Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೇಟ್ಸ್ ಟಾಕ್ ಸೆಕ್ಸ್: ದಾಂಪತ್ಯ ಜೀವನ ಹಳಸುವ ಮುನ್ನವೇ ಎಚ್ಚರಿಸುವ ಈ ಪ್ರಮುಖ ಸಂಕೇತಗಳನ್ನು ನಿರ್ಲಕ್ಷಿಸಬೇಡಿ!

ಕೊನೆಗೂ ಅಮೆರಿಕ-ಇರಾನ್ ಯುದ್ಧ ಅಂತ್ಯ: 107 ದಿನಗಳಲ್ಲಿ ಮೃತಪಟ್ಟವರು, ಖರ್ಚಾದ ಹಣ ಎಷ್ಟು ಗೊತ್ತಾ?

​ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ: ಜೂನ್ 23-24 ರಂದು ಉನ್ನತ ಮಟ್ಟದ ಮಹತ್ವದ ಮಾತುಕತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ತಮ್ಮ ವಿರುದ್ಧ ದೂರು ನೀಡಿದ ವ್ಯಕ್ತಿ ವಿರುದ್ಧ ರಾಜ್ಯಪಾಲರಿಗೆ ದಿನೇಶ್ ಅಮೀನಮಟ್ಟು ದೂರು, ಸ್ಪಷ್ಟೀಕರಣ
KARNATAKA

BREAKING: ತಮ್ಮ ವಿರುದ್ಧ ದೂರು ನೀಡಿದ ವ್ಯಕ್ತಿ ವಿರುದ್ಧ ರಾಜ್ಯಪಾಲರಿಗೆ ದಿನೇಶ್ ಅಮೀನಮಟ್ಟು ದೂರು, ಸ್ಪಷ್ಟೀಕರಣ

By ಸುರೇಶ್‌

ಬೆಂಗಳೂರು : ವಿಧಾನ ಪರಿಷತ್ ಗೆ ನೇಮಕ ಮಾಡದಂತೆ ತಮ್ಮ ವಿರುದ್ಧದ ಆರೋಪಗಳ ಸಂಬಂಧ ದಿನೇಶ್ ಅಮೀನ್ ಮಟ್ಟು ಅವರು ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಜಿ ಎಮ್ ಗಾಡ್ಕರ್ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದು, ಜಿಎಂ ಗಾಡ್ಕರ್ ವಿರುದ್ಧ ಕೇಸ್ ದಾಖಲಿಸಲು ಆದೇಶ ನೀಡುವಂತೆ ದಿನೇಶ್ ಅಮೀನ್ ಮಟ್ಟು ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪತ್ರದಲ್ಲಿ ನನಗೆ ಅಪರಿಚಿತನಾದ ಜಿ.ಎಂ.ಗಾಡ್ಕರ್ ಎಂಬ ವ್ಯಕ್ತಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ತಮಗೆ ನೀಡಿರುವ ದೂರು ಕೆಲವು ಪತ್ರಿಕೆಗಳು, ಚಾನೆಲ್ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ/ಪ್ರಸಾರವಾಗಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟಿಕರಣ ಎಂದು ಉಲ್ಲೆಖಿಸಿದ್ದಾರೆ.

ಮೊದಲನೆಯದಾಗಿ, ನಾನು ತುಮಕೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಿವೇಶನ ಪಡೆದಿದ್ದೇನೆ ಎನ್ನುವ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು ಮತ್ತು ನಿರಾಧಾರವಾದುದು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾನು ಯಾವುದೇ ನಿದೇಶನ ಪಡೆದಿಲ್ಲ. ಕೇಂದ್ರ ಸರ್ಕಾರದ ಯೋಜನೆಯಾದ ಐಡಿಎಸ್ ಎಂಟಿ ಯೋಜನೆಯಡಿಯಲ್ಲಿ ನಾನು ನಿವೇಶನ ಪಡೆದಿದ್ದು ಅದಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳನ್ನು ನಾನು ಪಾಲಿಸಿದ್ದೇನೆ. ಅದರಲ್ಲಿ ಸ್ಥಳೀಯವಾಗಿ ಹದಿನೈದು ವರ್ಷಗಳ ಕಾಲ ನಿವಾಸಿಯಾಗಿ ಇರಬೇಕೆಂಬ ಯಾವ ಷರತ್ತು ಕೂಡಾ ಇಲ್ಲ. (ಇದಕ್ಕೆ ಸಂಬಂಧಿಸಿದ ಷರತ್ತುಗಳುಳ್ಳ ನಿವೇಶನ ಹಂಚಿಕೆ ಪತ್ರವನ್ನು ಲಗತ್ತಿಸಿದ್ದೇನೆ)

ಎರಡನೆಯದಾಗಿ, ಪತ್ರಕರ್ತನಾಗಿರುವ ನನ್ನ ವಿರುದ್ದ ನನಗಾಗದ ವ್ಯಕ್ತಿಗಳು ಪೊಲೀಸ್ ಠಾಣೆಗಳಲ್ಲಿ ಹಲವಾರು ಬಾರಿ ದೂರು ದಾಖಲಿಸಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ ಅಂತಹ ದೂರುಗಳೆಲ್ಲವೂ ದುರುದ್ದೇಶದಿಂದ ಕೂಡಿದ ಮತ್ತು ಆಧಾರರಹಿತವಾಗಿದ್ದ ಕಾರಣ ಯಾವುದೇ ಪ್ರಕರಣದಲ್ಲಿ ನನ್ನ ಮೇಲಿನ ಅರೋಪಗಳು ಸಾಬೀತಾಗಿಲ್ಲ. ದೂರುದಾರರು ಉಲ್ಲೇಖಿಸಿದ ಫೇಕ್ ನ್ಯೂಸ್ ಪ್ರಕರಣದಲ್ಲಿಯೂ ಕಾನೂನು ಉಲ್ಲಂಘಣೆ ಮಾಡಿರುವ ಬಗ್ಗೆ ಸಾಕ್ಷಾಧಾರಗಳಿಲ್ಲದ ಕಾರಣ ಎರಡೂ ವರ್ಷಗಳಾದರೂ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿಲ್ಲ. ಹಾಗಾಗಿ ನನ್ನ ಮೇಲೆ ಯಾವುದೇ ದೋಷಾರೋಪಣೆ ಇರುವುದಿಲ್ಲ.

