Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರಾಜ್ಯದ ‘NHM ಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಸೇವೆ ಮುಂದುವರೆಸಿ ಸರ್ಕಾರ ಆದೇಶ

03/04/2026 5:50 AM

ನಿಮ್ಮ ಪಿಎಫ್ (PF) ಬ್ಯಾಲೆನ್ಸ್ ತಿಳಿಯಬೇಕೇ? ಕೇವಲ ಒಂದು ಮಿಸ್ಡ್ ಕಾಲ್ ಅಥವಾ SMS ಸಾಕು! ಇಲ್ಲಿದೆ ಕಂಪ್ಲೀಟ್ ಗೈಡ್

03/04/2026 5:42 AM

ಮಲಬಾರ್ ಪರೋಟಾ: ಹೆಸರಷ್ಟೇ ಮಲಬಾರ್, ಇದರ ಇತಿಹಾಸ ಮಾತ್ರ ಜಗತ್ತಿನಾದ್ಯಂತ ಪಸರಿಸಿದೆ!

03/04/2026 5:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಕ್ರಮ ಬಾಂಗ್ಲಾ, ಪಾಕ್ ವಲಸಿಗರ ‘ಗಡಿಪಾರಿಗೆ’ ವಿಶೇಷ ಕಾರ್ಯಪಡೆ ರಚನೆ : ಗೃಹ ಸಚಿವ ಜಿ.ಪರಮೇಶ್ವರ್
KARNATAKA

BREAKING : ಅಕ್ರಮ ಬಾಂಗ್ಲಾ, ಪಾಕ್ ವಲಸಿಗರ ‘ಗಡಿಪಾರಿಗೆ’ ವಿಶೇಷ ಕಾರ್ಯಪಡೆ ರಚನೆ : ಗೃಹ ಸಚಿವ ಜಿ.ಪರಮೇಶ್ವರ್

By kannadanewsnow0520/12/2024 11:10 AM

ಬೆಂಗಳೂರು : ಕಳೆದ ಕೆಲವು ತಿಂಗಳಿನ ಹಿಂದೆ ಬೆಂಗಳೂರಿನ ಜಿಗಣಿ ಹಾಗೂ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಬಾಂಗ್ಲಾ ಹಾಗೂ ಪಾಕಿಸ್ತಾನ ಪ್ರಜೆಗಳು ನುಸುಳಿದ್ದರು. ಅಕ್ರಮ ಬಾಂಗ್ಲಾ ವಲಸಿಗರು ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಅಪಾಯಕರವಾಗಿದ್ದು, ಅವರನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸದಸ್ಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾವಿರಾರು ಅಕ್ರಮ ವಲಸಿಗರು ಭಾರತಕ್ಕೆ ಆಗಮಿಸುಸುತ್ತಿದ್ದಾರೆ ಮತ್ತು ದೇಶದ ವಿವಿಧ ಭಾಗಗಳಿಗೆ ತೆರಳುತ್ತಾರೆ ಎಂದಿದ್ದಾರೆ.ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ರಕ್ಷಣಾ ಸಿಬ್ಬಂದಿ ಶ್ರಮ ವಹಿಸುತ್ತಿದ್ದಾರೆ. ಅದರ ಹೊರತಾಗಿಯೂ, ಅವರು ಭಾರತವನ್ನು ಪ್ರವೇಶಿಸುತ್ತಾರೆ. ಅವರನ್ನು ಗುರುತಿಸಲು ವಿಶೇಷ ಕಾರ್ಯಪಡೆ ರಚಿಸಿದ್ದೇವೆ.

ಪ್ರತಿ ವರ್ಷ ಸಾವಿರಾರು ಜನರನ್ನು ಗಡೀಪಾರು ಮಾಡಲಾಗುತ್ತಿದೆ.ಇಲ್ಲಿಯವರೆಗೆ, ಅಕ್ರಮವಾಗಿ ನೆಲೆಸಿದ್ದ 159 ಬಾಂಗ್ಲಾದೇಶಿ ಪ್ರಜೆಗಳು ಮತ್ತು 24 ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ 115 ಜನರು ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಇಂತಹ ಎಷ್ಟು ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಬಿಜೆಪಿಯ ಅರುಣ್ ಪ್ರಶ್ನಿಸಿದ್ದಾರೆ. ಅಲ್ಲದೆ, ಚಿತ್ರದುರ್ಗದಲ್ಲಿ ಆರು ಮಂದಿಯ ಬಂಧನದಿಂದ ಕರ್ನಾಟಕದ ಹೋಂಸ್ಟೇ ಮತ್ತು ರೆಸಾರ್ಟ್‌ಗಳು ಅಕ್ರಮ ವಲಸಿಗರಿಗೆ ಸ್ವರ್ಗವಾಗಿ ಪರಿಣಮಿಸಿರುವುದು ತಿಳಿದುಬಂದಿದೆ ಎಂದಿದ್ದಾರೆ. ಇದಕ್ಕೆ ಪರಮೇಶ್ವರ್ ಉತ್ತರಿಸಿ ಬಾಂಗ್ಲಾದೇಶಿ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಪಡೆ ರಚಿಸಲಾಗಿದೆ. ಬಾಂಗ್ಲಾದೇಶಿ ವಲಸಿಗರು ಮಾತ್ರವಲ್ಲ, ಅಧ್ಯಯನಕ್ಕೆ ಬರುವ ಕೆಲವು ಆಫ್ರಿಕನ್ನರು ಸಹ ಅದೇ ರೀತಿ ನಾಪತ್ತೆಯಾಗಿದ್ದಾರೆ ಎಂದು ಪರಮೇಶ್ವರ ಸದನಕ್ಕೆ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದ ‘NHM ಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಸೇವೆ ಮುಂದುವರೆಸಿ ಸರ್ಕಾರ ಆದೇಶ

