ತುಮಕೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದ್ದು, ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಸಾಲ ಪಡೆದವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ತುಮಕೂರಿನಲ್ಲಿ ಕೂಡ ಮತ್ತೊಂದು ಘಟನೆ ನಡೆದಿದ್ದು, ಮಹಿಳೆ ಒಬ್ಬರು ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ನೊಂದು 30 ಬಿಪಿ ಮಾತ್ರೆಗಳನ್ನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಹೌದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ಘಟನೆ ನಡೆದಿದ್ದು, ಫೈನಾನ್ಸ್ ಕಿರುಕುಳಕ್ಕೆ ಹೆದರಿ ಮಂಗಳಮ್ಮ (45) ಆತ್ಮಹತ್ಯೆಗೆ ಯತ್ನಿಸಿದ್ದಾರೆ. 30 ಬಿಪಿ ಮಾತ್ರೆಗಳನ್ನು ನುಂಗಿ ಮಂಗಳಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ತುಮಕೂರು ಜಿಲ್ಲಾ ಆಸ್ಪತ್ರೆಯ ಐಸಿಯು ಘಟಕದಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಮಂಗಳಮ 2 ಲಕ್ಷ ಸಾಲ ಪಡೆದಿದ್ದರು. ಗ್ರಾಮೀಣ ಕೂಟದಲ್ಲಿ 2 ಲಕ್ಷ ಮತ್ತು L & T ಫೈನಾನ್ಸ್ ನಲ್ಲಿ 70 ಸಾವಿರ,ಆಶೀರ್ವಾದ ಫೈನಾನ್ಸ್ ಬಳಿ 80 ಸಾವಿರ ಸಾಲವನ್ನು ಮಂಗಳಮ್ಮ ಪಡೆದಿದ್ದರು. ಒಂದು ವರ್ಷ ಹಿಂದೆ ಹೋಟೆಲ್ ಮಾಡಲು ಮಂಗಳಮ್ಮ ಸಾಲವನ್ನು ಪಡೆದಿದ್ದರು ಹೋಟೆಲ್ ವ್ಯಾಪಾರದಲ್ಲಿ ನಷ್ಟ ಆಗಿದ್ದಕ್ಕೆ ಸಾಲ ತೀರಿಸಲು ವಿಳಂಬವಾಗಿದೆ ದಿನಗೂಲಿ ಕೆಲಸಕ್ಕೆ ಹೋಗಿ ಈಗಾಗಲೇ ಮಂಗಳಮ್ಮ 40 ಕಂತುಗಳನ್ನು ಕಟ್ಟಿದರು. ಎರಡು ದಿನದಿಂದ ಮನೆ ಬಳಿ ಫೈನಾನ್ಸ್ ಸಿಬ್ಬಂದಿ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದು ಮಂಗಳಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.