ಮೂರನೆಯದಾಗಿ, ದೂರುದಾರರು ಉಲ್ಲೇಖಿಸಿರುವ “ದಿ ಪಾಲಿಸಿ ಫ್ರಂಟ್ ಸಂಸ್ಥೆಯಲ್ಲಿ ನಾನು ಮಾಲೀಕನೂ ಅಲ್ಲ, ಪಾಲುದಾರನೂ ಅಲ್ಲ. ನನಗೆ ಯಾವುದೇ ಸಂಸ್ಥೆಯನ್ನು ಬೇನಾಮಿಯಾಗಿ ನಡೆಸುವ ಅವಶ್ಯಕತೆಯೂ ಇಲ್ಲ. ಸುಳ್ಳು ಮಾಹಿತಿಗಳನ್ನು ಆಧರಿಸಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ದೂರುದಾರರು ನನ್ನ ಚಾರಿತ್ರ್ಯಹನನದ ಏಕೈಕ ಆದೇಶದಿಂದ ಈ ಆರೋಪ ಮಾಡಿದ್ದಾರೆ.

ಕಳೆದ 40 ವರ್ಷಗಳಿಂದ ನಾನು ಪತ್ರಿಕಾ ವೃತ್ತಿಯಲ್ಲಿದ್ದು ಮತ್ತು ಆ ಕಾರಣದಿಂದಾಗಿ ಸಾರ್ವಜನಿಕ ಜೀವನದಲ್ಲಿರುವ ನಾನು ಸಂವಿಧಾನ ಮತ್ತು ನೆಲದ ಕಾನೂನಿಗೆ ಗೌರವಕೊಟ್ಟುಕೊಂಡು ಬದುಕಿದವನು. ವೈಯಕ್ತಿಕ ದ್ವೇಷಾಸೂಯೆಯಿಂದ ಕೆಲವರು ಆರೋಪಗಳನ್ನು ಮಾಡಿದ್ದರೂ ಅವುಗಳು ಸಾಬೀತಾಗದೆ ಬಿದ್ದುಹೋಗಿರುವುದು ನಾನು ಪಾಲಿಸಿಕೊಂಡು ಬಂದಿರುವ ಪ್ರಾಮಾಣಿಕ ಬದುಕು, ಸತ್ಯ ಮತ್ತು ನ್ಯಾಯ ನಿಷ್ಠೆಗೆ ಸಾಕ್ಷಿಯಾಗಿದೆ.

ನನ್ನ ಚಾರಿತ್ರ್ಯಹನನ ಮಾಡುವ ದುರುದ್ದೇಶದಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲೆ ಮಾಡಲಿದ್ದೇನೆ ಎನ್ನುವುದನ್ನೂ ತಮ್ಮ ಗಮನಕ್ಕೆ ತರಬಯಸುತ್ತೇನೆ.ನನ್ನ ಈ ವಿವರಣೆಯನ್ನು ತಾವು ಗಂಭೀರವಾಗಿ ಪರಿಗಣಿಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಬೇಕೆಂದು ವಿನಮ್ರತೆಯಿಂದ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

2 Mins Read

ವಿಜಯಪುರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

1 Min Read

ಮಂಡ್ಯದ ಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ಸಾಧನೆ: 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

2 Mins Read
Recent News

ಲೇಟ್ಸ್ ಟಾಕ್ ಸೆಕ್ಸ್: ದಾಂಪತ್ಯ ಜೀವನ ಹಳಸುವ ಮುನ್ನವೇ ಎಚ್ಚರಿಸುವ ಈ ಪ್ರಮುಖ ಸಂಕೇತಗಳನ್ನು ನಿರ್ಲಕ್ಷಿಸಬೇಡಿ!

ಕೊನೆಗೂ ಅಮೆರಿಕ-ಇರಾನ್ ಯುದ್ಧ ಅಂತ್ಯ: 107 ದಿನಗಳಲ್ಲಿ ಮೃತಪಟ್ಟವರು, ಖರ್ಚಾದ ಹಣ ಎಷ್ಟು ಗೊತ್ತಾ?

​ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ: ಜೂನ್ 23-24 ರಂದು ಉನ್ನತ ಮಟ್ಟದ ಮಹತ್ವದ ಮಾತುಕತೆ!

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

State News
KARNATAKA

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಸಾಗರ ನಗರಸಭೆಯ ಮಹಿಳಾ ಪೌರಕಾರ್ಮಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರೂ, ನಗರಸಭೆ ಪೌರಕಾರ್ಮಿಕರ ಮೇಸ್ತ್ರಿ ನಾಗರಾಜ ಸ್ವಾಮಿಯನ್ನು…

ವಿಜಯಪುರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಮಂಡ್ಯದ ಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ಸಾಧನೆ: 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಸಾಗರದ ಉಳ್ಳೂರಿನ ‘ಸರ್ಕಾರಿ ಪ್ರೌಢಶಾಲೆ’ಯ ‘ಶೌಚಾಲಯದ ಪರಿಕರ’ಗಳನ್ನೇ ಕಿಡಿಗೇಡಿಗಳು ಧ್ವಂಸ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.