸ್ತಿ ಹಕ್ಕನ್ನು ಭದ್ರಪಡಿಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಇ-ಖಾತಾ ಸಹಾಯವಾಣಿಗಾಗಿ ಸಾರ್ವಜನಿಕರು 94806 83695 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಬೆಂಗಳೂರು ನಗರದಲ್ಲಿರುವ ʼಬಿʼ ಖಾತಾ ಆಸ್ತಿಗಳನ್ನು ʼಎʼ ಖಾತಾವನ್ನಾಗಿ ಮಾಡಿಸಿಕೊಳ್ಳುವವರಿಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರ ಬದಲು ಶೇ.2ರಷ್ಟು ಹಣ ಪಾವತಿಸುವ ವಿಶೇಷ ರಿಯಾಯಿತಿ ದೊರೆಯಲಿದೆ. ಇದು ಸರ್ಕಾರದ 6ನೇ ಗ್ಯಾರಂಟಿ ʼಭೂ ಗ್ಯಾರಂಟಿ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. pic.twitter.com/6vBYH3Vabn

— DIPR Karnataka (@KarnatakaVarthe) May 14, 2026

GOOD NEWS: Good news for property owners in Bengaluru: Only 2% fee to switch from 'B' account to 'A' account!
Share. Facebook Twitter LinkedIn WhatsApp Email

Related Posts

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

1 Min Read

BREAKING : ಬೆಂಗಳೂರಿನಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ: ಸಿಸಿಬಿ ಪೊಲೀಸರಿಂದ ಪ್ರಮುಖ ಆರೋಪಿಯ ಬಂಧನ

2 Mins Read

ಒಂದೆಡೆ ಜೈಲಲ್ಲಿ ಪುಸ್ತಕ ಓದುತ್ತಾ ಸೈಲೆಂಟ್ ಆದ ನಟ ದರ್ಶನ್ : ಇತ್ತ ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ!

2 Mins Read
Recent News

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಕೇವಲ 3 ತಿಂಗಳಲ್ಲಿ ಚಿನ್ನ 17 ಸಾವಿರ, ಬೆಳ್ಳಿ 50 ಸಾವಿರ ರೂ.ಇಳಿಕೆ.!

BIG NEWS : ಭಾರತದ ಮಾವಿನ ಹಣ್ಣುಗಳ ಆಮದು ನಿಷೇಧಿಸಿದ ನೇಪಾಳ.!

BREAKING : ಬೆಂಗಳೂರಿನಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ: ಸಿಸಿಬಿ ಪೊಲೀಸರಿಂದ ಪ್ರಮುಖ ಆರೋಪಿಯ ಬಂಧನ

State News
KARNATAKA

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

By ಸುರೇಶ್‌ KARNATAKA 1 Min Read

ಹಾವೇರಿ : ಜಿಲ್ಲೆಯಲ್ಲಿ ನಿಧಿ ಆಸೆಗೆ ಬಿದ್ದು ದೇವಸ್ಥಾನದ ಮೂರ್ತಿಗಳನ್ನು ಕಿತ್ತುಹಾಕಿದ್ದ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಜಿಲ್ಲೆಯ…

BREAKING : ಬೆಂಗಳೂರಿನಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ: ಸಿಸಿಬಿ ಪೊಲೀಸರಿಂದ ಪ್ರಮುಖ ಆರೋಪಿಯ ಬಂಧನ

ಒಂದೆಡೆ ಜೈಲಲ್ಲಿ ಪುಸ್ತಕ ಓದುತ್ತಾ ಸೈಲೆಂಟ್ ಆದ ನಟ ದರ್ಶನ್ : ಇತ್ತ ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ!

ರಾಜ್ಯದ ಮಹಿಳೆಯರೇ ಗಮನಿಸಿ : `ಗೃಹಲಕ್ಷ್ಮಿ’ ಹಣ ಪಡೆಯಲು ಇನ್ಮುಂದೆ ಈ ದಾಖಲೆಗಳು ಕಡ್ಡಾಯ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.