ಬೆಂಗಳೂರು : ‘KEA’ ಸೀಟ್ ಬ್ಲಾಕಿಂಗ್ ಹಗರಣದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯ ಪೊಲೀಸರು ಕಿಂಗ್ ಪಿನ್ ಸಮೇತ 10 ಆರೋಪಿಗಳನ್ನು ಬಂಧಿಸಿದ್ದರೆ. ಬಂಧಿತ ಆರೋಪಿಗಳನ್ನು ಹರ್ಷ, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಪ್ರಕಾಶ್ ಹಾಗೂ ಅವಿನಾಶ್ ಸೇರಿದಂತೆ 10 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಹರ್ಷ ಎನ್ನುವ ಆರೋಪಿ ಕೆಇಎ ಸೀಟ್ ಬ್ಲಾಕಿಂಗ್ ಹಗರಣದ ಕಿಂಗ್ ಪಿನ್ ಎಂದು ತಿಳಿದುಬಂದಿದೆ. ಕೌನ್ಸೆಲಿಂಗ್ ಗೆ ಆಯ್ಕೆಯಾಗಿ ಕಾಲೇಜು ಸೆಲೆಕ್ಟ್ ಮಾಡಿಕೊಳ್ಳದವರ ಸೀಟ್ ಗಳು, ಖಾಸಗಿ ಕಾಲೇಜಿನಲ್ಲಿ ಸೀಟ್ ಪಡೆದು ಹೋಗದ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಸೀಟ್ ಗಳನ್ನು ಬಂಧಿತ ಆರೋಪಿಗಳು ಬ್ಲಾಕ್ ಮಾಡುತ್ತಿದ್ದರು ಎನ್ನಲಾಗಿದೆ. ಲಕ್ಷಾಂತರ ರೂಪಾಯಿಗೆ ಮ್ಯಾನೇಜ್ಮೆಂಟ್ ಕೋಟಾದ ಅಡಿ ಬೇರೆಯವರಿಗೆ ಡೀಲ್ ಮಾಡಿಕೊಳ್ಳುತ್ತಿದ್ದರು. ಮಧ್ಯವರ್ತಿಗಳ ಸಹಾಯದಿಂದ ಆರೋಪಿಗಳು ಡಿಲೀಟ್ ಮಾಡುತ್ತಿದ್ದರು ಎನ್ನಲಾಗಿದೆ.
ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸೀಟ್ ಡೀಲಿಂಗ್ ನಲ್ಲಿ ಪ್ರತಿಷ್ಠಿತ ಕಾಲೇಜುಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಗರಣದ ಸಂಬಂಧ ನವೆಂಬರ್ 3ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಇಎ ಆಡಳಿತ ಅಧಿಕಾರಿ ಇಸಾಲುದ್ದೀನ್ ಜೆ ಗಾಡಿಯಲ್ ಅವರು ದೂರು ನೀಡಿದ್ದರು.
ಎಫ್ಐಆರ್ ಆಗಿದ್ದ ವಿಚಾರ ತಿಳಿದು ಪ್ರಕಾಶ್ ಎನ್ನುವ ಆರೋಪಿ ಲ್ಯಾಪ್ಟಾಪ್ ಸುಟ್ಟು ಹಾಕಿದ್ದ. ಕಡೂರಿನ ಜಮೀನಿನಲ್ಲಿ ಲ್ಯಾಪ್ಟಾಪ್ ಸುಟ್ಟು ಹಾಕಿ ಸಾಕ್ಷಿ ನಾಶ ಪಡಿಸಿದ್ದ. ಕೆಇಎ ನೌಕರ ಅವಿನಾಶ್ ಸಹಾಯದಿಂದ ಸೀಟ್ ಬ್ಲಾಕ್ ಮಾಡುತ್ತಿದ್ದರು.ಸದ್ಯ ಪ್ರಕರಣದ ತನಿಖೆಯನ್ನು ಮಲ್ಲೇಶ್ವರಂ ಪೊಲೀಸರು ಮುಂದುವರಿಸಿದ್ದಾರೆ.