ಬೆಂಗಳೂರು : ಕಿರುತೆರೆ ನಟಿ ನಟಿ ದೀಪಿಕಾ ದಾಸ್ ಅವರ ತಾಯಿಗೆ, ಹಣ ನೀಡದೆ ಹೋದರೆ ನಿಮ್ಮ ಮಗಳು ಮತ್ತು ಅಳಿಯನ ವಿರುದ್ಧ ಅಪಪ್ರಚಾರ ಮಾಡುತ್ತೇನೆ ಎಂದು ಫೋನ್ ಮಾಡಿ ಯಶವಂತ ಎನ್ನುವ ವ್ಯಕ್ತಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಕುರಿತಂತೆ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾ ಅವರು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹೌದು ಹಣ ನೀಡದೆ ಹೋದರೆ ಮಗಳು ಅಳಿಯನ ಘನತೆಯ ಬಗ್ಗೆ ಅಪಪ್ರಚಾರ ಮಾಡುದಾಗಿ ಯಶವಂತ್ ಎನ್ನುವ ವ್ಯಕ್ತಿ ಬೆದರಿಕೆ ಹಾಕಿದ್ದು, ಆತನ ವಿರುದ್ಧ ನಟಿ ದೀಪಿಕಾ ದಾಸ್ ತಾಯಿ ದೂರು ಸಲ್ಲಿಸಿದ್ದಾರೆ. ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಯಶವಂತ್ ಕರೆ ಮಾಡಿದ್ದ. ಹಣ ನೀಡದಿದ್ದರೆ ಅಳಿಯನ ವಿರುದ್ಧ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಮಗಳಿಗೆ ಏಕೆ ಮದುವೆ ಮಾಡಿದ್ದೀರಿ ದೀಪಕ್ ಮೋಸ ಮಾಡಿದ್ದಾನೆ. ದೀಪಕ್ ಕುಮಾರ್ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂದು ಯಶವಂತ್ ದೀಪಿಕಾ ದಾಸ್ ತಾಯಿಗೆ ಕರೆ ಮಾಡಿ ತಿಳಿಸಿದ್ದಾನೆ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಬಡಾವಣೆ ಮಾಡಿಕೊಂಡಿದ್ದಾನೆ.ಜನರಿಗೆ ಮೋಸ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಯಶ್ವಂತ್ ಕರೆ ಮಾಡಿ ತಿಳಿಸಿದ್ದಾನೆ.ಅಲ್ಲದೆ ದೀಪಿಕಾ ದಾಸ್ ಗೂ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಹಣ ನೀಡಿದಿದ್ದರೆ ನಿಮ್ಮ ಹೆಸರು ಬರೆದು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸಾಲಗಾರರ ಕಾಟಕ್ಕೆ ನಿಮ್ಮ ಹೆಸರು ಬರೆದು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನಿಮ್ಮ ಹೆಸರು ಬರೆದು ಸಾಯುತ್ತೇನೆ ಎಂದು ಯಶ್ವಂತ್ ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ದೀಪಿಕಾ ದಾಸ್ ಅಳಿಯನ ಸ್ನೇಹಿತರಿಗೂ ಕರೆ ಮಾಡಿ ಯಶವಂತ್ ಬೆದರಿಕೆ ಹಾಕಿದ್ದಾನೆ.ಸುಮಾರು 7 ತಿಂಗಳಿನಿಂದ ಯಶವಂತ್ ಕರೆ ಮಾಡುತ್ತಿದ್ದಾನೆ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ತಾಯಿ ಪದ್ಮಲತಾ ದೂರು ಸಲ್ಲಿಸಿದ್ದಾರೆ.