03/04/2026 5:50 AM2 Mins Read

ರಾಜ್ಯದ ರೈತರ ಮಕ್ಕಳಿಗೆ `ಶೈಕ್ಷಣಿಕ ವೆಚ್ಚ ಮರುಪಾವತಿ’ ಯೋಜನೆ : ಇನ್ನು ಶಿಕ್ಷಣದ ಖರ್ಚು ಸರ್ಕಾರದ ಜವಾಬ್ದಾರಿ!

03/04/2026 5:32 AM2 Mins Read

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಈ ವರ್ಷ 56 ಸಾವಿರ ಹುದ್ದೆಗಳ ನೇಮಕಾತಿ : CM ಸಿದ್ಧರಾಮಯ್ಯ ಘೋಷಣೆ

03/04/2026 5:26 AM1 Min Read
Recent News

GOOD NEWS: ರಾಜ್ಯದ ‘NHM ಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಸೇವೆ ಮುಂದುವರೆಸಿ ಸರ್ಕಾರ ಆದೇಶ

03/04/2026 5:50 AM

ನಿಮ್ಮ ಪಿಎಫ್ (PF) ಬ್ಯಾಲೆನ್ಸ್ ತಿಳಿಯಬೇಕೇ? ಕೇವಲ ಒಂದು ಮಿಸ್ಡ್ ಕಾಲ್ ಅಥವಾ SMS ಸಾಕು! ಇಲ್ಲಿದೆ ಕಂಪ್ಲೀಟ್ ಗೈಡ್

03/04/2026 5:42 AM

ಮಲಬಾರ್ ಪರೋಟಾ: ಹೆಸರಷ್ಟೇ ಮಲಬಾರ್, ಇದರ ಇತಿಹಾಸ ಮಾತ್ರ ಜಗತ್ತಿನಾದ್ಯಂತ ಪಸರಿಸಿದೆ!

03/04/2026 5:37 AM

ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ಸುರಕ್ಷತೆಗೆ ಇಲ್ಲಿದೆ ‘ಕೂಲ್’ ಟಿಪ್ಸ್!

03/04/2026 5:34 AM
State News
KARNATAKA

GOOD NEWS: ರಾಜ್ಯದ ‘NHM ಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಸೇವೆ ಮುಂದುವರೆಸಿ ಸರ್ಕಾರ ಆದೇಶ

By kannadanewsnow0903/04/2026 5:50 AM KARNATAKA 2 Mins Read

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ…

ರಾಜ್ಯದ ರೈತರ ಮಕ್ಕಳಿಗೆ `ಶೈಕ್ಷಣಿಕ ವೆಚ್ಚ ಮರುಪಾವತಿ’ ಯೋಜನೆ : ಇನ್ನು ಶಿಕ್ಷಣದ ಖರ್ಚು ಸರ್ಕಾರದ ಜವಾಬ್ದಾರಿ!

03/04/2026 5:32 AM

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಈ ವರ್ಷ 56 ಸಾವಿರ ಹುದ್ದೆಗಳ ನೇಮಕಾತಿ : CM ಸಿದ್ಧರಾಮಯ್ಯ ಘೋಷಣೆ

03/04/2026 5:26 AM

BIG NEWS : ಉಪಚುನಾವಣೆ ಕಾರಣಕ್ಕೆ `ಗ್ಯಾರಂಟಿ ಯೋಜನೆ’ಗಳಿಗೆ ತಡೆ ನೀಡಲಾಗದು : ಹೈಕೋರ್ಟ್ ಮಹತ್ವದ ತೀರ್ಪು

03/04/2026 5:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.