ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಸ್ತುತ ವಿಚಿತ್ರ ಪ್ರವೃತ್ತಿ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದ ಹಲವು ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಒತ್ತಡವನ್ನ ಕಡಿಮೆ ಮಾಡಲು ಮತ್ತು ನಕಾರಾತ್ಮಕ ಆಲೋಚನೆಗಳಿಂದ ಪರಿಹಾರ ಪಡೆಯಲು ಅನೇಕ ಯುವತಿಯರು ಈ ಹೊಸ ಪ್ರವೃತ್ತಿಯನ್ನ ಶುರು ಮಾಡಿದ್ದಾರೆ. ಹಾಗಾದ್ರೆ, ಈ ಹೊಸ ಪ್ರವೃತ್ತಿ ಏನು..? ಈಗ ಅದರ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ.
ಒತ್ತಡ ಮತ್ತು ನಕಾರಾತ್ಮಕ ಆಲೋಚನೆಗಳನ್ನ ನಿವಾರಿಸಲು ಹೊಸ ಪ್ರವೃತ್ತಿಯ ಭಾಗವಾಗಿ ಯುವತಿಯರು ಯುವಕರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದಲ್ಲದೆ, ಕೆಲವು ಯುವಕರು ಸಹ ಈ ವಿಶೇಷ ಸೇವೆಯನ್ನ ಶುರು ಮಾಡಿದ್ದಾರೆ. ಆದಾಗ್ಯೂ, ಹುಡುಗಿಯರ ಜೊತೆಗೆ ಹುಡುಗರು ಸಹ ಈ ಮೂಲಕ ಭಾರಿ ಪ್ರಮಾಣದ ಹಣವನ್ನ ಗಳಿಸುತ್ತಿದ್ದಾರೆ.
ಚೀನಾ ಮಾರ್ನಿಂಗ್ ಪೋಸ್ಟ್ ನೀಡಿರುವ ವಿವರಗಳ ಪ್ರಕಾರ, ಪ್ರತಿಯೊಬ್ಬ ಯುವತಿಯೂ ಯುವಕನನ್ನ ಅಪ್ಪಿಕೊಳ್ಳಲು ಸುಮಾರು 20 ರಿಂದ 20 ಯುವಾನ್’ಗಳಿಗೆ ಚಾರ್ಜ್ ಮಾಡುತ್ತಾರೆ. ಈ ಮೂಲಕ ಅವರಲ್ಲಿರುವ ಮಾನಸಿಕ ಒತ್ತಡ ಕಡಿಮೆಯಾಗಲಿದ್ದು, ಸಕಾರಾತ್ಮಕ ಆಲೋಚನೆಗಳಿಂದ ಹೊರ ಬರುತ್ತಾರೆ ಎಂದು ಹೇಳಲಾಗ್ತಿದೆ.
ಅನೇಕ ವಿದ್ಯಾರ್ಥಿಗಳು ತಮ್ಮನ್ನು ತಾವು ಅಪ್ಪಿಕೊಳ್ಳುವ ವೀಡಿಯೊಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನೇಕ ಯುವ ವಿದ್ಯಾರ್ಥಿಗಳು ತೀವ್ರವಾದ ಶೈಕ್ಷಣಿಕ ಒತ್ತಡದಿಂದಾಗಿ ಕಷ್ಟಪಡುತ್ತಿದ್ದಾರೆ, ಅದನ್ನು ನಿವಾರಿಸಲು ಅವರು ಈ ಅಪ್ಪುಗೆಯ ಪ್ರವೃತ್ತಿಗೆ ಸೇರುತ್ತಿದ್ದಾರೆ ಎನ್ನಲಾಗ್ತಿದೆ.
ಚೀನಾದಲ್ಲಿ ಈ ಅಪ್ಪುಗೆಯ ಪ್ರವೃತ್ತಿ ಈಗ ಮೆಟ್ರೋ ನಿಲ್ದಾಣಗಳು ಮತ್ತು ಶಾಪಿಂಗ್ ಮಾಲ್ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರೆದಿದೆ. ಯುವತಿಯರು 10 ನಿಮಿಷಗಳ ಅಪ್ಪುಗೆಗೆ 1200 ರೂ.ವರೆಗೆ ಪಾವತಿಸಬೇಕಾಗುತ್ತದೆ. ಆದ್ರೆ, ಹಲವರು ಅಪ್ಪುಗೆ ಮಾಡುತ್ತಿರುವ ಯುವತಿಯರನ್ನ ಹೊಗಳುತ್ತಿದ್ದಾರೆ. ಇದು ಅತ್ಯಾಚಾರ ಪ್ರಕರಣಗಳನ್ನ ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ.
SHOCKING : ಮಂಗಳೂರಲ್ಲಿ ತಮ್ಮನ ಅಂತ್ಯಕ್ರಿಯೆಗೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಸಾವು!
BIG NEWS: ಬೆಂಗಳೂರಲ್ಲಿ ಆಟೋ ಚಾಲಕರ ‘ದುಬಾರಿ ದರ ವಸೂಲಿ’ ವಿರುದ್ಧ ಕ್ರಮಕ್ಕೆ ‘ಸಚಿವ ರಾಮಲಿಂಗಾರೆಡ್ಡಿ’ ಆದೇಶ
BREAKING : ಏರ್ ಇಂಡಿಯಾ ವಿಮಾನ ದುರಂತ ; ‘DNA’ ಗುರುತಿಸಿ ಅಂತಿಮ ಮೃತದೇಹ ಹಸ್ತಾಂತರ, ಸಾವಿನ ಸಂಖ್ಯೆ 260ಕ್ಕೆ ಏರಿಕೆ